ಇಂದು ಪ್ರತಿಯೊಂದು ಮನೆಯಲ್ಲಿ  ಗ್ಯಾಸ್ ಸಿಲಿಂಡರ್‌ಗಳನ್ನು ಬಳಸಲಾಗುತ್ತದೆ. ಇದಲ್ಲದೆ ಸರ್ಕಾರದ ಉಜ್ವಾಲಾ ಯೋಜನೆ ಅಡಿ ಒಲೆ ಹೊರತುಪಡಿಸಿ ಎಲ್ಲರಿಗೂ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುತ್ತಿದೆ. ಆದಾಗ್ಯೂ, ಸಿಲಿಂಡರ್ ಅನ್ನು ಬಳಸುವ ಹೆಚ್ಚಿನ ಜನರಿಗೆ ಅದರ ನಿಯಮಗಳು ತಿಳಿದಿರುವುದಿಲ್ಲ. ಅಂತಹುದೇ ಒಂದು ನಿಯಮದಡಿ ಯಾವುದೇ ಗ್ಯಾಸ್ ಏಜೆನ್ಸಿ ನಿಮಗೆ ಸಿಲಿಂಡರ್ ಅನ್ನು ಮನೆಗೆ ತಲುಪಿಸದಿದ್ದರೆ, ಸಿಲಿಂಡರ್ ಪಡೆಯಲು ನೀವು ಗೊಡೌನ್ ಏಜೆನ್ಸಿಗೆ ಹೋಗಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಆ ಗ್ಯಾಸ್ ಏಜೆನ್ಸಿಯಿಂದ ಸಿಲಿಂಡರ್ ತಲುಪಿಸುವ ನಿಗದಿತ ಮೊತ್ತವನ್ನು ವಾಪಸ್ ಪಡೆಯಬಹುದು. ಇದನ್ನು ಹಿಂತಿರುಗಿಸಲು ಯಾವುದೇ ಗ್ಯಾಸ್ ಏಜೆನ್ಸಿ ವ್ಯಕ್ತಿ ನಿಮಗೆ ನಿರಾಕರಿಸುವಂತಿಲ್ಲ.

COMMERCIAL BREAK
SCROLL TO CONTINUE READING

ಏನಿದೆ ಈ ನಿಯಮ?
ನೀವು ಸಂಪರ್ಕ ಹೊಂದಿರುವ ಯಾವುದೇ ಏಜೆನ್ಸಿಯ ಗೊಡೌನ್‌ನಿಂದ ಸಿಲಿಂಡರ್‌ ಅನ್ನು ನೀವೇ ತಂದರೆ, ನೀವು ಏಜೆನ್ಸಿಯಿಂದ 19 ರೂಪಾಯಿ 50 ಪೈಸೆ ಹಿಂಪಡೆಯಬಹುದು. ಯಾವುದೇ ಏಜೆನ್ಸಿ ಈ ಮೊತ್ತವನ್ನು ನೀಡಲು ನಿರಾಕರಿಸುವಂತಿಲ್ಲ. ವಾಸ್ತವದಲ್ಲಿ, ನಿಮಗೆ ಈ ಮೊತ್ತವನ್ನು ವಿತರಣಾ ಶುಲ್ಕವಾಗಿ ವಿಧಿಸಲಾಗುತ್ತದೆ. ಈ ಮೊತ್ತವನ್ನು ಎಲ್ಲಾ ಕಂಪನಿಗಳ ಸಿಲಿಂಡರ್‌ಗಳಿಗೆ ನಿಗದಿಪಡಿಸಲಾಗಿದೆ. ಈ ಮೊದಲು ವಿತರಣಾ ಶುಲ್ಕ 15 ರೂಪಾಯಿ ಆಗಿತ್ತು, ಆದರೆ ಇದೀಗ ಈ ಮೊತ್ತವನ್ನು 19 ರೂಪಾಯಿ 50 ಪೈಸೆಗಳಿಗೆ ಹೆಚ್ಚಿಸಲಾಗಿದೆ.


