ನವದೆಹಲಿ: ಮಧ್ಯಪ್ರದೇಶದ ರತ್ಲಾಂನ ಬಿಜೆಪಿ ಲೋಕಸಭಾ ಅಭ್ಯರ್ಥಿ ಗುಮನ್ ಸಿಂಗ್ ದಾಮೋರ್ ಮಹಮ್ಮದ್ ಅಲಿ ಜಿನ್ನಾ ಪ್ರಧಾನಿಯಾಗಿದ್ದರೆ ಭಾರತ ದೇಶ ವಿಭಜನೆಯಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.



COMMERCIAL BREAK
SCROLL TO CONTINUE READING

ಚುನಾವಣ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು "ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಜವಾಹರಲಾಲ್ ನೆಹರು ಪ್ರಧಾನಿಯಾಗುವುದರ ಬಗ್ಗೆ ಅಡ್ಡಿಪಡಿಸದಿದ್ದರೆ, ದೇಶದ ವಿಭಜನೆಯು ನಡೆಯುತ್ತಿರಲಿಲ್ಲ, ಮೊಹಮ್ಮದ್ ಅಲಿ ಜಿನ್ನಾ ಒಬ್ಬ ವಕೀಲ ಮತ್ತು ವಿದ್ಯಾವಂತ ವ್ಯಕ್ತಿಯಾಗಿದ್ದರು."ಜಿನ್ನಾ ದೇಶದ ಪ್ರಧಾನ ಮಂತ್ರಿಯಾಗಿದ್ದಲ್ಲಿ, ದೇಶವು ವಿಭಜನೆಯಾಗುತ್ತಿಲ್ಲ, ವಿಭಜನೆಯ ಏಕೈಕ ಜವಾಬ್ದಾರಿ ಕಾಂಗ್ರೆಸ್ ಗೆ ಸೇರಿದ್ದು  ಇದೆ" ಎಂದು ಅವರು ಹೇಳಿದರು.


ದಾಮೊರ್ ಅವರ ಹೇಳಿಕೆಯು ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಭದ್ರತೆ ಕುರಿತಾಗಿ ಪ್ರಾಮುಖ್ಯತೆ ನೀಡುತ್ತಿರುವ ಬೆನ್ನಲ್ಲಿ ಈಗ ಅವರ ಹೇಳಿಕೆ ಬಿಜೆಪಿ ಮುಜುಗರ ತರಿಸಿದೆ.ಈಗಾಗಲೇ ಐದು ಹಂತಗಳಲ್ಲಿ ಲೋಕಸಭೆ ಚುನಾವಣೆಗಳು ಮುಗಿದಿದ್ದು, ಆರನೇ ಹಂತದ ಮತದಾನ ಇಂದು ನಡೆಯುತ್ತಿದೆ. ಕೊನೆಯ ಹಂತವು ಮೇ 19 ರಂದು ನಡೆಯಲಿದೆ. ಅಂತಿಮ ಫಲಿತಾಂಶ ಮೇ 23 ರಂದು ಘೋಷಣೆಯಾಗಲಿದೆ.