ಮೂತ್ರವನ್ನು ಸಂಗ್ರಹಿಸಿದರೆ ಯೂರಿಯಾ ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ- ನಿತೀನ್ ಗಡ್ಕರಿ
ಮೂತ್ರವನ್ನು ಸಂಗ್ರಹಿಸಿದರೆ ಯೂರಿಯಾ ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ಹೇಳಿದ್ದಾರೆ.
ನವದೆಹಲಿ: ಮೂತ್ರವನ್ನು ಸಂಗ್ರಹಿಸಿದರೆ ಯೂರಿಯಾ ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ಹೇಳಿದ್ದಾರೆ.
ನಾಗ್ಪುರ ಪುರಸಭೆಯ ಮೇಯರ್ ಇನ್ನೋವೇಶನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಈ ವಿಚಾರವನ್ನು ಪ್ರಸ್ತಾಪಿಸಿದರು.ನಾವೀನ್ಯತೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡುವಾಗ, ಜೈವಿಕ ಇಂಧನಗಳನ್ನು ನೈಸರ್ಗಿಕ ತ್ಯಾಜ್ಯದಿಂದ ಹೇಗೆ ಪಡೆಯಬಹುದು ಎಂಬುದರ ಬಗ್ಗೆ ಈ ಉದಾಹರಣೆ ನೀಡಿ ಜೈವಿಕ ಇಂಧನವನ್ನು ತಯಾರಿಸಲು ಮಾನವನ ಮೂತ್ರ ಸಹ ಉಪಯುಕ್ತವಾಗಿದೆ. ಇದು ಅಮೋನಿಯಮ್ ಸಲ್ಫೇಟ್ ಮತ್ತು ಸಾರಜನಕವನ್ನು ಸಹ ನೀಡುತ್ತದೆ ಎಂದು ತಿಳಿಸಿದರು
"ನಾನು ವಿಮಾನ ನಿಲ್ದಾಣಗಳಲ್ಲಿ ಮೂತ್ರವನ್ನು ಸಂಗ್ರಹ ಮಾಡಲು ಹೇಳಿದ್ದೇನೆ.ನಾವು ಯೂರಿಯಾವನ್ನು ಆಮದು ಮಾಡಿಕೊಳ್ಳುತ್ತೇವೆ, ಆದರೆ ನಾವು ಇಡೀ ದೇಶದ ಮೂತ್ರವನ್ನು ಸಂಗ್ರಹಿಸಲು ಪ್ರಾರಂಭಿಸಿದಲ್ಲಿ ಯೂರಿಯಾವನ್ನು ನಾವು ಆಮದು ಮಾಡಬೇಕಾಗಿಲ್ಲ, ಅದು ತುಂಬಾ ಸಾಮರ್ಥ್ಯ ಹೊಂದಿದೆ ಮತ್ತು ಏನೂ ವ್ಯರ್ಥವಾಗುವುದಿಲ್ಲ" ಎಂದು ಸಚಿವರು ಹೇಳಿದರು.ಇನ್ನು ಮುಂದುವರೆದು "ಇತರ ಜನರು ನನ್ನೊಂದಿಗೆ ಸಹಕಾರ ನೀಡುವುದಿಲ್ಲ, ಏಕೆಂದರೆ ನನ್ನ ಆಲೋಚನೆಗಳು ಅದ್ಭುತವಾಗಿದೆ" ಎಂದು ಹೇಳಿದರು
ಕೆಲವು ವರ್ಷಗಳ ಹಿಂದೆ ಗಡ್ಕರಿ ಅವರು ತಮ್ಮ ಮೂತ್ರವನ್ನು ಸಂಗ್ರಹಿಸಿ ಅದನ್ನು ದೆಹಲಿಯಲ್ಲಿ ತಮ್ಮ ಅಧಿಕೃತ ಬಂಗಲೆಯಲ್ಲಿ ಉದ್ಯಾನಕ್ಕಾಗಿ ರಸಗೊಬ್ಬರವಾಗಿ ಬಳಸುತ್ತಿದ್ದಾರೆ ಎಂದು ಹೇಳುವ ಅಚ್ಚರಿ ಮೂಡಿಸಿದ್ದರು.