ನವದೆಹಲಿ: ಪಾಕಿಸ್ತಾನದಲ್ಲಿ ನವಜೋತ್ ಸಿಂಗ್ ಸಿಧು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲ್ಲುತ್ತಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಕರ್ತಾರಪುರ್ ಕಾರಿಡಾರ್ ನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ "ನನ್ನ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನವಜೋತ್ ಸಿಂಗ್ ಸಿಧು ಭಾಗವಹಿಸಿ ಹಿಂದುರಿಗಿದ ನಂತರ ಸಾಕಷ್ಟು ಟೀಕೆಗಳಿಗೆ ಒಳಗಾಗಿರುವುದನ್ನು ನಾನು ಕೇಳಿದ್ದೇನೆ. ಅವರನ್ನು ಏಕೆ ಟೀಕೆ ಮಾಡಲಾಯಿತು ಎನ್ನುವುದರ ಬಗ್ಗೆ ನನಗೆ ತಿಳಿದಿಲ್ಲ ಅವರು ಶಾಂತಿ ಮತ್ತು ಸಹೋದರತ್ವದ ಬಗ್ಗೆ ಮಾತನಾಡಿದ್ದಾರೆ.ಅವರು ಪಾಕಿಸ್ತಾನದ ಪಂಜಾಬ್ ನಲ್ಲಿ ಚುನಾವಣೆಗೆ ಬಂದು ಸ್ಪರ್ಧಿಸಿದರೆ ಅವರು ಗೆಲ್ಲಲಿದ್ದಾರೆ ಎಂದು ಅವರು ತಿಳಿಸಿದರು.



ಇದೇ ಸಂದರ್ಭದಲ್ಲಿ ಭಾರತದ ಜೊತೆ ಪಾಕ್ ಸಂಬಂಧ ವೃದ್ದಿಸಲು ಬಯಸಿದೆ ಎಂದು ತಿಳಿಸಿದ ಇಮ್ರಾನ್ ಖಾನ್ " ಭಾರತವು ಒಂದು ಹೆಜ್ಜೆಯನ್ನು ಮುಂದಕ್ಕೆ ಇಟ್ಟರೆ ನಾವು ಸ್ನೇಹಕ್ಕಾಗಿ ಎರಡು ಹೆಜ್ಜೆಗಳನ್ನು ತೆಗೆದುಕೊಳ್ಳುತ್ತೇವೆ ನಾನು ಪ್ರಧಾನ ಮಂತ್ರಿ, ನನ್ನ ರಾಜಕೀಯ ಪಕ್ಷ, ನಮ್ಮ ರಾಜಕೀಯ ಪಕ್ಷಗಳು, ನಮ್ಮ ಸೈನ್ಯ, ನಮ್ಮ ಎಲ್ಲಾ ಸಂಸ್ಥೆಗಳು ಒಂದೇ ಪುಟದಲ್ಲಿವೆ" ಎಂದು ಇಮ್ರಾನ್ ಖಾನ್ ಹೇಳಿದರು. 


ಇದೇ ವೇಳೆ ಕರ್ತಾರ್ಪುರ್ ಕಾರಿಡಾರ್ಗೆ ಅನುಮತಿ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ ನವಜೋತ್ ಸಿಂಗ್  "ಮೇರಾ ಯಾರ್, ದಿಲ್ದರ್, ಇಮ್ರಾನ್ ಖಾನ್," ಎಂದು ಪಾಕ್ ಪ್ರಧಾನಿಯನ್ನು  " ಹೃದಯವಂತ ಸ್ನೇಹಿತ" ಎಂದು ಹೊಗಳಿದರು.