ನೀವು ಬಂಗಾಳದಲ್ಲಿ ವಾಸಿಸುತ್ತಿದ್ದರೆ ಬಂಗಾಳಿ ಮಾತನಾಡುವುದನ್ನು ಕಲಿಯಬೇಕು - ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳನ್ನು ಗುಜರಾತ್ ಆಗಿ ಪರಿವರ್ತಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ನೀವು ಬಂಗಾಳದಲ್ಲಿದ್ದರೆ, ನೀವು ಬಾಂಗ್ಲಾ ಕಲಿಯಬೇಕು` ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಘೋಷಿಸಿದ್ದಾರೆ.
ಕೋಲ್ಕತಾ: ಪಶ್ಚಿಮ ಬಂಗಾಳನ್ನು ಗುಜರಾತ್ ಆಗಿ ಪರಿವರ್ತಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ನೀವು ಬಂಗಾಳದಲ್ಲಿದ್ದರೆ, ನೀವು ಬಾಂಗ್ಲಾ ಕಲಿಯಬೇಕು" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಘೋಷಿಸಿದ್ದಾರೆ.
ರಾಜ್ಯದಲ್ಲಿ ವೈದ್ಯರ ಮುಷ್ಕರವನ್ನು ನಿಭಾಯಿಸಿದ್ದಕ್ಕಾಗಿ ಟೀಕೆಗೆ ಮಮತಾ ಒಳಗಾಗಿದ್ದಾರೆ. ಈಗ ಗಲಭೆಯ ರಾಜಕೀಯವನ್ನು ಬಳಸಿಕೊಂಡು ರಾಜ್ಯದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿರುವ ಬಿಜೆಪಿ ನಡೆಗೆ ಅವರು ಕಿಡಿ ಕಾರಿದ್ದಾರೆ.
"ನಾವು ಬಾಂಗ್ಲಾ ಭಾಷೆಯನ್ನು ಅಭಿವೃದ್ದಿ ಪಡಿಸಬೇಕು. ನಾವು ದೆಹಲಿಗೆ ಹೋದಾಗ ಹಿಂದಿಯಲ್ಲಿ ಮಾತನಾಡುತ್ತೇವೆ. ಪಂಜಾಬ್‌ಗೆ ಹೋದಾಗ ನಾವು ಪಂಜಾಬಿಯಲ್ಲಿ ಮಾತನಾಡಬೇಕು. ನಾನು ಅದನ್ನು ಮಾಡುತ್ತೇನೆ. ನಾನು ತಮಿಳುನಾಡಿಗೆ ಹೋದಾಗ ನನಗೆ ತಮಿಳು ಗೊತ್ತಿಲ್ಲ ಆದರೆ ಕೆಲವು ಪದಗಳು ಗೊತ್ತಿವೆ ಎಂದು ಉತ್ತರ 24 ಪರಗನಾಸ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿ ಮಮತಾ ಬ್ಯಾನರ್ಜಿ ಮಾತನಾಡಿದರು.
"ನೀವು ಬಂಗಾಳಕ್ಕೆ ಬರುತ್ತಿದ್ದರೆ, ನೀವು ಬಂಗಾಳಿಯಲ್ಲಿ ಮಾತನಾಡಬೇಕು. ಜನರು ಹೊರಗಿನಿಂದ ಬಂದು ಬಂಗಾಳಿಗಳ ಮೇಲೆ ಹಲ್ಲೆ ಮಾಡಲು ನಾವು ಅನುಮತಿ ನೀಡುವುದಿಲ್ಲ "ಎಂದು ಅವರು ಹೇಳಿದರು.