ನವ ದೆಹಲಿ: ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಕೌನ್ಸಿಲ್ (CISCE)  10 ನೇ ಮತ್ತು ದ್ವಿತೀಯ ಪಿಯುಸಿ(12 ನೇ ತರಗತಿಗಳಲ್ಲಿ) ವಿವಿಧ ವಿಷಯಗಳಲ್ಲಿ ತೇರ್ಗಡೆಯಾಗಳು ಬೇಕಾದ ಕನಿಷ್ಠ ಅಂಕಗಳನ್ನು ಬದಲಿಸಿದೆ. ಈಗ 10 ನೇ ತರಗತಿಯ ವಿದ್ಯಾರ್ಥಿಗಳು ತೇರ್ಗಡೆ ಹೊಂದಲು ಕನಿಷ್ಠ 33 ಪ್ರತಿಶತ ಮತ್ತು ದ್ವಿತೀಯ ಪಿಯುಸಿ ತೇರ್ಗಡೆ ಹೊಂದಲು ಶೇ. 35 ಅಂಕಗಳನ್ನು ಬಂದರೆ ಪಾಸ್ ಆಗ್ತೀರ. CISCE ಮುಖ್ಯ ಕಾರ್ಯದರ್ಶಿ ಹಾಗೂ ಕಾರ್ಯ ನಿರ್ವಾಹಕ ಗೆರ್ರಿ ಅರತೂರ್ ದೇಶದ ಎಲ್ಲಾ ಬೋರ್ಡ್ ಗಳಲ್ಲೂ ಏಕರೂಪತೆಯನ್ನು ತರುವ ಉದ್ದೇಶದಿಂದ ಪರೀಕ್ಷಾ ಮಂಡಳಿಯು ಈ ಬದಲಾವಣೆಯನ್ನು ತರುತ್ತಿದೆ. ಇದು 2018-19 ಸಾಲಿನಿಂದ ಜಾರಿಯಾಗಲಿದೆ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

ಅಧಿಸೂಚನೆ ಹೊರಡಿಸಲಾಗಿದೆ:


HRD ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ CISCE ಕಳೆದ ಕೆಲವು ದಿನಗಳಲ್ಲಿ ಈ ಬದಲಾವಣೆಯನ್ನು ಮಾಡಿದೆ. ಹೊಸ ಬದಲಾವಣೆಯಡಿಯಲ್ಲಿ 10 ನೇ ಮತ್ತು 12 ನೇ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಈಗ ಪ್ರತಿ ವಿಷಯದಲ್ಲೂ 33 ಮತ್ತು 35 ಪ್ರತಿಶತ ಅಂಕಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಮೊದಲು ವಿದ್ಯಾರ್ಥಿಗಳು ಶೇ. 35 ಮತ್ತು 40 ಅಂಕಗಳನ್ನು ಪಡೆಯಬೇಕಾಗಿತ್ತು. ಎಲ್ಲಾ ಅಂಗಸಂಸ್ಥೆಗಳ ಶಾಲೆಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮಂಡಳಿಯು ಈ ಸಂದರ್ಭದಲ್ಲಿ ಪ್ರಕಟಣೆಯನ್ನು ಜಾರಿಗೊಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


ಸಚಿವಾಲಯ ಸಹ ಈ ಕುರಿತು ಸಲಹೆಗಳನ್ನು ನೀಡಿದೆ:


9 ನೇ ಮತ್ತು 11 ನೇ ತರಗತಿಗಳಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೂ ಇದೇ ಮಾದರಿಯಲ್ಲಿ ಅಂಕಗಳನ್ನು ನೀಡಬೇಕು ಎಂದು ಶಾಲೆಗಳಿಗೆ ನೀಡಲಾದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಎಂದು ಮಂಡಳಿಯು ತಿಳಿಸಿದೆ. ಸಚಿವಾಲಯ ನೀಡಿದ ಸಲಹೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಬದಲಾವಣೆಯನ್ನು ಮಾಡಲಾಗಿದೆ, ಅದರ ಅಡಿಯಲ್ಲಿ ದೇಶದ ಎಲ್ಲಾ ಮಂಡಳಿಗಳು ಏಕರೂಪತೆಯನ್ನು ಕಾಪಾಡಲು ಕೇಳಿಕೊಳ್ಳಲಾಗಿದೆ.


ಆಂತರಿಕ ಪರೀಕ್ಷೆಗಳಲ್ಲಿ ಈ ಬದಲಾವಣೆಯನ್ನು ಅನ್ವಯಿಸಲು ಬೋರ್ಡ್ ಎಲ್ಲಾ ಶಾಲೆಗಳನ್ನು ಕೇಳಿದೆ. ಕೌನ್ಸಿಲ್ ಸಭೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದೊಂದಿಗೆ ಮಂಡಳಿಯಲ್ಲಿ ಪಾಲ್ಗೊಂಡಿದೆ ಎಂದು ಮಂಡಳಿಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ, ಇದರಲ್ಲಿ ಇಂಟರ್ ಬೋರ್ಡ್ ಎಕ್ಸಿಕ್ಯೂಟಿವ್ ಗ್ರೂಪ್ (ಐಬಿಡಬ್ಲ್ಯೂಜಿ) ಸದಸ್ಯರಾಗಿದ್ದಾರೆ.


ವಿವಿಧ ಪರೀಕ್ಷಾ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಲು ಮತ್ತು ಅದರಂತೆ ಸಲಹೆಗಳನ್ನು ಸೂಚಿಸಲು ಈ ಗುಂಪನ್ನು ರಚಿಸಲಾಗಿದೆ. IBWG ಈ ನಿಟ್ಟಿನಲ್ಲಿ ಕೆಲವು ಶಿಫಾರಸುಗಳನ್ನು ಮಾಡಿದೆ ಮತ್ತು ಅದರ ಪ್ರಕಾರ ಭಾರತದಲ್ಲಿನ ಎಲ್ಲಾ ಮಂಡಳಿಗಳಲ್ಲಿ ಇದೇ ರೀತಿಯ ಅಂಗೀಕಾರ ಇರಬೇಕು ಎಂದು ನಿರ್ಧರಿಸಲಾಯಿತು.