ಜಿಂಡ್: ರಾಜ್ಯದಲ್ಲಿ ಐಎನ್ಎಲ್ಡಿ-ಬಿಎಸ್ಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರಿಗೆ ಉಚಿತ ವಿದ್ಯುತ್ ದೊರಕಲಿದೆ ಎಂದು ಹರಿಯಾಣ ವಿಧಾನಸಭಾ ವಿರೋಧ ಪಕ್ಷದ ನಾಯಕ ಮತ್ತು ಇಂಡಿಯನ್ ನ್ಯಾಷನಲ್ ಲೋಕ ದಳ (ಐಎನ್ಎಲ್ಡಿ) ಹಿರಿಯ ಮುಖಂಡ ಅಭಯ್ ಸಿಂಗ್ ಚೌಟಾಲಾ ಭರವಸೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಪಿಳ್ಳುಖೇರದಲ್ಲಿರುವ ಅನನ್ಯಾ ಮಂಡಿಯಲ್ಲಿ ರ್ಯಾಲಿಯೊಂದರಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಚೌಟಾಲಾ,  ಐಎನ್ಎಲ್ಡಿ ಮತ್ತು ಬಿಎಸ್ಪಿ ಒಕ್ಕೂಟದ ಸರಕಾರವು ಅಧಿಕಾರಕ್ಕೆ ಬಂದರೆ ರೈತರಿಗೆ ಉಚಿತ ವಿದ್ಯುತ್ ನೀಡಲಾಗುವುದು ಮತ್ತು ನಿರುದ್ಯೋಗಿಗಳಿಗೆ 15 ಸಾವಿರ ರೂ. ಮಾಸಿಕ ಭತ್ಯೆ ನೀಡಲಾಗುವುದು ಎಂದು ಹೇಳಿದರು.


ಸಟ್ಲೆಜ್ ಯಮುನಾ ಲಿಂಕ್ ಕಾಲುವೆ ನೀರಿನ ಮೇಲೆ ಹರಿಯಾಣ ರೈತರಿಗೆ ಹಕ್ಕಿದೆ.  ಹರಿಯಾಣ ಈ ಕಾಲುವೆಯ ನೀರನ್ನು ಪಡೆಯುವ ತನಕ, ಐಎನ್ಎಲ್ಡಿ-ಬಿಎಸ್ಪಿ ಚಳುವಳಿ ಮುಂದುವರಿಯುತ್ತದೆ ಎಂದು ಹೇಳಿದರು.


ವಾಸ್ತವವಾಗಿ, 5 ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮೊದಲು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹತ್ತು ದಿನಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಈ ಭರವಸೆಯು ಚುನಾವಣೆಯಲ್ಲಿ ದೊಡ್ಡ ಬದಲಾವಣೆ ಮಾಡಿತು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತು.  ಬಳಿಕ ಕಾಂಗ್ರೆಸ್ ತಕ್ಷಣವೇ ಮೂರು ರಾಜ್ಯಗಳಲ್ಲಿ ರೈತರ ಸಾಲಮನ್ನಾ ಮಾಡಿದೆ.


ಅದೇ ಸಮಯದಲ್ಲಿ, ಅಸ್ಸಾಂ ಸರ್ಕಾರ ರೂ. 600 ಕೋಟಿಗಳ ಕೃಷಿ ಸಾಲ ಮನ್ನಾ ಮಾಡಲು ಅನುಮೋದನೆ ನೀಡಿದೆ.