ಇಫ್ಕೊ ನ್ಯಾನೊ ಗೊಬ್ಬರವು ಕೃಷಿ ಜಗತ್ತಿನಲ್ಲಿ ಒಂದು ಕ್ರಾಂತಿಯನ್ನು ತರುವುದು ಎಂದು ಬುಧವಾರ ಇಫ್ಕೊನ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಎಸ್.ಅವಸ್ಥಿ ತಿಳಿಸಿದ್ದಾರೆ. ಕೇವಲ ಎರಡು ಗ್ರಾಂಗಳ ನ್ಯಾನೊ ಗೊಬ್ಬರವು 100 ಕೆಜಿ ಯೂರಿಯಾಕ್ಕೆ ಸಮನಾಗಿ ಕೆಲಸ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇಫ್ಕೊದ ಫುಲ್ಪುರ್ ಘಟಕದಲ್ಲಿ ಮಾಧ್ಯಮದೊಂದಿಗಿನ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಅವಸ್ತಿಯವರು, ಇದು ರೈತರ ಉತ್ಪಾದನಾ ವೆಚ್ಚದ ದೃಷ್ಟಿಯಿಂದ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇದು ಮಣ್ಣಿನ ಅಸಮತೋಲನವನ್ನು ಸಹ ಕಡಿಮೆ ಮಾಡುತ್ತದೆ. ಅದರ ಪೇಟೆಂಟ್ ಗಾಗಿ ನಾವು ಈಗಾಗಲೇ ಅಪ್ಲೈ ಮಾಡಿದ್ದು, ಎರಡು ವರ್ಷ ಸಮಯ ಹಿಡಿಯುತ್ತದೆ ಎಂದು ತಿಳಿಸಿದರು.


ಇಫ್ಕೊ ಗುಜರಾತ್ನ ಕಲೋಲ್ ಘಟಕದಲ್ಲಿ ನ್ಯಾನೋ ಗೊಬ್ಬರ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಪ್ರಯೋಗಾತ್ಮಕವಾಗಿ 100 ಪ್ರತಿಶತ ನ್ಯಾನೋ ಗೊಬ್ಬರವನ್ನು ಒಂದೇ ಸ್ಥಳದಲ್ಲಿ ಬಳಸಲಾಗಿದ್ದು, 25 ಪ್ರತಿಶತ ಯೂರಿಯಾವನ್ನು 75 ಪ್ರತಿಶತ ನ್ಯಾನೊ-ತಂತ್ರಜ್ಞಾನ ರಸಗೊಬ್ಬರದೊಂದಿಗೆ ವಿಭಿನ್ನ ಸ್ಥಳದಲ್ಲಿ ಬಳಸಲಾಗಿದೆ. ಎರಡೂ ಸ್ಥಳಗಳಲ್ಲಿ ಇಳುವರಿ ಸಾಮರ್ಥ್ಯಗಳಲ್ಲಿ ಕೊರತೆಯಿಲ್ಲ ಎಂದು ಅವಸ್ಥಿ ಹೇಳಿದರು.


ಇಫ್ಕೊ ದೇಶಾದ್ಯಂತ 45 ಲಕ್ಷ ಬೇವಿನ ಗಿಡಗಳನ್ನು ನೆಟ್ಟಿದೆ ಮತ್ತು ಅರಣ್ಯ ಸಂಶೋಧನಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಐದು ವರ್ಷಗಳಲ್ಲಿ ಬೇವಿನ ಮರ ಬೇರುಕಾಂಡದೊಂದಿಗೆ ಸಂಪೂರ್ಣ ಬೆಳೆಯಲು, ಶಕ್ತಗೊಳಿಸಲು ಸಂಶೋಧನೆ ನಡೆಸುತ್ತಿದೆ. ಪ್ರಸ್ತುತ, ಒಂದು ಬೇವಿನ ಮರವು ಸಂಪೂರ್ಣವಾಗಿ ಬೆಳೆಯಲು ಸುಮಾರು 10 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.


ಜೈವಿಕ ಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡುವ ನಿಟ್ಟಿನಲ್ಲಿ ಇಫ್ಕೋ ಸಿಕ್ಕಿಂ ಸರಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಪಂಜಾಬ್ ನಲ್ಲಿ ಗಳನ್ನು ಸ್ಪಾನಿಶ್ ತಂತ್ರಜ್ಞಾನದ ಸಹಾಯದೊಂದಿಗೆ ಪ್ಲಾಂಟ್ ಸ್ಥಾಪಿಸಲಾಗಿದೆ. ಇಲ್ಲಿ ತರಕಾರಿಗಳನ್ನು ಬೆಳೆದು, ಸಂಸ್ಕರಿಸಿ ರಫ್ತು ಮಾಡಲಾಗುತ್ತದೆ ಎಂದು ಇದೇ ವೇಳೆ ಅವಸ್ಥಿ ಮಾಹಿತಿ ನೀಡಿದರು.