2029ರಲ್ಲಿ ʼಒಂದು ರಾಷ್ಟ್ರ ಒಂದು ಚುನಾವಣೆʼ ಜಾರಿಗೆ ತಂದ್ರೆ ಯಾವ 3 ಕಾನೂನು ಬದಲಾಯಿಸಬೇಕಾಗುತ್ತದೆ?
ಏನಿದು ಒನ್ ನೇಷನ್ ಒನ್ ಎಲೆಕ್ಷನ್?: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ʼಒನ್ ನೇಷನ್ ಒನ್ ಎಲೆಕ್ಷನ್ʼ ವಿಚಾರವಾಗಿ 62 ಪಕ್ಷಗಳನ್ನು ಸಂಪರ್ಕಿಸಿತ್ತು. ಪ್ರತಿಕ್ರಿಯಿಸಿದ 47 ರಾಜಕೀಯ ಪಕ್ಷಗಳ ಪೈಕಿ 32 ಪಕ್ಷಗಳು ಏಕಕಾಲಕ್ಕೆ ಚುನಾವಣೆ ನಡೆಸುವ ವಿಚಾರವನ್ನು ಬೆಂಬಲಿಸಿದರೆ, 15 ಪಕ್ಷಗಳು ವಿರೋಧಿಸಿವೆ. ಒಟ್ಟು 15 ಪಕ್ಷಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ
ಲೋಕಸಭೆ ಚುನಾವಣೆ 2024: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರ ಪ್ರಧಾನಿ ಮೋದಿ ಸರ್ಕಾರದ ಕಾರ್ಯಸೂಚಿಯಲ್ಲಿ ಒಳಗೊಂಡಿರುವ ʼಒಂದು ರಾಷ್ಟ್ರ ಒಂದು ಚುನಾವಣೆʼಗೆ ಸಂಬಂಧಿಸಿದಂತೆ ತಮ್ಮ 18,000 ಪುಟಗಳ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದರು. ಈ ಉನ್ನತ ಮಟ್ಟದ ಸಮಿತಿಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವಂತೆ ಶಿಫಾರಸು ಮಾಡಿದೆ. ಇದರ ನಂತರ 100 ದಿನಗಳಲ್ಲಿ ಸ್ಥಳೀಯ ಪುರಸಭೆ ಚುನಾವಣೆ ನಡೆಸಬಹುದು ಎಂದು ಅಭಿಪ್ರಾಯಪಡಲಾಗಿದೆ.
ಯಾವುದೇ ರಾಜ್ಯದಲ್ಲಿ ಅವಿಶ್ವಾಸ ನಿರ್ಣಯ ಅಥವಾ ಯಾವುದೇ ರೀತಿಯ ಪರಿಸ್ಥಿತಿ ಎದುರಾದರೆ, ಲೋಕಸಭೆಯನ್ನು ರಚಿಸಲು ಹೊಸದಾಗಿ ಚುನಾವಣೆ ನಡೆಸಬಹುದು ಎಂದು ಸಮಿತಿಯು ತನ್ನ ಶಿಫಾರಸುಗಳಲ್ಲಿ ಹೇಳಿದೆ. ಲೋಕಸಭೆಗೆ ಚುನಾವಣೆ ನಡೆದಾಗ, ಆ ಸದನದ ಅವಧಿಯು ತಕ್ಷಣವೇ ಹಿಂದಿನ ಲೋಕಸಭೆಯ ಅವಧಿಯ ಉಳಿದ ಅವಧಿಗೆ ಇರುತ್ತದೆ ಎಂದು ಸಮಿತಿ ಹೇಳಿದೆ.
ಇದನ್ನೂ ಓದಿ: ನೂತನ ಚುನಾವಣಾ ಆಯುಕ್ತರಾಗಿ ಸುಖ್ಬೀರ್ ಸಂಧು, ಜ್ಞಾನೇಶ್ ಕುಮಾರ್ ನೇಮಕ
ಯಾವ ಕಾನೂನು ತಿದ್ದುಪಡಿ ಮಾಡಬೇಕು?
ರಾಜ್ಯ ವಿಧಾನಸಭೆಗಳಿಗೆ ಹೊಸ ಚುನಾವಣೆಗಳು ನಡೆದಾಗ, ಅಂತಹ ಹೊಸ ಅಸೆಂಬ್ಲಿಗಳ ಅವಧಿಯು - ಮುಂಚಿತವಾಗಿ ವಿಸರ್ಜಿಸದಿದ್ದರೆ - ಲೋಕಸಭೆಯ ಸಂಪೂರ್ಣ ಅವಧಿಗೆ ಇರುತ್ತದೆ. ಆದರೆ ಇಂತಹ ವ್ಯವಸ್ಥೆಯನ್ನು ಜಾರಿಗೆ ತರಲು ಸಂವಿಧಾನದ 83ನೇ ವಿಧಿ (ಸಂಸತ್ತಿನ ಸದನಗಳ ಅವಧಿ) ಮತ್ತು 172ನೇ ವಿಧಿ (ರಾಜ್ಯ ಶಾಸಕಾಂಗಗಳ ಅವಧಿ)ಗೆ ತಿದ್ದುಪಡಿ ತರಬೇಕಾಗುತ್ತದೆ ಎಂದೂ ಸಮಿತಿ ಹೇಳಿದೆ. ಈ ಸಾಂವಿಧಾನಿಕ ತಿದ್ದುಪಡಿಯನ್ನು ರಾಜ್ಯಗಳು ಅಂಗೀಕರಿಸುವ ಅಗತ್ಯವಿಲ್ಲವೆಂದು ಸಮಿತಿ ಹೇಳಿದೆ.
