ನವದೆಹಲಿ:  ಕೇಂದ್ರ ಸಚಿವ ಪಿಯುಶ್ ಗೋಯಲ್ ಅವರು ನ್ಯೂಟನ್ ಅವರ ಗುರುತ್ವಾಕರ್ಷಣೆ ನಿಯಮದಲ್ಲಿ ಐನ್ಸ್ಟೈನ್ ಅವರ ಹೆಸರನ್ನು ಎಳೆದು ತಂದ ಹಿನ್ನಲೆಯಲ್ಲಿ ಸಾಮಾಜಿಕ ವಲಯದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದರು.


COMMERCIAL BREAK
SCROLL TO CONTINUE READING

ಈಗ ತಮ್ಮ ಹೇಳಿಕೆಗೆ ಬಗ್ಗೆ ತಪ್ಪನ್ನು ಒಪ್ಪಿಕೊಂಡಿರುವ ಅವರು 'ತಪ್ಪುಗಳನ್ನು ಪ್ರತಿಯೊಬ್ಬರೂ ಮಾಡಿದ್ದಾರೆ ಮತ್ತು ನಾನು ಎಂದಿಗೂ ಕೂಡ ತಪ್ಪು ಮಾಡುವುದಕ್ಕೆ ಹೆದರಿಲ್ಲ ಎಂದು ಹೇಳಿದರು' ಎಂದು ಗೋಯಲ್ ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ರಾಜಧಾನಿ ಎಕ್ಸ್‌ಪ್ರೆಸ್‌ನ ಹೊಸ ಪ್ರವಾಸಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಹೇಳಿದರು. 


ನಿನ್ನೆ ನಡೆದ ವಾಣಿಜ್ಯ ಮಂಡಳಿಯ ಸಭೆಯಲ್ಲಿ ಅವರು ಮಾಡಿದ ಭಾಷಣದಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿರುವ ಗೋಯಲ್ - 5-ಟ್ರಿಲಿಯನ್ ಯುಎಸ್ಡಿ ಆರ್ಥಿಕತೆಯಾಗುವ ಭಾರತದ ಮಹತ್ವಾಕಾಂಕ್ಷೆಯನ್ನು ಗಣಿತದ ವಿಷಯವಾಗಿ ನೋಡಬಾರದು ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ಗಣಿತ ಎಂದಿಗೂ ಕೂಡ ಐನ್ಸ್ಟೈನ್ ಅವರಿಗೆ ಗುರುತ್ವಾಕರ್ಷಣೆ ನಿಯಮವನ್ನು ಕಂಡು ಹಿಡಿಯಲು ಸಹಾಯಮಾಡಿಲ್ಲ ಎಂದು ತಪ್ಪಾಗಿ ಹೇಳಿದ್ದರು. ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಈ ಹೇಳಿಕೆಗೆ ವ್ಯಾಪಕ ಟೀಕೆಯಾಗಿದ್ದಲ್ಲದೆ ಟ್ರೋಲ್ ಕೂಡ ಮಾಡಲಾಗಿತ್ತು. ಆದರೆ ಇದಾದ ನಂತರ ಅವರು ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಂಡರು.


ಒಂದೆಡೆ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಆರ್ಥಿಕ ಕುಸಿತದ ಕುರಿತಾಗಿ ಅಭಿಯಾನ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಕೇಂದ್ರ ಸಚಿವರ ಹೇಳಿಕೆ ಬಂದಿರುವುದು ಪ್ರತಿಪಕ್ಷಗಳಿಗೆ ಇನ್ನಷ್ಟು ಅನುಕೂಲ ಮಾಡಿತು.