ನವದೆಹಲಿ : ನಾವೆಲ್ಲರೂ ಹೆಚ್ಚು ಹೆಚ್ಚು ಹಣವನ್ನು ಸಂಪಾದಿಸಲು ಬಯಸುತ್ತೇವೆ ಮತ್ತು ಅದಕ್ಕಾಗಿಯೇ ನಮ್ಮಲ್ಲಿ ಅನೇಕರು ಹಗಲು ರಾತ್ರಿ ಶ್ರಮಿಸುತ್ತೇವೆ. ಉತ್ತಮ ಜೀವನಶೈಲಿಯನ್ನು ನಡೆಸಲು, ಹೆಚ್ಚಿನ ಹಣದ ಅಗತ್ಯವಿದೆ. ಅನೇಕ ಜನರು ಬಹಳಷ್ಟು ಹಣವನ್ನು ಸಂಪಾದಿಸುತ್ತಾರೆ. ಆದರೆ ಹಣವನ್ನು ಹೇಗೆ ದ್ವಿಗುಣಗೊಳಿಸುವುದು ಅಥವಾ ಹೆಚ್ಚಿಸುವುದು ಎಂದು ಅವರಿಗೆ ತಿಳಿದಿರುವುದಿಲ್ಲ. ಅಂತಹ ಕೆಲವು ಕ್ರಮಗಳನ್ನು ನಾವು ನಿಮಗೆ ಹೇಳಲಿದ್ದೇವೆ, ಅದರ ಮೂಲಕ ನೀವೆಲ್ಲರೂ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು. ಬನ್ನಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ದ್ವಿಗುಣಗೊಳಿಸುವ ಐದು ಕ್ರಮಗಳನ್ನು ತಿಳಿದುಕೊಳ್ಳೋಣ ...


COMMERCIAL BREAK
SCROLL TO CONTINUE READING

ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ:
ನಿಮ್ಮ ಹಣಕಾಸಿನ ಪರಿಸ್ಥಿತಿಗೆ ನೀವೇ ಜವಾಬ್ದಾರರಾಗಿರುತ್ತೀರಿ, ಆದ್ದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಸಂಬಂಧಿಸಿದ ನಿರ್ಧಾರಗಳ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಇದರೊಂದಿಗೆ ಸರಿಯಾದ ಸಮಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದು ಸಹ ಬಹಳ ಮುಖ್ಯ. ಅನೇಕ ಪ್ರಮುಖ ಸಂದರ್ಭಗಳು ಜನರ ಮುಂದೆ ಬರುತ್ತವೆ, ಆದರೆ ಜನರು ಅವುಗಳನ್ನು ನಿರ್ಲಕ್ಷಿಸುತ್ತಾರೆ, ಅಂತಹ ಸಂದರ್ಭಗಳ ಸಂಪೂರ್ಣ ಲಾಭವನ್ನು ಪಡೆಯುವುದು ಅವಶ್ಯಕ.


ಪ್ರತಿ ತಿಂಗಳು 210 ರೂ. ಪಾವತಿಸಿ, ವಾರ್ಷಿಕ 60,000 ಪಿಂಚಣಿ ಪಡೆಯಿರಿ


ಭವಿಷ್ಯದ ಯೋಜನೆ:
ಎಲ್ಲಾ ಜನರು ತಮ್ಮ ಭವಿಷ್ಯಕ್ಕಾಗಿ ಉತ್ತಮ ಹಣಕಾಸು ಯೋಜನೆಯನ್ನು ರೂಪಿಸಬೇಕು, ಇದು ನಿಮ್ಮ ಕೆಟ್ಟ ಸಮಯದಲ್ಲೂ ಸಹ ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪರಿಣಾಮಕಾರಿಯಾಗಿದೆ. ಯೋಜನೆಯನ್ನು ರೂಪಿಸಿದರಷ್ಟೇ ಸಾಸಲು ಕಾಲಕಾಲಕ್ಕೆ ಆ ಯೋಜನೆಯನ್ನು ಪರಿಶೀಲಿಸುವುದು ಸಹ ಅಗತ್ಯವಾಗಿರುತ್ತದೆ.


