ನವದೆಹಲಿ : ಕರೋನಾ (Coronavirus) ವಿರುದ್ಧ ಮಹಾ ಲಸಿಕಾ ಅಭಿಯಾನ ನಡೆಯುತ್ತಿದೆ. ಮೇ 1 ರಿಂದ  ಈ ಅಭಿಯಾನ ಆರಂಭವಾಗಲಿದೆ. ಈ ನಡುವೆಯೂ, ಕೆಲವರು ವ್ಯಾಕ್ಸಿನ್ ನಲ್ಲಿ (Vaccination) ಸೈಡ್ ಅಫೆಕ್ಟ್ ಇರುತ್ತವೆ ಎಂದು ಗಾಬರಿಯಾಗಿದ್ದಾರೆ. ವ್ಯಾಕ್ಸಿನ್ ಹಾಕಲು ಹಿಂದೇಟು ಹಾಕಿದ್ದಾರೆ. ಈ ಬಗ್ಗೆ ವಿಶ್ವದ ಟಾಪ್ ಮಹಾಮಾರಿ ತಜ್ಞರು ಏನು ಹೇಳಿದ್ದಾರೆ ನೋಡೋಣ.


COMMERCIAL BREAK
SCROLL TO CONTINUE READING

ವಿಶ್ವದ ಟಾಪ್ ತಜ್ಞರ ಸಲಹೆ ಏನು..?
ಆಂಥನಿ ಫೌಚಿ, ವಿಶ್ವದ ಶ್ರೇಷ್ಠ ಮಹಾಮಾರಿ ತಜ್ಞ,  ಅಮೇರಿಕದ ಶ್ವೇತಭವನದಲ್ಲಿ ಮೆಡಿಕಲ್ ಅಡ್ವೈಸರ್. ಅಂಥನಿ ಫೌಚಿ ನ್ಯೂಸ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ ಪ್ರಕಾರ, ವ್ಯಾಕ್ಸಿನ್ (Vaccine) ನಮ್ಮ ದೇಹವನ್ನು ಪ್ರವೇಶಿಸುವಾಗ ಅದು ಖಂಡಿತವಾಗಿ ಪ್ರತಿಕ್ರಿಯೆ ನೀಡುತ್ತದೆ. ಮತ್ತು ಪ್ರತಿಕ್ರಿಯೆ ನೀಡಲೇ ಬೇಕು. ವ್ಯಾಕ್ಸಿನ್ ನೀಡಿದ ನಂತರ ನಿಮ್ಮಲ್ಲಿ ನೋವು, ಜ್ವರ (Fever) , ಚಳಿ, ತಲೆ ನೋವು ಇತ್ಯಾದಿ ಕಾಣಿಸಿಕೊಂಡರೆ ವ್ಯಾಕ್ಸಿನ್ ನಿಮ್ಮ ದೇಹದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದೇ ಅರ್ಥ.  ಅದು ಅಡ್ಡ ಪರಿಣಾಮ (Side effect) ಅಲ್ಲ ಎಂದು ಹೇಳುತ್ತಾರೆ ಫೌಚಿ. 


ಇದನ್ನೂ ಓದಿ : Coronavirus: Covishield ಬಳಿಕ ಇದೀಗ Covaxin ದರದಲ್ಲಿಯೂ ಇಳಿಕೆಯ ಘೋಷಣೆ ಮಾಡಿದ ಭಾರತ್ ಬಯೋಟೆಕ್


ವ್ಯಾಕ್ಸಿನ್ ದೇಹದೊಳಗೆ ಪ್ರವೇಶಿಸಿದಾಗ  ಅದು ನಮ್ಮ ದೇಹದಲ್ಲಿ ವೈರಸ್ (Virus) ಕೊಲ್ಲುವ ತಾಕತ್ತನ್ನು ಬಲಿಷ್ಠಗೊಳಿಸುತ್ತದೆ. ವೈರಸನ್ನು ಕೊಲ್ಲಲು ಮತ್ತು ವೈರಸ್ ಹರಡದೇ ಇರುವ ಪ್ರಕ್ರಿಯೆಗೆ ದೇಹವನ್ನು ಸಜ್ಜುಗೊಳಿಸುತ್ತದೆ.  ಇದೇ ಪ್ರಕ್ರಿಯೆಯನ್ನು ಕೆಲವರು ಸೈಡ್ ಅಫೆಕ್ಟ್ ಎಂದು ತಪ್ಪು ತಿಳಿದುಕೊಂಡಿದ್ದಾರೆ ಎನ್ನುತ್ತಾರೆ ಡಾ. ಫೌಚಿ. ಕರೋನಾ ವ್ಯಾಕ್ಸಿನ್  (Corona vaccine) ಹಾಕಿಸಿಕೊಂಡರೆ ಇಂಜೆಕ್ಷನ್ ಚುಚ್ಚಿಸಿಕೊಂಡ ಜಾಗ ಕೆಂಪಾಗುತ್ತದೆ. ಅಲ್ಲಿ ನೋವು ಇರುತ್ತದೆ. ನೋವು, ಸುಸ್ತು, ಜ್ವರ, ತಲೆನೋವು, ಮಾಂಸಖಂಡ ನೋವು, ಜ್ವರ, ಚಳಿ ಇತ್ಯಾದಿ ಅನುಭವಕ್ಕೆ ಬರುತ್ತದೆ. ಇದ್ಯಾವುದೂನಿಮಗೆ ಅನುಭವಕ್ಕೆ ಬರಲಿಲ್ಲ ಎಂದರೆ ದೇಹದಲ್ಲಿ ವ್ಯಾಕ್ಸಿನ್ ಪ್ರಭಾವ ಬೀರುತ್ತಿಲ್ಲ ಎಂದರ್ಥ. 


ಲಸಿಕೆ ಚುಚ್ಚಿಸಿಕೊಂಡಾಗ ನನಗೂ ಸುಸ್ತು, ದೇಹದಲ್ಲಿ ನೋವು, ಚಳಿ ಉಂಟಾಗಿತ್ತು. ಒಂದೆರಡು ದಿನಗಳಲ್ಲಿ ಅವೆಲ್ಲಾ ವಾಸಿಯಾಗಿತ್ತು ಎಂದು ಹೇಳುತ್ತಾರೆ ಡಾ. ಫೌಚಿ. ಇದು ಅಪಾಯದ ಮುನ್ಸೂಚನೆ ಅಲ್ಲ  ಎನ್ನುತ್ತಾರೆ ಡಾ. ಫೌಚಿ. 


ಇದನ್ನೂ ಓದಿ : Coronavirus: ದೇಶದಲ್ಲಿ ಕರೋನಾ ಸೋಂಕಿನ ಸುನಾಮಿ 24 ಗಂಟೆಗಳಲ್ಲಿ 3.79 ಲಕ್ಷ ಪ್ರಕರಣ, ಸಾವಿನ ಸಂಖ್ಯೆಯಲ್ಲೂ ದಾಖಲೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.