ನವದೆಹಲಿ: ಆಧಾರ್‌ನ ಪ್ರಾಮುಖ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯಾರಾದರೂ ಪ್ಯಾನ್ ಕಾರ್ಡ್ ಹೊಂದಿಲ್ಲದಿದ್ದರೆ, ಚಿಂತಿಸುವ ಅಗತ್ಯವಿಲ್ಲ. ಕಾರಣ ಸರ್ಕಾರ ಆಧಾರ್ ಮೂಲಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೂಡ ಅವಕಾಶ ಕಲ್ಪಿಸಿದೆ. ಇದಲ್ಲದೆ, ಯಾವುದೇ ಸರ್ಕಾರಿ ಯೋಜನೆಯ ಲಾಭ ಪಡೆಯಲು ಆಧಾರ್ ಅಗತ್ಯವಿದೆ. ಇದು ವಿಳಾಸ ಪುರಾವೆ ಮತ್ತು ಫೋಟೋ ಐಡಿಯಂತೆ ಕಾರ್ಯನಿರ್ವಹಿಸುತ್ತದೆ.


COMMERCIAL BREAK
SCROLL TO CONTINUE READING

ಇತ್ತೀಚಿನವರೆಗೂ, ಬ್ಯಾಂಕ್ ಖಾತೆಗಳನ್ನು ಆಧಾರ್ ಇಲ್ಲದೆ ತೆರೆಯಲು ಆಗಲ್ಲ ಮತ್ತು ಮೊಬೈಲ್ ಸಿಮ್ ಕೊಳ್ಳಲೂ ಕೂಡ ಆಧಾರ್ ಅತ್ಯಗತ್ಯ ಎನ್ನಲಾಗುತ್ತಿತ್ತು. ಆದರೆ, ಸುಪ್ರೀಂಕೋರ್ಟ್ ತೀರ್ಪಿನ ನಂತರ ಈ ನಿಯಮವನ್ನು ರದ್ದುಪಡಿಸಲಾಯಿತು. ಬ್ಯಾಂಕ್ ಖಾತೆ ತೆರೆಯಲು ಹಾಗೂ ಸಿಮ್ ಕೊಳ್ಳುವಾಗ ಆಧಾರ್ ನೀಡಬೇಕೋ/ಬೇಡವೋ ಎಂಬುದು ಗ್ರಾಹಕರ ಮೇಲೆ ಅವಲಂಬಿತವಾಗಿರುತ್ತದೆ.  ಸೆಪ್ಟೆಂಬರ್ 30 ರವರೆಗೆ ನೀವು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿಲ್ಲದಿದ್ದರೆ, ನಂತರ ಪ್ಯಾನ್ ನಿಷ್ಪ್ರಯೋಜಕವಾಗಲಿದೆ.


ಈ ರೀತಿಯಾಗಿ ಆಧಾರ್‌ನ ಅಗತ್ಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಆದರೆ, ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನೀವು ಅನೇಕ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆಧಾರ್ ಮಾಹಿತಿಗೆ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸದ ಅಗತ್ಯವಿದೆ. ಗೌಪ್ಯತೆಗಾಗಿ ಮೊಬೈಲ್ ಸಂಖ್ಯೆಯನ್ನು ನೀಡದಿರುವುದರಲ್ಲಿ ಯಾವುದೇ ತೊಂದರೆಗಳಿಲ್ಲ. ಆದರೆ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ನೋಂದಾಯಿಸದಿದ್ದರೆ, ಹಲವು ಸೌಲಭ್ಯಗಳನ್ನು ಪಡೆಯಲು ಕಷ್ಟಕರವಾಗುತ್ತದೆ.


1. ಆಧಾರ್‌ನೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆ ಲಿಂಕ್ ಆಗಿಲ್ಲದಿದ್ದರೆ, ಇಲ್ಲದಿದ್ದರೆ ಆನ್‌ಲೈನ್ ಸೇವೆ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅಂತಹ ಸೌಲಭ್ಯಗಳನ್ನು ಪಡೆಯಲು ಒಟಿಪಿಯನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.


2. ಆಧಾರ್‌ನೊಂದಿಗೆ ಮೊಬೈಲ್ ನೋಂದಾಯಿಸದಿದ್ದರೆ, ಆನ್‌ಲೈನ್ ಮೂಲಕ ವಿಳಾಸ ನವೀಕರಣಗಳಿಗಾಗಿ, ಹೆಸರು ಬದಲಾವಣೆಗೆ ಈ ಸೇವೆಯನ್ನು ಬಳಸಲಾಗುವುದಿಲ್ಲ.


3. ಆಧಾರ್ ದೃಡೀಕರಣದ ಅಗತ್ಯವಿರುವ ಸೇವೆಗಳನ್ನು - ಐಟಿಆರ್ ಪರಿಶೀಲನೆ ಮತ್ತು ಒಪಿಡಿ ನೇಮಕಾತಿಗಳಂತಹವುಗಳನ್ನು ಪಡೆಯಲಾಗುವುದಿಲ್ಲ.


4. mAadhaar ಅನ್ನು ಮೊಬೈಲ್ ಆಧಾರ್ ಎಂದು ಕರೆಯಲಾಗುತ್ತದೆ. ಈ ಸೌಲಭ್ಯವನ್ನು ಪಡೆಯಲು, ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳುವುದು ಅವಶ್ಯಕ. ಇದು ಯುಐಡಿಎಐನ ಮೊಬೈಲ್ ಅಪ್ಲಿಕೇಶನ್ ಆಧಾರಿತ ಸೇವೆಯಾಗಿದೆ.


5. ಅಂತಹ ಸಂದರ್ಭದಲ್ಲಿ, ನೀವು ಮೊಬೈಲ್ ಸಂಖ್ಯೆಯನ್ನು ಆಧಾರ್‌ನಿಂದ ಲಿಂಕ್ ಮಾಡದಿದ್ದರೆ, ಶೀಘ್ರದಲ್ಲೇ ಆ ಕೆಲಸ ಮಾಡಿ. ಈ ಕೆಲಸ ಆನ್‌ಲೈನ್‌ನಲ್ಲಿ ಸಾಧ್ಯವಿಲ್ಲ. ಇದಕ್ಕಾಗಿ ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಬಯೋಮೆಟ್ರಿಕ್ ಗುರುತಿಸುವಿಕೆಯ ನಂತರ ನಿಮ್ಮ ಆಧಾರ್ ಡೇಟಾ ತೆರೆಯುತ್ತದೆ. ಬಳಿಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ಇಲ್ಲಿ ನೋಂದಾಯಿಸಬೇಕು. ಇದು ಶುಲ್ಕ ವಿಧಿಸಬಹುದಾದ ಸೇವೆಯಾಗಿದ್ದು, ಅದಕ್ಕಾಗಿ ಶುಲ್ಕ 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.