ಅನಗತ್ಯ ಖರ್ಚು-ವೆಚ್ಚವನ್ನು ಕಡಿಮೆಗೊಳಿಸಿ:
ನಿಮ್ಮ ಹಣ ಹೆಚ್ಚಾಗಿ ಉಳಿತಾಯವಾಗಬೇಕು ಎಂದು ನೀವು ಬಯಸಿದ್ದೇ ಆದರೆ ವ್ಯರ್ಥವಾಗಿ ಹಣ ಖರ್ಚು ಮಾಡುವುದನ್ನು ನಿಲ್ಲಿಸಬೇಕು. ನಿಮ್ಮ ಹಣ ಯಾವುದೇ ರೀತಿಯಲ್ಲೂ ಪೋಲಾಗದಂತೆ ನಿಗಾ ವಹಿಸಿ.  ಕ್ರೇಜಿ ಪಾರ್ಟಿ, ಮದ್ಯಪಾನ, ಧೂಮಪಾನ ಮತ್ತು ದುಬಾರಿ ಗ್ಯಾಜೆಟ್‌ಗಳನ್ನು ಖರೀದಿಸಲು ನಿಮ್ಮ ಹಣವನ್ನು ವ್ಯರ್ಥ ಮಾಡಬೇಡಿ. ಈ ಹಣವನ್ನು ಉಳಿಸಿ ಬ್ಯಾಂಕಿನಲ್ಲಿ ಠೇವಣಿ ಇಡಬಹುದು ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು.


ಆರ್ಥಿಕ ಬಿಕ್ಕಟ್ಟಿನ ಯೋಜನೆ:
ಭವಿಷ್ಯದಲ್ಲಿ ಯಾವುದೇ ಅಹಿತಕರ ಘಟನೆಯ ಅಪಾಯವನ್ನು ಎದುರಿಸುವ ಯೋಜನೆಯನ್ನು ಅವರು ಈಗಾಗಲೇ ಮಾಡಿದ್ದರೆ ಮಾತ್ರ ಯಾವುದೇ ವ್ಯಕ್ತಿಗೆ ಆರ್ಥಿಕ ಸ್ವಾತಂತ್ರ್ಯ ಸಿಗುತ್ತದೆ. ಎಲ್ಲಾ ಜನರು ತಮ್ಮ ಭವಿಷ್ಯದಲ್ಲಿ ಎದುರಾಗುವ ಕೆಟ್ಟ ಪರಿಸ್ಥಿತಿಗೆ ಮುಂಚಿತವಾಗಿ ಸಿದ್ಧರಾಗಿರಬೇಕು. ಅನೇಕ ಬಾರಿ ಜನರು ಹೊಸ ಉದ್ಯೋಗಕ್ಕಾಗಿ ನಗರವನ್ನು ಬದಲಾಯಿಸಬೇಕಾಗುತ್ತದೆ ಅಥವಾ ಇನ್ನೊಂದು ಕೆಲಸಕ್ಕೆ ಸ್ವಲ್ಪ ತರಬೇತಿ ಬೇಕಾಗಬಹುದು, ಏಕೆಂದರೆ ಅಂತಹ ಪರಿಸ್ಥಿತಿಯನ್ನು ಮುಂಚಿತವಾಗಿ ಯೋಜಿಸಬೇಕು  ಮತ್ತು ಅದಕ್ಕಾಗಿ ಸ್ವಲ್ಪ ಹಣವನ್ನು ಸಂಗ್ರಹಿಸಬೇಕು.


ಕೇವಲ 100 ರೂಪಾಯಿ ಹೂಡಿಕೆ ಮಾಡುವ ಮೂಲಕ 54 ಲಕ್ಷ ರೂ. ಗಳಿಸಿ


ಸರಿಯಾದ ಜಾಗದಲ್ಲಿ ಹೂಡಿಕೆ
ಉಳಿತಾಯ ಖಾತೆಯಲ್ಲಿ ಹಣವನ್ನು ಇಡುವುದು ಉತ್ತಮ ಆಯ್ಕೆಯಾಗಿದೆ, ಆದರೆ ಅದು ಹೆಚ್ಚಿನ ಲಾಭವನ್ನು ನೀಡುವುದಿಲ್ಲ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚು ಲಾಭವಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಲಾಭವನ್ನು ಪಡೆಯಬಹುದು. ಆದಾಗ್ಯೂ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೊದಲು ಅದರಲ್ಲಿನ ಅಪಾಯದ ಬಗ್ಗೆ ಖಚಿತಪಡಿಸಿಕೊಳ್ಳಿ. ಷೇರು ಮಾರುಕಟ್ಟೆ ಸಂಬಂಧಿತ ಹೂಡಿಕೆಗಳಲ್ಲಿ ಅಪಾಯವು ಹೆಚ್ಚು. ಇದಲ್ಲದೆ ಮ್ಯೂಚುವಲ್ ಫಂಡ್, ಸರ್ಕಾರಿ ಬಾಂಡ್, ಬ್ಯಾಂಕ್ ಎಫ್ಡಿ, ಕಾರ್ಪೊರೇಟ್ ಬಾಂಡ್, ಪಿಪಿಎಫ್, ಎನ್‌ಪಿಎಸ್ ಮುಂತಾದ ಹಲವು ಹೂಡಿಕೆ ಆಯ್ಕೆಗಳನ್ನು ಸಹ ಬಳಸಬಹುದು.