ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗದಿದ್ದರೆ ಶಾಶ್ವತವಾಗಿ ನನ್ನ ಟ್ವಿಟ್ಟರ್ ಖಾತೆ ಅಳಿಸುವೆ- ತಮಿಳು ನಟ ಸಿದ್ಧಾರ್ಥ
ಸದಾ ತಮ್ಮ ರಾಜಕೀಯ ನಿಲುವುಗಳಿಂದ ಟ್ವಿಟ್ಟರ್ ನಲ್ಲಿ ಗಮನ ಸೆಳೆಯುವ ತಮಿಳು ನಟ ಸಿದ್ಧಾರ್ಥ ಈಗ ನರೇಂದ್ರ ಎರಡನೇ ಭಾರಿಗೆ ಪ್ರಧಾನಿಯಾಗದಿದ್ದರೆ ತಮ್ಮ ಟ್ವಿಟ್ಟರ್ ಖಾತೆಯನ್ನು ಅಳಿಸುವುದಾಗಿ ಹೇಳಿಕೊಂಡಿದ್ದಾರೆ.
ನವದೆಹಲಿ: ಸದಾ ತಮ್ಮ ರಾಜಕೀಯ ನಿಲುವುಗಳಿಂದ ಟ್ವಿಟ್ಟರ್ ನಲ್ಲಿ ಗಮನ ಸೆಳೆಯುವ ತಮಿಳು ನಟ ಸಿದ್ಧಾರ್ಥ ಈಗ ನರೇಂದ್ರ ಎರಡನೇ ಭಾರಿಗೆ ಪ್ರಧಾನಿಯಾಗದಿದ್ದರೆ ತಮ್ಮ ಟ್ವಿಟ್ಟರ್ ಖಾತೆಯನ್ನು ಅಳಿಸುವುದಾಗಿ ಹೇಳಿಕೊಂಡಿದ್ದಾರೆ.
ಇಂದು ಲೋಕಸಭಾ ಫಲಿತಾಂಶದ ಹಿನ್ನಲೆಯಲ್ಲಿ ಬೆಳಗ್ಗೆಯಿಂದಲೇ ಭಾರಿ ಮುನ್ನಡೆ ಸಾಧಿಸಿದ್ದ ಬಿಜೆಪಿ 2014 ರ ಚುನಾವಣೆಗಿಂತಲೂ ಅಧಿಕ ಪ್ರಮಾಣದಲ್ಲಿ ಗೆಲುವು ಸಾಧಿಸಿದೆ. ಈ ಹಿನ್ನಲೆಯಲ್ಲಿ ಹಲವು ಸರಣಿ ಟ್ವೀಟ್ ಗಳನ್ನು ಮಾಡಿರುವ ತಮಿಳು ನಟ ಸಿದ್ಧಾರ್ಥ " ನರೇಂದ್ರ ಮೋದಿ ಎರಡನೇ ಭಾರಿಗೆ ಪ್ರಧಾನಿಯಾಗದಿದ್ದರೆ ನಾನು ನಿಶ್ಚಿತವಾಗಿ ಟ್ವಿಟ್ಟರ್ ಖಾತೆಯನ್ನು ಅಳಿಸಿ ಹಾಕುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
" ಒಂದು ವೇಳೆ ಪಗ್ಯಾ ಠಾಕೂರ್ ಗೆದ್ದು ಅತಿಸಿ ಸೋಲನ್ನು ಅನುಭವಿಸಿದ್ದೆ ಆದಲ್ಲಿ ನಮ್ಮ ಪ್ರಾಮುಖ್ಯತೆಗಳು ಹೇಗೆ ಇವೆ ಎನ್ನುವುದು ತಿಳಿಯುತ್ತದೆ" ಎಂದು ಇನ್ನೊಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.