ಹಣ ನೀಡಲು ನಿರಾಕರಿಸಿದರೆ ಇಲ್ಲಿ ದೂರು ದಾಖಲಿಸಿ
ಯಾವುದೇ ಏಜೆನ್ಸಿ ಆಪರೇಟರ್ ಈ ಮೊತ್ತವನ್ನು ನಿಮಗೆ ನೀಡಲು ನಿರಾಕರಿಸಿದರೆ, ನೀವು ಟೋಲ್ ಫ್ರೀ ಸಂಖ್ಯೆ 18002333555 ನಲ್ಲಿ ದೂರು ನೀಡಬಹುದು. ಪ್ರಸ್ತುತ ಗ್ರಾಹಕರಿಗೆ 12 ಸಬ್ಸಿಡಿ ಸಿಲಿಂಡರ್‌ಗಳನ್ನು ನೀಡಲಾಗುತ್ತಿದೆ. ಈ ಕೋಟಾ ಪೂರ್ಣಗೊಂಡ ಬಳಿಕ ನೀವು ಮಾರುಕಟ್ಟೆ ದರದಲ್ಲಿ ಸಿಲಿಂಡರ್‌ಗಳನ್ನು ಖರೀದಿಸಬೇಕು.


ನೀವು ಉಚಿತವಾಗಿ ಸಿಲಿಂಡರ್ ರೆಗ್ಯುಲೇಟರ್ ಬದಲಾಯಿಸಬಹುದು
ನಿಮ್ಮ ಸಿಲಿಂಡರ್‌ನ ರೆಗ್ಯುಲೇಟರ್  ಸೋರಿಕೆಯಾಗುತ್ತಿದ್ದರೆ ನೀವು ಅದನ್ನು ಏಜೆನ್ಸಿಗೆ ಭೇಟಿ ನೀಡಿ ಉಚಿತವಾಗಿ ಬದಲಾಯಿಸಬಹುದು. ಇದಕ್ಕಾಗಿ, ನೀವು ಏಜೆನ್ಸಿ ಚಂದಾದಾರಿಕೆ ಚೀಟಿ ಹೊಂದಿರಬೇಕು. ಇದಕ್ಕಾಗಿ ನೀವು ಸೋರಿಕೆ ಕಾರಣವಾದ ರೆಗ್ಯುಲೇಟರ್ ಅನ್ನು ನಿಮ್ಮೊಂದಿಗೆ ಏಜೆನ್ಸಿಗೆ ತೆಗೆದುಕೊಂಡು ಹೋಗಬೇಕು. ಚಂದಾದಾರಿಕೆ ಚೀಟಿಯ ನಂಬರ್ ಮತ್ತು ರೆಗ್ಯುಲೇಟರ್ ಸಂಖ್ಯೆಯ ಜೊತೆಗೆ ಹೋಲಿಕೆ ಮಾಡಲಾಗುತ್ತದೆ. ಎರಡೂ ಸಂಖ್ಯೆಗಳು ಹೊಲಿಕೆಯಾದಾಗ ನಿಮ್ಮ ರೆಗ್ಯುಲೇಟರ್ ಅನ್ನು ಬದಲಾಯಿಸಲಾಗುತ್ತದೆ. ಇದಕ್ಕಾಗಿ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.


ಹಾನಿಗೊಳಗಾದ ರೆಗ್ಯೂಲೆಟರ್ ಅನ್ನು ಸಹ ಬದಲಾಯಿಸಬಹುದು
ಯಾವುದೇ ಕಾರಣದಿಂದ ಒಂದು ವೇಳೆ ನಿಮ್ಮ ರೆಗ್ಯುಲೇಟರ್ ಹಾನಿಗೊಳಗಾಗಿದ್ದರೆ, ಅದನ್ನೂ ಸಹ ಏಜೆನ್ಸಿ ಬದಲಾಯಿಸಿ ಕೊಡುತ್ತದೆ.ಆದರೆ, ಇದಕ್ಕಾಗಿ ಏಜೆನ್ಸಿ ಕಂಪನಿಯು ನಿಮ್ಮಿಂದ ಸುಂಕದ ರೂಪದಲ್ಲಿ ಹಣ ಪಡೆದುಕೊಳ್ಳುತ್ತದೆ. ಈ ಮೊತ್ತವು 150 ರೂಪಾಯಿಗಳವರೆಗೆ ಇರುತ್ತದೆ.


