Platform Ticket ಮೂಲಕವೂ ರೈಲು ಪ್ರಯಾಣ ಸಾಧ್ಯ ; ತಿಳಿದಿರಲಿ ಭಾರತೀಯ ರೈಲ್ವೆಯ ಪ್ರಮುಖ ನಿಯಮ
ನಿಮ್ಮಲ್ಲಿ ಕಾಯ್ದಿರಿಸಿದ ಟಿಕೆಟ್ ಇಲ್ಲದೆ ಹೋದರೆ, ಪ್ಲಾಟ್‌ಫಾರ್ಮ್ ಟಿಕೆಟ್‌ನೊಂದಿಗೆ ರೈಲು ಹತ್ತಬಹುದು. ನಂತರ ಟಿಟಿಇ ಬಳಿ ಹೋಗಿ ಪ್ಲಾಟ್ ಫಾರ್ಮ್ ಟಿಕೆಟ್ ತೋರಿಸಿ ಟಿಕೆಟ್ ಪಡೆದುಕೊಳ್ಖಬಹುದು. ಈ ನಿಯಮವನ್ನು ರೈಲ್ವೆ ಜಾರಿಗೆ ತಂದಿದೆ.
ನವದೆಹಲಿ : ರೈಲಿನಲ್ಲಿ ಪ್ರಯಾಣಿಸಬೇಕಾದರೆ, ತಿಂಗಳುಗಳ ಮುಂಚೆಯೇ ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ. ಇದ್ದಕ್ಕಿದ್ದಂತೆ ಕೆಲವು ಕೆಲಸಕ್ಕಾಗಿ ಬೇರೆ ಸ್ಥಳಕ್ಕೆ ಪ್ರಯಾಣಿಸಬೇಕಾದರೆ ಮತ್ತು ಮೀಸಲಾತಿ ಲಭ್ಯವಿಲ್ಲದಿದ್ದಾಗ ಜನರಿಗೆ ತೊಂದರೆ ಉಂಟಾಗುತ್ತದೆ. ಆಗ ತತ್ಕಾಲ್ ನಲ್ಲಿ ಟಿಕೆಟ್ ಬುಕ್ (Tatkal ticket book) ಮಾಡಬೇಕಾಗುತ್ತದೆ. ಇದರ ಹೊರತಾಗಿಯೂ ಇನ್ನೊಂದು ಮಾರ್ಗವಿದೆ. ಅದೇ ಪ್ಲಾಟ್ ಫಾರ್ಮ್ ಟಿಕೆಟ್.
ಪ್ಲಾಟ್‌ಫಾರ್ಮ್ ಟಿಕೆಟ್ ಮೂಲಕ ಪ್ರಯಾಣಿಸಬಹುದು:
ನಿಮ್ಮಲ್ಲಿ ಕಾಯ್ದಿರಿಸಿದ ಟಿಕೆಟ್ ಇಲ್ಲದೆ ಹೋದರೆ, ಪ್ಲಾಟ್‌ಫಾರ್ಮ್ ಟಿಕೆಟ್‌ನೊಂದಿಗೆ ರೈಲು ಹತ್ತಬಹುದು. ನಂತರ ಟಿಟಿಇ (TTE) ಬಳಿ ಹೋಗಿ ಪ್ಲಾಟ್ ಫಾರ್ಮ್ ಟಿಕೆಟ್ ತೋರಿಸಿ ಟಿಕೆಟ್ ಪಡೆದುಕೊಳ್ಖಬಹುದು. ಈ ನಿಯಮವನ್ನು ರೈಲ್ವೆ (Indian Railways Rules) ಜಾರಿಗೆ ತಂದಿದೆ.
ಇದನ್ನೂ ಓದಿ : Covaxin ಗೆ ಹೆಚ್ಚಿನ ದರ ವಿಧಿಸಲು ಕೇಂದ್ರಕ್ಕೆ Bharat Biotech ಆಗ್ರಹ
ಪ್ರಯಾಣಿಸುವ ಮೊದಲು ಈ ನಿಯಮಗಳು ತಿಳಿದಿರಲಿ :
ಸೀಟು ಖಾಲಿ ಇಲ್ಲದಿದ್ದರೆ, ಕೆಲವೊಮ್ಮೆ ಟಿಟಿಇ (TTE) ನಿಮಗೆ ಕಾಯ್ದಿರಿಸಿದ ಸೀಟು ನೀಡಲು ನಿರಾಕರಿಸಬಹುದು. ಆದರೆ, ಪ್ರಯಾಣಿಸದಂತೆ ತಡೆಯುವುದು ಸಾಧ್ಯವಿಲ್ಲ. ಕಾಯ್ದಿರಿಸಿದ ಟಿಕೆಟ್ ಇಲ್ಲದೆ ಹೋದಲ್ಲಿ, ಪ್ರಯಾಣಿಕರಿಗೆ 250 ರೂ ಗಳ ದಂಡವನ್ನು ವಿಧಿಸಲಾಗುತ್ತದೆ.
ಪ್ಲಾಟ್‌ಫಾರ್ಮ್ ಟಿಕೆಟ್ :
ಪ್ಲಾಟ್‌ಫಾರ್ಮ್ ಟಿಕೆಟ್ (Platform ticket) ಯಿದ್ದರೆ ಪ್ರಯಾಣಿಕರು ರೈಲಿನೊಳಗೆ ಹತ್ತಬಹುದು. ಪ್ರಯಾಣಿಕ ಯಾವ ನಿಲ್ದಾಣದಿಂದ ಪ್ಲಾಟ್‌ಫಾರ್ಮ್ ಟಿಕೆಟ್ ತೆಗೆದುಕೊಂಡಿರುತ್ತಾನೆ ಅದೇ ನಿಲ್ದಾಣದಿಂದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಶುಲ್ಕವನ್ನು ವಿಧಿಸುವಾಗ, ನಿರ್ಗಮನ ನಿಲ್ದಾಣವನ್ನು ಸಹ ಅದೇ ನಿಲ್ದಾಣವೆಂದು ಪರಿಗಣಿಸಲಾಗುತ್ತದೆ. ಯಾವ ವರ್ಗದಲ್ಲಿ ಪ್ರಯಾಣಿಸುತ್ತೇವಯೋ ಅದೇ ವರ್ಗದ ಹಣ ವಸೂಲಿ ಮಾಡಲಾಗುತ್ತದೆ.
ಟಿಕೆಟ್ ಕಳೆದು ಹೋದರೆ ಏನು ಮಾಡಬೇಕು:
ನೀವು ಇ-ಟಿಕೆಟ್ (e ticket)ತೆಗೆದುಕೊಂಡಿದ್ದರೆ ಮತ್ತು ರೈಲು ಹತ್ತಿದ ನಂತರ, ಟಿಕೆಟ್ ಕಳೆದುಹೋಗಿದೆ ಎಂದು ನಿಮಗೆ ತಿಳಿದಿದ್ದರೆ, ಟಿಟಿಇ ಗೆ 50 ರೂ.ಗಳ ದಂಡವನ್ನು ಪಾವತಿಸಿ ನಿಮ್ಮ ಟಿಕೆಟ್ ಅನ್ನು ಪಡೆಯಬಹುದು. ರೈಲಿನಲ್ಲಿ ಪ್ರಯಾಣಿಸುವ ಮೊದಲು ಈ ನಿಯಮಗಳನ್ನು ನೆನಪಿನಲ್ಲಿಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.