ನವದೆಹಲಿ:  ಇನ್ನು ಮುಂದೆ ನೀವು ಕೂಡ ಡ್ರೋನ್ ಗಳನ್ನು ಹೊಂದಬಹುದು, ಆದರೆ ಅದಕ್ಕೆ ಕೆಲವು ನಿಯಮಗಳನ್ನು ನೀವು ಪಾಲಿಸಬೇಕು ಅಷ್ಟೇ. ಹಾಗಾದರೆ ಆ ಎಲ್ಲ ಕಾರ್ಯಸೂಚಿಗಳೇನು ಎನ್ನುವುದನ್ನು ಇಲ್ಲಿ ನೀವು ಗಮನಿಸಬೇಕು.


COMMERCIAL BREAK
SCROLL TO CONTINUE READING

ಮುಂಬರುವ ಡಿಸೆಂಬರ್ ತಿಂಗಳಿಂದ ಇನ್ನು ಮುಂದೆ ಡ್ರೋನ್ ಗಳನ್ನು ಭಾರತದಲ್ಲಿ ಹಾರಿಸುವ ಕೆಲಸ ಸುಲಭವಾಗುತ್ತದೆ.ಈಗಾಗಲೇ ಅಮೇರಿಕಾ ಮತ್ತು ಇತರ ದೇಶಗಳಲ್ಲಿ ಡ್ರೋನ್ ಗಳು ಆನ್ ಲೈನ್ ಮೂಲಕವು ಲಬಿಸುತ್ತವೆ. ಆದರೆ ಈ ವಿಚಾರವಾಗಿ ಭಾರತದಲ್ಲಿ ಇನ್ನು ಸ್ಪಷ್ಟತೆ ಇಲ್ಲ.ಈಗ ಭಾರತ ಸರ್ಕಾರ ಈ ವಿಷಯದಲ್ಲಿ ಕೆಲವು ಸ್ಪಷ್ಟತೆಯನ್ನು ನೀಡುವ ಪ್ರಯತ್ನ ಮಾಡುತ್ತಿದೆ ವಾಯುಯಾನದ ಡೈರಕ್ಟರ್ ಜನರಲ್ ಅವರು ನೂತನ ಡ್ರೋನ್ ಪಾಲಿಸಿ ರೂಪಿಸುತ್ತಿದ್ದಾರೆ. 


ಫ್ಲೈಯಿಂಗ್ ಡ್ರೋನ್ ಹೊಂದಲು ಇರುವ ಅಗತ್ಯತೆಗಳೇನು? 


ಡ್ರೋನ್ ಎನ್ನುವುದು ಹಾರುವ ವಸ್ತುವಾಗಿರುವುದರಿಂದ ಇದಕ್ಕೆ ಅಗತ್ಯವಾಗಿ  ಪೈಲೆಟ್ ಸ್ಟೇಷನ್ ಕಮಾಂಡ್  ಮತ್ತು ಕಂಟ್ರೋಲ್ ಮಾಡಲು ಆರ್ಪಿಎಎಸ್ ನ ಅಗತ್ಯತೆ ಇದೆ. ಇವುಗಳಿಗೆ  ಸೂಕ್ತವಾದ ನಂಬರ್ ಮೂಲಕ ಮಾನವ ರಹಿತ ಏರ್ ಕ್ರಾಪ್ಟ್ ಆಪರೇಟರ್ ಮೂಲಕ ಇದು ಕಾರ್ಯವನ್ನು ನಿರ್ವಹಿಸುತ್ತದೆ.


ಡ್ರೋನ್ ಗಳು ಐದು ಪ್ರಕಾರಗಳಲ್ಲಿ ವಿಂಗಡಣೆಯಾಗಿರುತ್ತವೆ 


ಡ್ರೋನ್ ಗಳು ಅವುಗಳ ಆಕಾರ  ಮತ್ತು  ಅಳತೆಯ ಅನುಗುಣವಾಗಿ ನ್ಯಾನೋ, ಮೈಕ್ರೋ, ಚಿಕ್ಕ, ಮಧ್ಯಮ ,ಬೃಹತ್ ಗಾತ್ರದ ಡ್ರೋನ್ ಗಳು ಎಂದು ವಿಂಗಡಿಸಲಾಗುತ್ತದೆ.