ಕಳುವಾದ ಸಂದರ್ಭದಲ್ಲಿಯೂ ನೀವು ಹೊಸ ರೆಗ್ಯುಲೇಟರ್ ಪಡೆಯಬಹುದು
ನೀವು ನಿಮ್ಮ ರೆಗ್ಯುಲೇಟರ್ ಕಳುವಾದ ಸಂದರ್ಭದಲ್ಲಿಯೂ ಕೂಡ ಹೊಸ ರೆಗ್ಯುಲೇಟರ್ ಪಡೆಯಬಹುದು. ಇದಕ್ಕಾಗಿ ಮೊದಲು ನೀವು ಪೊಲೀಸರಿಗೆ ದೂರು ನೀಡಿ FIR ದಾಖಲಿಸಬೇಕು. ಈ FIRನ ಒಂದು ಕಾಪಿಯನ್ನು ನೀವು ಏಜೆನ್ಸಿಯಲ್ಲಿ ನೀಡಿ ಹೊಸ ರೆಗ್ಯುಲೇಟರ್ ಪಡೆಯಬಹುದಾಗಿದೆ.


ನಿಮ್ಮ ಸಿಲಿಂಡರ್ ನಲ್ಲಿ ಎಷ್ಟು ಗ್ಯಾಸ್ ಬಾಕಿ ಉಳಿದಿದೆ ಎಂಬುದನ್ನು ಹೇಳುತ್ತೆ ರೆಗ್ಯುಲೇಟರ್
ಒಂದು ವೇಳೆ ನಿಮ್ಮ ಬಳಿ ಇರುವ ರೆಗ್ಯುಲೇಟರ್ ಕಳುವಾಗಿದ್ದರೆ, ನಿಮ್ಮ ಅಧಿಕೃತ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ರೂ.250ನ್ನು ಪಾವತಿಸಿ ಹೊಸ ರೆಗ್ಯುಲೇಟರ್ ಪಡೆಯಬಹುದು. ಇಂದು ಗ್ರಾಹಕರ ಅನುಕೂಲಕ್ಕಾಗಿ ಮಾರುಕಟ್ಟೆಯಲ್ಲಿ ಕ್ರಿಯಾತ್ಮಕ ರೆಗ್ಯುಲೇಟರ್ ಗಳು ಬಂದಿವೆ. ಈ ರೆಗ್ಯುಲೇಟರ್ ಗಳನ್ನು ಬಳಸಿ ನೀವು ನಿಮ್ಮ ಸಿಲಿಂಡರ್ ನಲ್ಲಿ ಎಷ್ಟು ಅನಿಲ ಬಾಕಿ ಉಳಿದಿದೆ ಎಂಬುದನ್ನು ಸಹ ನೀವು ತಿಳಿದುಕೊಳ್ಳಬಹುದು. ಯಾವುದೇ ಒಂದು ರೆಗ್ಯುಲೇಟರ್ ಲೈಫ್ ಟೈಮ್ ವಾರಂಟಿ ಹೊಂದಿರುತ್ತದೆ. ಆದರೆ, ಒಂದು ವೇಳೆ ರೆಗ್ಯುಲೆಟರ್ ನಲ್ಲಿ ಉತ್ಪಾದನಾ ದೋಷವಿದ್ದರೆ ಅದನ್ನು ನೀವು ಉಚಿತವಾಗಿ ಬದಲಾಯಿಸಬಹುದು. ಇತರ ಸಂದರ್ಭಗಳಲ್ಲಿ ನೀವು ಶುಲ್ಕ ಪಾವತಿಸಬೇಕು.