ಪ್ರಧಾನಿ ಮೋದಿ ಇವಿಎಂ ಬಗ್ಗೆ ಸರ್ವಪಕ್ಷದ ಸಭೆ ಕರೆದಿದ್ದರೆ ಖಂಡಿತ ಭಾಗವಹಿಸುತ್ತಿದ್ದೆ- ಮಾಯಾವತಿ
ಒಂದು ದೇಶ ಒಂದು ಚುನಾವಣೆ ಕುರಿತಾಗಿ ಪ್ರಧಾನಿ ಮೋದಿ ಕರೆದಿರುವ ಸಭೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ` ಈ ಸಭೆ ಎಲೆಕ್ಟ್ರಾನಿಕ್ ಮತದಾನ ಯಂತ್ರ ಅಥವಾ ಇವಿಎಂಗಳ ಬಗ್ಗೆ ಇದ್ದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಬಹುದಿತ್ತು ಎಂದು ಹೇಳಿದ್ದಾರೆ.
ನವದೆಹಲಿ: ಒಂದು ದೇಶ ಒಂದು ಚುನಾವಣೆ ಕುರಿತಾಗಿ ಪ್ರಧಾನಿ ಮೋದಿ ಕರೆದಿರುವ ಸಭೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ " ಈ ಸಭೆ ಎಲೆಕ್ಟ್ರಾನಿಕ್ ಮತದಾನ ಯಂತ್ರ ಅಥವಾ ಇವಿಎಂಗಳ ಬಗ್ಗೆ ಇದ್ದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಬಹುದಿತ್ತು ಎಂದು ಹೇಳಿದ್ದಾರೆ.
ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯು ಬಡತನದಂತಹ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಯೋಜನೆಯನ್ನು ಹೊಂದಿದೆ ಎಂದು ಅವರು ಆರೋಪಿಸಿದ್ದಾರೆ. "ಒಂದು ರಾಷ್ಟ್ರ, ಒಂದು ಚುನಾವಣೆ", ಈ ವರ್ಷ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯ 150 ವರ್ಷಾಚರಣೆ ಹಾಗೂ 2022 ಕ್ಕೆ 75 ವರ್ಷಗಳ ಸ್ವಾತಂತ್ರ್ಯದ ದಿನಾಚರಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆದ ಸರ್ವಪಕ್ಷ ಸಭೆಗೆ ಕೆಲವೇ ಗಂಟೆಗಳ ಮೊದಲು ಮಾಯಾವತಿ ಹೇಳಿಕೆ ಬಂದಿದೆ.
"ಮತಪತ್ರದ ಬದಲಾಗಿ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ಮೂಲಕ ಚುನಾವಣೆ ನಡೆಸುವ ವಿಧಾನವು ಪ್ರಜಾಪ್ರಭುತ್ವ ಮತ್ತು ದೇಶದ ಸಂವಿಧಾನಕ್ಕೆ ನಿಜವಾದ ಅಪಾಯವಾಗಿದೆ" ಎಂದು ಅವರು ಹೇಳಿದ್ದಾರೆ.ಈ ಸಂದರ್ಭಗಳಲ್ಲಿ, ಇಂತಹ ಗಂಭೀರ ವಿಷಯದ ಬಗ್ಗೆ ಸಭೆ ನಡೆಸಿದಲ್ಲಿ, ನಾನು ಖಂಡಿತವಾಗಿ ಅದರಲ್ಲಿ ಭಾಗವಹಿಸಿದ್ದೆ" ಎಂದು ಮಾಯಾವತಿ ಟ್ವೀಟ್ ನಲ್ಲಿ ಹೇಳಿದ್ದಾರೆ.
"ಯಾವುದೇ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಎಂದಿಗೂ ಸಮಸ್ಯೆಯಾಗುವುದಿಲ್ಲ, ಖರ್ಚು ಮತ್ತು ದುಂದುಗಾರಿಕೆಯ ದೃಷ್ಟಿಯಿಂದ ಚುನಾವಣೆಗಳನ್ನು ಅಳೆಯಬಾರದು" ಎಂದು ಅವರು ಹೇಳಿದರು."ಒಂದು ರಾಷ್ಟ್ರ, ಒಂದು ಚುನಾವಣೆ" ವಾಸ್ತವವಾಗಿ ರಾಷ್ಟ್ರೀಯ ಸಮಸ್ಯೆಗಳಾದ ಬಡತನ, ಹಣದುಬ್ಬರ, ನಿರುದ್ಯೋಗ ಮತ್ತು ಹಿಂಸಾಚಾರದ ಹೆಚ್ಚಳದಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವಾಗಿದೆ ಮತ್ತು ಇದು ಕೇವಲ ಭ್ರಮೆ "ಎಂದು ಅವರು ಆರೋಪಿಸಿದರು.