ಅಗತ್ಯವಿದ್ದಾಗ ಮಧ್ಯಸ್ಥಿಕೆಗೆ ಸಿದ್ಧ, ಎರಡೂವರೆ ವರ್ಷಗಳ ಬಗ್ಗೆ ಯಾವುದೇ ಮಾತುಕತೆ ಇಲ್ಲ: ನಿತಿನ್ ಗಡ್ಕರಿ
ಮತ್ತೊಂದೆಡೆ, ಶಿವಸೇನೆ ಸಭೆ ತಲುಪಿದ ಸಂಜಯ್ ರೌತ್, ಸರ್ಕಾರ ರಚನೆಗೆ ಇನ್ನೂ ಸಮಯವಿದೆ, ಆ ಬಗ್ಗೆ ನಾವು ಕಾರ್ಯ ನಿರತರಾಗಿದ್ದೇವೆ, ನಿಮಗೂ ಶೀಘ್ರದಲ್ಲಿಯೇ ಮಾಹಿತಿ ನೀಡುತ್ತೇವೆ ಎಂದರು.
ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕುರಿತು ಬಿಜೆಪಿ ಮತ್ತು ಶಿವಸೇನೆ ನಡುವೆ ನಡೆಯುತ್ತಿರುವ ಗೊಂದಲಗಳ ನಡುವೆ ಅಗತ್ಯವಿದ್ದಾಗ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.
ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ಪುನರುಚ್ಚರಿಸಿದ ಗಡ್ಕರಿ, ನನಗೆ ತಿಳಿದ ಮಟ್ಟಿಗೆ, ಶಿವಸೇನೆಯೊಂದಿಗೆ ಎರಡೂವರೆ ವರ್ಷಗಳ ಬಗ್ಗೆ ಯಾವುದೇ ಮಾತುಕತೆ ಇಲ್ಲ. ಬಾಲಾಸಾಹೇಬ್ ಅವರೂ ಕೂಡ ಹೆಚ್ಚಿನ ಶಾಸಕರ ಬಲ ಇರುವವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.
ಗುರುವಾರ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ನಾಗ್ಪುರದಲ್ಲಿ ಭೇಟಿಯಾದ ನಂತರ ಮುಂಬೈಗೆ ಆಗಮಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಮುಂಬೈನ ವರ್ಲಿಯಲ್ಲಿರುವ ತಮ್ಮ ಮನೆಯಲ್ಲಿ ತಂಗಿದ್ದಾರೆ. ನವೀ ಮುಂಬಯಿಯ ಘನ್ಸೋಲಿ ಪ್ರದೇಶದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸಂಜೆ ಗಡ್ಕರಿ ಮುಂಬೈಗೆ ಬಂದಿದ್ದಾರೆ ಎನ್ನಲಾಗಿದೆ.
ಶಿವಸೇನೆ ಸಭೆ:
ಏತನ್ಮಧ್ಯೆ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಇಂದು ಪಕ್ಷದ ಜಿಲ್ಲಾ ಮುಖ್ಯಸ್ಥರು, ಸಂಸದರು ಮತ್ತು ಶಿವಸೇನೆಯ ಉನ್ನತ ಮುಖಂಡರ ಸಭೆ ಕರೆದಿದ್ದಾರೆ. ರಾಜ್ಯ ರೈತರ ಪರಿಸ್ಥಿತಿ ಬಗ್ಗೆ ಈ ಸಭೆ ನಡೆಸಲಾಗುತ್ತಿದೆ ಎಂದು ಶಿವಸೇನೆ ಮುಖಂಡರು ಹೇಳುತ್ತಿದ್ದಾರಾದರೂ, ರಾಜ್ಯ ರಾಜಕೀಯ ಪರಿಸ್ಥಿತಿಯನ್ನು ಈ ಸಭೆಯಲ್ಲಿ ಚರ್ಚಿಸಲಾಗುತ್ತಿದೆ.
ಮತ್ತೊಂದೆಡೆ, ಶಿವಸೇನೆ ಸಭೆ ತಲುಪಿದ ಸಂಜಯ್ ರೌತ್, ಸರ್ಕಾರ ರಚನೆಗೆ ಇನ್ನೂ ಸಮಯವಿದೆ, ಆ ಬಗ್ಗೆ ನಾವು ಕಾರ್ಯ ನಿರತರಾಗಿದ್ದೇವೆ, ನಿಮಗೂ ಶೀಘ್ರದಲ್ಲಿಯೇ ಮಾಹಿತಿ ನೀಡುತ್ತೇವೆ ಎಂದರು.