ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮತ್ತೆ ಗೆದ್ದರೆ ಬಿಹಾರ ಸೋತಂತೆ-ಚಿರಾಗ್ ಪಾಸ್ವಾನ್
ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೇಲೆ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೇಲೆ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ 15 ವರ್ಷಗಳ ಅಧಿಕಾರದಲ್ಲಿದ್ದರೂ ಜಮೀನುಗಳಿಗೆ ನಲಿ-ಗಲಿ ಬಗ್ಗೆ ಮಾತನಾಡುವುದು ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ. ನಲಿ-ಗಲಿ ಅಭಿವೃದ್ದಿಯ ಮಾನದಂಡವಲ್ಲ ಈ ಕಾರ್ಯಗಳೆಲ್ಲವೂ ಕೂಡ ಈ ಹಿಂದೆ ಆಗಬೇಕಾಗಿತ್ತು ಎಂದು ಅವರು ಪಾಟ್ನಾದಲ್ಲಿ ಬಿಹಾರದ ಕುರಿತ ಅಭಿವೃದ್ದಿ ದಾಖಲೆಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಹೇಳಿದರು.ಜೆಡಿಯು ವಿರುದ್ಧದ ವಾಗ್ದಾಳಿ ನಡೆಸಿದ ಚಿರಾಗ್, "ನಿತೀಶ್ ಕುಮಾರ್ ಗೆದ್ದರೆ, ಬಿಹಾರ ಸೋಲುತ್ತದೆ" ಎಂದು ಹೇಳಿದರು.
ಚಿರಾಗ್ ಪಾಸ್ವಾನ್ ಬಿಜೆಪಿ ನಾಯಕರ ಹೆಸರನ್ನು ತೆಗೆದುಕೊಂಡು ಜನರ ದಾರಿ ತಪ್ಪಿಸುತ್ತಿದ್ದಾರೆ -ಪ್ರಕಾಶ್ ಜಾವಡೇಕರ್
ಎಲ್ಜೆಪಿ ಈ ಬಾರಿ 137 ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ ಮತ್ತು ಜೆಡಿಯು ಸ್ಪರ್ಧಿಸುತ್ತಿರುವ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಬಂಡಾಯದ ಅಭ್ಯರ್ಥಿಗಳು ಕಣಕ್ಕೆ ಇಳಿಸಿರುವುದು ಬಿಹಾರ ಚುನಾವಣೆಗೆ ಹೊಸ ತಿರುವು ನೀಡಿದೆ.ಬಿಹಾರದಂತಹ ಕೃಷಿ ರಾಜ್ಯದಲ್ಲಿ, ಪ್ರತಿ ಜಮೀನಿಗೆ ಮೊದಲನೇ ದಿನದಿಂದಲೇ ನೀರು ಸರ್ಕಾರದ ಆದ್ಯತೆಯಾಗಿರಬೇಕು ಮತ್ತು ಅದಕ್ಕಾಗಿ ಇಷ್ಟು ದಿನ ಕಾಯುವ ಅಗತ್ಯವಿರಲಿಲ್ಲ ಎಂದು ಚಿರಾಗ್ ಹೇಳಿದರು.
ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಗೆ ಟಾಂಗ್ ಕೊಟ್ಟ ಬಿಹಾರ್ ಸಿಎಂ ನಿತೀಶ್ ಕುಮಾರ್
ಮುಖ್ಯಮಂತ್ರಿಯ ವಿರುದ್ಧ ಭಾರಿ ಆಕ್ರೋಶವಿದೆ, ಆದರೆ ಒಮ್ಮೆ ನಿತೀಶ್ ಕುಮಾರ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ್ದಕ್ಕಾಗಿ ಮತ್ತು ಎಲ್ಲವನ್ನೂ ತಿಳಿದಿದ್ದರೂ ಅವರನ್ನು ಬೆಂಬಲಿಸಿದ್ದಕ್ಕಾಗಿ ನಾನು ಬಿಜೆಪಿಗೆ ಮನ್ನಣೆ ನೀಡುತ್ತೇನೆ" ಎಂದು ಅವರು ಹೇಳಿದರು.
ಸಿಎಂ ಯುವಕರ ಬಗ್ಗೆ ಯಾವುದೇ ಯೋಜನೆಗಳನ್ನು ಹೊಂದಿಲ್ಲ. ಲ್ಯಾಂಡ್ ಲಾಕ್ ರಾಜ್ಯ ಎಂಬ ನೆಪದಲ್ಲಿ ಕೈಗಾರಿಕೆಗಳನ್ನು ರಾಜ್ಯಕ್ಕೆ ತರಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೂ ಪ್ರತಿಯೊಬ್ಬರೂ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ಅನೇಕ ರಾಜ್ಯಗಳು ಲ್ಯಾಂಡ್ ಲಾಕ್ ಆಗಿವೆ, ಆದರೆ ಅವು ಕೈಗಾರಿಕೀಕರಣದ ಮೂಲಕ ಉದ್ಯೋಗವನ್ನು ಸೃಷ್ಟಿಸಿವೆ ಮತ್ತು ಹೆಚ್ಚು ವೇಗವಾಗಿ ಅಭಿವೃದ್ಧಿಗೊಂಡಿವೆ ”ಎಂದು ಅವರು ಹೇಳಿದರು.