ಡ್ರೋನ್ ಗಳನ್ನು ಹಾರಿಸಲು ಡಿಜಿಸಿಎ ಅನುಮತಿ ಅಗತ್ಯ( ನ್ಯಾನೋ ಡ್ರೋನ್ ಗಳನ್ನು ಹೊರತು ಪಡಿಸಿ) 


ಒಂದು ವೇಳೆ ನಿಮ್ಮ ಬಳಿ ನ್ಯಾನೋ ಡ್ರೋನ್ ಹೊರತಾಗಿ ಬೇರೆ ಯಾವುದೇ ಡ್ರೋನ್ ಇದ್ದಿದ್ದೆ ಆದಲ್ಲಿ ನಿಮಗೆ ಡಿಜಿಸಿಎ ಅನುಮತಿಯ ಅಗತ್ಯವಿದೆ.ಇದರ ಅನುಮತಿ ಸಿಕ್ಕ ನಂತರ ನೀವು ಡ್ರೋನ್ ಹಾರಿಸಬಹುದು. ಒಂದು ವೇಳೆ ಯಾವುದೇ ವ್ಯಕ್ತಿಯು ಮೈಕ್ರೋ ಡ್ರೋನ್ ನ್ನು 200 ಅಡಿಗಳ ಕೆಳಗೆ ಹಾರಿಸಬೇಕಾದಲ್ಲಿ 24 ಗಂಟೆಗೂ ಮೊದಲೇ ಸ್ಥಳೀಯ ಪೊಲೀಸರಿಗೆ  ಮಾಹಿತಿ ನೀಡಬೇಕು. ಅಲ್ಲದೆ ಸರ್ಕಾರದ ಏಜೆನ್ಸಿಗಳು ಸಹಿತ ಡ್ರೋನ್ ಗಳನ್ನು ಹಾರಿಸಬೇಕಾದಲ್ಲಿ  ಸ್ಥಳೀಯ ಪೊಲೀಸರಿಗೆ ತಿಳಿಸಬೇಕು.


 ಡ್ರೋನ್ ಗಳನ್ನು ಹಾರಿಸಲು ಡಿಜಿಸಿಎ ಅನುಮತಿ ಪಡೆಯುವುದು ಹೇಗೆ ? 


ಡಿಜಿಸಿಎ ಕಾಯ್ದೆ ಪ್ರಕಾರ  18 ವರ್ಷಕ್ಕಿಂತ ಅಧಿಕ ವಯೋಮಾನದ ವ್ಯಕ್ತಿ ಮಾತ್ರ ಡ್ರೋನ್ ಹಾರಿಸಲು ಸಾಧ್ಯ.ಅಲ್ಲದೆ ಅವನು 10ನೇ ತರಗತಿಯಲ್ಲಿ ಇಂಗ್ಲಿಷಿನಲ್ಲಿ ತೇರ್ಗಡೆಯಾಗಿರಬೇಕು.ಡ್ರೋನ್ ಹಾರಿಸಲು ಸೂಕ್ತ ತರಬೇತಿಯನ್ನು ಡಿಜಿಸಿಎ ಅಡಿಯಲ್ಲಿ ನೋಂದಣಿ ಮಾಡಿರುವ ಸಂಸ್ಥೆಗಳಲ್ಲಿ  ಪಡೆದಿರಬೇಕು. ಅಲ್ಲದೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ 7 ದಿನಗಳಲ್ಲಿ  ಡಿಜಿಸಿಎ ಅನುಮತಿ ಪಡೆಯಬಹುದು.ಈ ಅನುಮತಿ ಐದು ವರ್ಷಗಳ ಕಾಲವಿರುತ್ತದೆ. 


