ಹೊಸದಿಲ್ಲಿ: ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ ನಡುವಿನ ಮೈತ್ರಿ ಸಾಧ್ಯತೆಗಳ ನಡುವೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಶೀಲಾ ದೀಕ್ಷಿತ್ ಚೆನ್ನಾಗಿ ಕಾರ್ಯನಿರ್ವಹಿಸಿದ್ದರೆ ನಾವು ಹೊಸ ಪಕ್ಷ ಸ್ಥಾಪಿಸುವ ಅಗತ್ಯವಿರಲಿಲ್ಲ ಎಂದು ಕೇಜ್ರಿವಾಲ್ ಹೇಳಿದರು.


COMMERCIAL BREAK
SCROLL TO CONTINUE READING

ಶೀಲಾ ಜಿ ಅದೇ ಪರಿಸ್ಥಿತಿಯಲ್ಲಿ ದೆಹಲಿಯಲ್ಲಿ ಸರ್ಕಾರವನ್ನು ನಡೆಸುತ್ತಾರೆ ಎಂದು ಹಲವರು ಹೇಳುತ್ತಾರೆ. ಆದರೆ ಅವರು ಸರ್ಕಾರದ ಕೆಲಸವನ್ನು ಚೆನ್ನಾಗಿ ನಡೆಸಲಿಲ್ಲ. ಅವರು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ನಾವು ಹೊಸ ಪಕ್ಷವನ್ನು ಆರಂಭಿಸುವ ಅಗತ್ಯವಿರಲಿಲ್ಲ. ಆಸ್ಪತ್ರೆಗಳೆಲ್ಲವೂ ಅವರ ಆಡಳಿತದಲ್ಲಿ ಕೆಟ್ಟ ಸ್ಥಿತಿಯಲ್ಲಿವೆ ಎಂದು ಮುಖ್ಯಮಂತ್ರಿ ಕೇಜ್ರಿವಾಲ್  ಸಾರ್ವಜನಿಕ ರ್ಯಾಲಿಯಲ್ಲಿ ತಿಳಿಸಿದ್ದಾರೆ.


ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಮೋದಿ ಸರಕಾರಕ್ಕೆ ನಾವು ಹೊಸ ಶಾಲೆಗಳನ್ನು ತೆರೆಯಲು, ಆಸ್ಪತ್ರೆಗಳನ್ನು ನಿರ್ಮಿಸಲು ಮತ್ತು ಮೊಹಲ್ಲಾ ಕ್ಲಿನಿಕ್ಸ್ ಅನ್ನು ನಿರ್ಮಿಸಬೇಕೆಂದು ಬಯಸುತ್ತೇವೆ, ದೆಹಲಿಯಲ್ಲಿ ಸಿ.ಸಿ.ಟಿ.ವಿ. ಕ್ಯಾಮರಾ ಸ್ಥಾಪನೆಗೆ ಸಂಬಂಧಿಸಿದ ಕಡತವನ್ನು ಮೋದಿ ಸರ್ಕಾರ ಇದುವರೆಗೂ ರವಾನಿಸಿಲ್ಲ.ಪ್ರತಿಯೊಂದು ಕೆಲಸಕ್ಕೆ ನಾವು ಕೇಂದ್ರ ಸರಕಾರದಿಂದ ಅನುಮತಿಯನ್ನು ತೆಗೆದುಕೊಳ್ಳಬೇಕು.ಪ್ರತಿ ರಾಜ್ಯವು ಸಂಪೂರ್ಣ ಅಧಿಕಾರವನ್ನು ಹೊಂದಿದೆ.ಆದರೆ ದೆಹಲಿಗೆ ಆ ಭಾಗ್ಯವಿಲ್ಲ ಎಂದು ಕೇಜ್ರಿವಾಲ್ ತಿಳಿಸಿದರು.