ರಾಜ್ಯ ಚುನಾವಣಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಚುನಾವಣಾ ಆಯೋಗವು ಒಂದೇ ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿಯನ್ನು ಸಿದ್ಧಪಡಿಸುವಂತೆ ಸಮಿತಿಯು ಶಿಫಾರಸು ಮಾಡಿದೆ. ಇದಕ್ಕಾಗಿ ಮತದಾರರ ಪಟ್ಟಿಗೆ ಸಂಬಂಧಿಸಿದ ಕಲಂ 325ಕ್ಕೆ ತಿದ್ದುಪಡಿ ತರಬಹುದು. ಪ್ರಸ್ತುತ ಚುನಾವಣಾ ಆಯೋಗವು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸುತ್ತದೆ ಆದರೆ ಪುರಸಭೆ ಮತ್ತು ಪಂಚಾಯತ್ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯು ರಾಜ್ಯ ಚುನಾವಣಾ ಆಯೋಗಗಳ ಮೇಲಿದೆ.
ಯಾವ ಪಕ್ಷಗಳು ವಿರೋಧಿಸುತ್ತವೆ, ಯಾವುದರ ಪರವಾಗಿವೆ?
ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು ʼಒಂದು ರಾಷ್ಟ್ರ ಒಂದು ಚುನಾವಣೆʼ ವಿಚಾರವಾಗಿ 62 ಪಕ್ಷಗಳನ್ನು ಸಂಪರ್ಕಿಸಿತ್ತು. ಪ್ರತಿಕ್ರಿಯಿಸಿದ 47 ರಾಜಕೀಯ ಪಕ್ಷಗಳ ಪೈಕಿ 32 ಪಕ್ಷಗಳು ಏಕಕಾಲಕ್ಕೆ ಚುನಾವಣೆ ನಡೆಸುವ ವಿಚಾರವನ್ನು ಬೆಂಬಲಿಸಿದರೆ, 15 ಪಕ್ಷಗಳು ವಿರೋಧಿಸಿವೆ. ಒಟ್ಟು 15 ಪಕ್ಷಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಪಕ್ಷಗಳು ವಿರೋಧಿಸಿವೆ
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (AAP), ಬಹುಜನ ಸಮಾಜ ಪಕ್ಷ (BSP) ಮತ್ತು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ (CPI-M), ಪ್ರಾದೇಶಿಕ ಪಕ್ಷಗಳಾದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF), ತೃಣಮೂಲ ಕಾಂಗ್ರೆಸ್, ಆಲ್ ಇಂಡಿಯಾ ಮಜ್ಲಿಸ್-ಇ- ಇತ್ತೆಹಾದುಲ್ ಮುಸ್ಲಿಮೀನ್.(AIMIM), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI), ಡಿಎಂಕೆ, ನಾಗಾ ಪೀಪಲ್ಸ್ ಫ್ರಂಟ್ ಮತ್ತು ಸಮಾಜವಾದಿ ಪಕ್ಷಗಳು ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾಪವನ್ನು ವಿರೋಧಿಸಿವೆ. ಇತರ ಪಕ್ಷಗಳಲ್ಲಿ ಸಿಪಿಐ (ML) ಲಿಬರೇಶನ್ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದನ್ನು ವಿರೋಧಿಸಿದವು. ರಾಷ್ಟ್ರೀಯ ಲೋಕ ಜನತಾ ದಳ, ಭಾರತೀಯ ಸಮಾಜ ಪಕ್ಷ, ಗೂರ್ಖಾ ನ್ಯಾಷನಲ್ ಲಿಬರಲ್ ಫ್ರಂಟ್, ಹಿಂದೂಸ್ತಾನಿ ಅವಾಮ್ ಮೋರ್ಚಾ, ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಅಜಿತ್ ಪವಾರ್) ಕೂಡ ವಿರೋಧಿಸಿರುವ ರಾಜಕೀಯ ಪಕ್ಷಗಳಲ್ಲಿ ಸೇರಿವೆ.
ಈ ಪಕ್ಷಗಳು ಪರವಾಗಿವೆ
ಬಿಜೆಪಿ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP), ಎಐಎಡಿಎಂಕೆ, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್, ಅಪ್ನಾ ದಳ (ಸೋನೆಲಾಲ್), ಅಸ್ಸಾಂ ಗಣ ಪರಿಷತ್, ಬಿಜು ಜನತಾದಳ, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಮಿಜೋ ನ್ಯಾಷನಲ್ ಫ್ರಂಟ್, ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ, ಶಿವ ಸೇನೆ, ಜನತಾ ದಳ (ಯುನೈಟೆಡ್), ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ, ಶಿರೋಮಣಿ ಅಕಾಲಿದಳ ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ನಿರ್ಣಯವನ್ನು ಬೆಂಬಲಿಸಿವೆ.
ಇದನ್ನೂ ಓದಿ: ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಮುಸ್ಲಿಮರಿಗೂ ಹಕ್ಕಿದೆ: ಅಮಿತ್ ಶಾ
ಈ ಪಕ್ಷಗಳು ಪ್ರತಿಕ್ರಿಯಿಸಿಲ್ಲ
ಭಾರತ್ ರಾಷ್ಟ್ರ ಸಮಿತಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಜನತಾ ದಳ (ಜಾತ್ಯತೀತ), ಜಾರ್ಖಂಡ್ ಮುಕ್ತಿ ಮೋರ್ಚಾ, ಕೇರಳ ಕಾಂಗ್ರೆಸ್ (M), ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್ ಪವಾರ್), ರಾಷ್ಟ್ರೀಯ ಜನತಾ ದಳ, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ, ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್, ತೆಲುಗು ದೇಶಂ ಪಕ್ಷ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.