ನವದೆಹಲಿ: ಫೇಸ್ ಮಾಸ್ಕ್ ಧರಿಸುವ ಬಗ್ಗೆ ನೀವು ಸಹ ನಿರ್ಲಕ್ಷ್ಯ ವಹಿಸುತ್ತಿದ್ದರೆ, ಇದು ನಿಮ್ಮ ಜೀವಕ್ಕೆ ದೊಡ್ಡ ಕಂಟಕವಾಗಬಹುದು. ಇದು ಇತರರಿಗೂ ಕಷ್ಟವಾಗಬಹುದು, ಏಕೆಂದರೆ  ಕರೋನವೈರಸ್ ಬಗ್ಗೆ ನಾವು ಮಾಡುವ ಒಂದು ಸಣ್ಣ ತಪ್ಪು ದೊಡ್ಡ ಆಘಾತವನ್ನೇ ಉಂಟುಮಾಡಬಹುದು.  ಅದರಲ್ಲೂ ಮುಖ್ಯವಾಗಿ ನೀವು ಪ್ರಯಾಣಿಸುವಾಗ ಇದು ಹೆಚ್ಚು ಮಾರಕವೆಂದು ಸಾಬೀತುಪಡಿಸಬಹುದು. ಆದ್ದರಿಂದ ಏವಿಯೇಷನ್ ​​ರೆಗ್ಯುಲೇಟರ್ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(DGCA) ವಾಯು ಪ್ರಯಾಣಿಕರಿಗೆ ಫೇಸ್ ಮಾಸ್ಕ್ ಬಗ್ಗೆ ಕಠಿಣ ಸೂಚನೆಗಳನ್ನು ನೀಡಿದೆ.


COMMERCIAL BREAK
SCROLL TO CONTINUE READING

ಮಾಸ್ಕ್ ಧರಿಸುವ ಬಗ್ಗೆ ಡಿಜಿಸಿಎ ಹೊಸ ಸೂಚನೆಗಳು:
1. ಕ್ಯಾಬಿನ್ ಸಿಬ್ಬಂದಿ ಅಥವಾ ಫ್ಲೈಟ್ ಕಮಾಂಡರ್ ಪ್ರಯಾಣಿಕನು ಉದ್ದೇಶಪೂರ್ವಕವಾಗಿ ಫೇಸ್ ಮಾಸ್ಕ್  (Mask) ಧರಿಸಿಲ್ಲವೆಂದು ಕಂಡುಕೊಂಡರೆ ಮತ್ತು ಇದರಿಂದಾಗಿ ಇತರ ಪ್ರಯಾಣಿಕರಿಗೆ ಬೆದರಿಕೆಯನ್ನುಂಟುಮಾಡಿದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.
2. ವಿಮಾನಯಾನವು ಅಂತಹ ಪ್ರಯಾಣಿಕರನ್ನು 'ನೋ ಫ್ಲೈ ಲಿಸ್ಟ್'ಗೆ ಸೇರಿಸುತ್ತದೆ. ಅಂದರೆ  ಮುಂದಿನ ಬಾರಿ ಅವರಿಗೆ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ.
3. ಪ್ರಯಾಣಿಕನು ಮಾಸ್ಕ್ ಅನ್ನು ತೆಗೆದುಹಾಕಬೇಕಾದರೆ, ಅವನು ಇದಕ್ಕೆ ಕೆಲವು ದೃಢವಾದ ಕಾರಣಗಳನ್ನು ಹೊಂದಿರಬೇಕು.


ವಿಮಾನಗಳಲ್ಲಿ ಬದಲಾಗಲಿದೆ ಈ ನಿಯಮ


ಇದಕ್ಕಾಗಿ ಯಾವುದೇ ಆದೇಶ ಹೊರಡಿಸುವುದಿಲ್ಲ ಎಂದು ಡಿಜಿಸಿಎ ಹೇಳಿದೆ. ವಿಮಾನಯಾನ ಸಂಸ್ಥೆಗಳ ಕ್ಯಾಬಿನ್ ಸಿಬ್ಬಂದಿಗೆ ಕ್ರಮ ಕೈಗೊಳ್ಳಲು ಸಾಕಷ್ಟು ಅಧಿಕಾರವಿದೆ. ಈ ಅಧಿಕಾರವನ್ನು ಡಿಜಿಜಿಸಿಎ ನೀಡಿದೆ. ಡಿಜಿಸಿಎ ನಿಯಮಗಳ ಪ್ರಕಾರ ಯಾವುದೇ ವಿಮಾನಯಾನ ಸಂಸ್ಥೆಯು ಅಸಭ್ಯವಾಗಿ ವರ್ತಿಸುವ ಪ್ರಯಾಣಿಕರನ್ನು 'ನೋ ಫ್ಲೈ ಲಿಸ್ಟ್' ಪಟ್ಟಿಯಲ್ಲಿ ಸೇರಿಸಬಹುದು. 


ಕರೋನಾವೈರಸ್ ಸಾಂಕ್ರಾಮಿಕದಿಂದಾಗಿ ಮಾರ್ಚ್ 23 ರಿಂದ ದೇಶದ ಎಲ್ಲಾ ವಿಮಾನಗಳನ್ನು ನಿಲ್ಲಿಸಲಾಗಿತ್ತು. ಮೇ 25 ರಿಂದ ಎರಡು ತಿಂಗಳ ನಂತರ ದೇಶೀಯ ವಿಮಾನಯಾನಗಳನ್ನು ಪುನರಾರಂಭಿಸಲಾಗಿದೆ. ಆದಾಗ್ಯೂ ಈಗ ಕೇವಲ 45% ಸಾಮರ್ಥ್ಯದೊಂದಿಗೆ ಸೇವೆಗಳನ್ನು ಪುನರಾರಂಭಿಸಲಾಗಿದೆ.