ನವದೆಹಲಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸಚಿವ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಂಡಾಯಗಾರರಿಗೆ ಪಕ್ಷ ತೊರೆದು ಚುನಾವಣೆ ಎದುರಿಸಲು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಸವಾಲು ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧದ ದಂಗೆಯು ಸುಮಾರು ಒಂದು ವಾರದವರೆಗೆ ಮುಂದುವರಿದಂತೆ ಬಿಜೆಪಿ ಆಡಳಿತದ ಅಸ್ಸಾಂನಲ್ಲಿ ಬೀಡುಬಿಟ್ಟಿರುವ ಶಾಸಕರಿಗೆ ಬಹಿರಂಗ ಸವಾಲು ಹಾಕಿರುವ ಅವರು "ನಿಮಗೆ ಧೈರ್ಯವಿದ್ದರೆ ಶಿವಸೇನೆ ಬಿಟ್ಟು ಪಕ್ಷಾಂತರ ಮಾಡಿ ಹೋರಾಡಿ. ನಾವು ಮಾಡಿದ್ದು ತಪ್ಪು, ಉದ್ಧವ್ ಠಾಕ್ರೆ ನಾಯಕತ್ವ ತಪ್ಪು ಮತ್ತು ನಾವೆಲ್ಲರೂ ತಪ್ಪು ಎಂದು ನೀವು ಭಾವಿಸಿದರೆ, ರಾಜೀನಾಮೆ ನೀಡಿ ಚುನಾವಣೆ ಎದುರಿಸಿ. ಅದಕ್ಕೆ ನಾವು ಸಿದ್ಧರಿದ್ದೇವೆ," ಎಂದು ಅವರು ಬಂಡಾಯ ಶಾಸಕರಿಗೆ ಸವಾಲು ಹಾಕಿದ್ದಾರೆ.


ಇದನ್ನೂ ಓದಿ: 'ಎಷ್ಟು ದಿನ ಅಂತಾ ನೀವು ಅಡಗಿಕೊಂಡು ಕುಳಿತಿರುತ್ತಿರಿ?' ಬಂಡಾಯ ಶಾಸಕರಿಗೆ ಶಿವಸೇನಾ ಎಚ್ಚರಿಕೆ


"ನೀವು ಇಲ್ಲಿ ನಿಂತಿರುವ ಜನರನ್ನು ನೋಡುತ್ತೀರಿ, ಅವರು ಇಲ್ಲಿ ಮಹಾರಾಷ್ಟ್ರದಲ್ಲಿ ಪ್ರಚಾರ ಮಾಡಲು ಸಾಧ್ಯವಾಗುವುದಿಲ್ಲ, ಶಿವಸೇನೆಯ ಬಂಡಾಯ ಶಾಸಕರು ಮಾಡಿದ ದ್ರೋಹವನ್ನು ನಾವು ಮರೆಯುವುದಿಲ್ಲ, ನಾವು ಗೆಲ್ಲುವುದು ಖಚಿತ ಎಂದು ಠಾಕ್ರೆ ನಿನ್ನೆ ಮುಂಬೈನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಹೇಳಿದರು. ಅವರು ಈ ಬಿಕ್ಕಟ್ಟನ್ನು ಸತ್ಯ ಮತ್ತು ಸುಳ್ಳಿನ ನಡುವಿನ ಯುದ್ಧ ಎಂದು ಕರೆದಿದ್ದಾರೆ.


ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಿಂಧೆ ಅವರು ಸುಮಾರು 40 ಸೇನಾ ಶಾಸಕರ ಬೆಂಬಲವನ್ನು ಪ್ರತಿಪಾದಿಸುವುದರೊಂದಿಗೆ ಮಹಾ ವಿಕಾಸ್ ಅಘಾಡಿ ಸರ್ಕಾರವು ಈಗ ಪತನದ ಅಂಚಿನಲ್ಲಿದೆ.


ಇದನ್ನೂ ಓದಿ: ಈ ನದಿಯಲ್ಲಿ ಹೇರಳವಾಗಿ ಸಿಗುತ್ತೆ ಚಿನ್ನ: ಗೋಲ್ಡನ್‌ ನದಿಯಿಂದ ಜೀವನ ಸಾಗಿಸುತ್ತಾರೆ ಇಲ್ಲಿನ ಜನ


ಬಂಡಾಯ ಬಣವು ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಜೊತೆಗಿನ ಸೇನಾ ಮೈತ್ರಿಯನ್ನು "ಅಸ್ವಾಭಾವಿಕ" ಎಂದು ಬಣ್ಣಿಸಿದೆ ಮತ್ತು ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಪಕ್ಷವು ಬಿಜೆಪಿಯೊಂದಿಗೆ ತನ್ನ ಮೈತ್ರಿಯನ್ನು ಪುನಃಸ್ಥಾಪಿಸಲು ಒತ್ತಾಯಿಸಿತು.ಶಿವಸೇನೆ ಇದುವರೆಗೆ ಶಿಂಧೆ ಸೇರಿದಂತೆ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದು, ಅವರಿಗೆ ನೋಟಿಸ್ ನೀಡಲಾಗಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.