ಡ್ರೋನ್ ಗಳನ್ನು ಹಗಲಿನಲ್ಲಿ ಮಾತ್ರ ಹಾರಿಸಬಹುದು;ವಿಮೆ ಕಡ್ಡಾಯ 


ಡ್ರೋನ್ ಗಳನ್ನು ಹೊಂದುವ ಸಂದರ್ಭದಲ್ಲಿ ವಿಮೆ ಕಡ್ಡಾಯವಾಗಿರುತ್ತದೆ. ಒಂದು ವೇಳೆ ನೀವು ಎರಡು ಡ್ರೋನ್ ಗಳನ್ನು ಹೊಂದಿದ್ದರೆ ಎರಡನ್ನು ಏಕಕಾಲಕ್ಕೆ ಹಾರಿಸಲು ಸಾಧ್ಯವಿಲ್ಲ. ನೀವು ರಾತ್ರಿ ವೇಳೆ ಡ್ರೋನ್ ಗಳನ್ನು ಹಾರಿಸುವಂತಿಲ್ಲ  


ನೀವು ಮುಂಬೈ ದೆಹಲಿ, ಚೆನ್ನೈ ಕೊಲ್ಕತ್ತಾ, ಬೆಂಗಳೂರು ವಿಮಾನ ನಿಲ್ದಾಣದ ಸುತ್ತ 5 ಕಿ ಮಿ ಒಳಗೆ ಡ್ರೋನ್ ಹಾರಿಸುವ ಹಾಗಿಲ್ಲ 


ದೇಶದ ಪ್ರಮುಖ ವಿಮಾನ ನಿಲ್ದಾಣಗಳ ಹತ್ತಿರ 5 ಕಿಮಿ ಸುತ್ತ ಯಾವುದೇ ರೀತಿಯ ಡ್ರೋನ್ ಗಳನ್ನು ಹಾರಿಸುವಂತಿಲ್ಲ. ಇನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಾದರೆ  25 ಕಿಮೀ ಗಡಿ ರೇಖೆಯಲ್ಲಿ  ಡ್ರೋನ್ ಗಳನ್ನು  ಹಾರಿಸುವಂತಿಲ್ಲ.ಇವುಗಳಲ್ಲದೆ ಸರ್ಕಾರದ  ಗುರುತುಪಡಿಸಿದ ಈ ಕೆಳಗಿನ  ಸ್ಥಳಗಳಲ್ಲಿ ಡ್ರೋನ್  ಹಾರಿಸಬೇಕಾದರೆ  ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಾಗುತ್ತದೆ.


*ಕರಾವಳಿಯ ರೇಖೆಯಿಂದ ಸಮುದ್ರಕ್ಕೆ 500 ಮೀಟರ್ ಮೀರಿ ಹಾರಿಸುವ ಹಾಗಿಲ್ಲ 


*ಮಿಲಿಟರಿ ಸ್ಥಾಪನೆಗಳ ಪರಿಧಿಯಿಂದ 3 ಕಿಮೀ ವ್ಯಾಪ್ತಿಯಲ್ಲಿ ಹಾರಿಸುವ ಹಾಗಿಲ್ಲ 


*ಹೊಸದಿಲ್ಲಿಯಲ್ಲಿ ವಿಜಯ್ ಚೌಕ್ನ 5 ಕಿಮೀ ವ್ಯಾಪ್ತಿಯಲ್ಲಿ ಹಾರಿಸುವ ಹಾಗಿಲ್ಲ 


*ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಸುತ್ತಲಿನ ಪರಿಸರ-ಸೂಕ್ಷ್ಮ ವಲಯಗಳಲ್ಲಿ ಹಾರಿಸುವ ಹಾಗಿಲ್ಲ 


*3 ಕಿ.ಮೀ. ರಾಜ್ಯ ಕಾರ್ಯದರ್ಶಿಯ ಸಂಕೀರ್ಣಗಳಲ್ಲಿ ಹಾರಿಸುವ ಹಾಗಿಲ್ಲ 
*ಗೃಹ ವ್ಯವಹಾರಗಳ ಸಚಿವಾಲಯವು ಸೂಚಿಸಿರುವ 2 ಕಿಲೋಮೀಟರ್ ಕಾರ್ಯತಂತ್ರದ ಸ್ಥಳಗಳಲ್ಲಿ ಹಾರಿಸುವ ಹಾಗಿಲ್ಲ