ಬೆಂಗಳೂರಿನಲ್ಲಿ ನಡೆದ ಐಐಎಂಸಿ ಸಭೆಯಲ್ಲಿ ವಿವೇಕ್ ಮತ್ತು ರೇಣುಗೆ ಇಫ್ಕೋ ಪ್ರಶಸ್ತಿ
`ಕನೆಕ್ಷನ್ -2019` ಈ ವರ್ಷ ಫೆಬ್ರವರಿ 21 ರಂದು ನವದೆಹಲಿಯಲ್ಲಿ ಪ್ರಾರಂಭವಾಯಿತು ಮತ್ತು ಬಾಂಗ್ಲಾದೇಶದ ಢಾಕಾದಲ್ಲಿ ಏಪ್ರಿಲ್ 13 ರಂದು ಮುಕ್ತಾಯಗೊಳ್ಳಲಿದೆ.
ಬೆಂಗಳೂರು: ಬೆಂಗಳೂರಿನ ಎಚ್ಎಸ್ಆರ್ ಕ್ಲಬ್ ನಲ್ಲಿ ಐಐಎಂಸಿ ಅಲುಮ್ನಿ ಅಸೋಸಿಯೇಶನ್ನ 4 ನೇ ವಾರ್ಷಿಕ ಸಭೆ 'ಕನೆಕ್ಷನ್ -2019' ನಡೆಯಿತು. ಈ ಸಂದರ್ಭದಲ್ಲಿ ವಿಜೇತರಿಗೆ ಇಫ್ಕೋ ಇಮ್ಕಾ ಪ್ರಶಸ್ತಿ ವಿತರಿಸಲಾಯಿತು.
ಅಡ್ವೊಕೆಸಿ ವಿಭಾಗದಲ್ಲಿ ರೇಣು ಕಕ್ಕರ್ ಮತ್ತು ಎಂಟರ್ಟೈನ್ಮೆಂಟ್ ವರದಿಗಾಗಿ ಟಿ.ಆರ್. ವಿವೇಕ್ ಈ ವರ್ಷದ ಇಫ್ಕೋ ಇಮ್ಕಾ ಪ್ರಶಸ್ತಿಯನ್ನು ಪಡೆದರು. IIMCAA ಅಧ್ಯಕ್ಷ ಪ್ರಸಾದ್ ಸನ್ಯಾಲ್ 2019ರ ಇಫ್ಕೋ ಇಮ್ಕಾ ಪ್ರಶಸ್ತಿಯನ್ನು ವಿತರಿಸಿದರು. ಈ ಪ್ರಶಸ್ತಿಯು 21,000 ನಗದು ಬಹುಮಾನದ ಜೊತೆಗೆ ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.
ಐಐಎಂಸಿ ಅಲುಮ್ನಿ ಅಸೋಸಿಯೇಷನ್ (ಐಐಎಂಸಿಎಎ) ಹಳೆಯ ವಿದ್ಯಾರ್ಥಿಗಳ ಒಂದು ಸಂಘಟನೆಯಾಗಿದೆ. 'ಕನೆಕ್ಷನ್ -2019' ಈ ವರ್ಷ ಫೆಬ್ರವರಿ 21 ರಂದು ನವದೆಹಲಿಯಲ್ಲಿ ಪ್ರಾರಂಭವಾಯಿತು. ಭಾರತದ ಮುಂಬೈ, ಭುವನೇಶ್ವರ, ಲಕ್ನೋ, ಪಾಟ್ನಾ, ಚಂಡೀಗಢ, ಜೈಪುರ, ಅಹಮದಾಬಾದ್, ಬೆಂಗಳೂರು, ಭೋಪಾಲ್, ರಾಯಪುರ್, ಗುವಾಹಟಿ, ಕೊಲ್ಕತ್ತಾ, ಕೊಟ್ಟಾಯಂ ರಾಜ್ಯ ಮಟ್ಟದ ಅಧ್ಯಾಯ ಮೀಟ್ಸ್ ಆಯೋಜಿಸಲಾಗಿದೆ. ಇದಲ್ಲದೆ ವಿದೇಶಗಳಲ್ಲೂ ಕೂಡ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬಾಂಗ್ಲಾದೇಶದ ಢಾಕಾದಲ್ಲಿ ಏಪ್ರಿಲ್ 13 ರಂದು ಮುಕ್ತಾಯಗೊಳ್ಳಲಿದೆ.
ಅಸೋಸಿಯೇಷನ್ ನಿಂದ ವೈದ್ಯಕೀಯ ನೆರವು ನಿಧಿ ಮತ್ತು ವಿದ್ಯಾರ್ಥಿವೇತನ:
ಈ ಸಂದರ್ಭದಲ್ಲಿ ಇಮ್ಕಾ ಅಧ್ಯಕ್ಷ ಪ್ರಸಾದ್ ಸನ್ಯಾಲ್ ತಮ್ಮ ವಿದ್ಯಾರ್ಥಿಗಳಿಗಾಗಿ ವೈದ್ಯಕೀಯ ನೆರವು ನಿಧಿ ಮತ್ತು ವಿದ್ಯಾರ್ಥಿವೇತನವನ್ನು ಘೋಷಿಸಿದರು. IIMC ಹಳೆಯ ವಿದ್ಯಾರ್ಥಿ ಸಂಘಟನೆಯ ವೈದ್ಯಕೀಯ ನೆರವು ನಿಧಿಗೆ 5 ಲಕ್ಷ ರೂ. ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ 10 ಐಐಎಂಸಿ ವಿದ್ಯಾರ್ಥಿಗಳಿಗೆ ರೂ. 25,000 ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಅವರು ತಿಳಿಸಿದರು.