Rail Alert : ನೈಋತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಕರಾವಳಿ ಜಿಲ್ಲೆಗಳು ಮತ್ತು ಚೆನ್ನೈ ನಗರದಲ್ಲಿ ಬುಧವಾರ ಭಾರೀ ಮಳೆಯಾಗಿದೆ. ಇದೀಗ ರಾಜ್ಯದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

ನವೆಂಬರ್ 16 ರವರೆಗೆ ಮಳೆ ಮುನ್ನಚ್ಚರಿಕೆ : 
ಭಾರತೀಯ ಹವಾಮಾನ ಇಲಾಖೆ (IMD) ನವೆಂಬರ್ 12 ರಂದು 12 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಯೆಲ್ಲೋ ಅಲರ್ಟ್ ನೀಡಿತ್ತು. ಆದರೆ ಇದೀಗ ಈ ಅಲರ್ಟ್ ಅನ್ನು 25 ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ನವೆಂಬರ್ 13 ರಿಂದ 16 ರವರೆಗೆ ತಮಿಳುನಾಡು ಮತ್ತು ಪುದುಚೇರಿಯ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು  ಹವಾಮಾನ ಇಲಾಖೆ ಹೇಳಿದೆ. 


ಇದನ್ನೂ ಓದಿ : ಆಂಟಿಲಿಯಾ ನಿರ್ಮಾಣದ ಬಳಿಕ ಅಂಬಾನಿ ಕುಟುಂಬವನ್ನೂ ಕಾಡಿತ್ತು ಈ ಭಯ !ದೋಷ ನಿವಾರಣೆ ಬಳಿಕವಷ್ಟೇ ವಾಸಿಸಿದ್ದು ಭವ್ಯ ಅರಮನೆಯಲ್ಲಿ


ಮಂಗಳವಾರ 6 ಸೆಂ.ಮೀ ಮಳೆ :
ಮಂಗಳವಾರ ರಾತ್ರಿ ಚೆನ್ನೈನಲ್ಲಿ ಭಾರೀ ಮಳೆಯಾಗಿದೆ. ತಮಿಳುನಾಡಿನ ರಾಜಧಾನಿ ಚೆನ್ನೈನ ಅಡ್ಯಾರ್, ಮೀನಂಬಾಕ್ಕಂ ಮತ್ತು ನಂದನಂ ಸೇರಿದಂತೆ ಹಲವು ಪ್ರದೇಶಗಳಲ್ಲಿ 6 ಸೆಂ.ಮೀ ಮಳೆ ದಾಖಲಾಗಿದೆ. 


ಮುಂದಿನ 2 ದಿನಗಳಲ್ಲಿ ಹಲವೆಡೆ ಭಾರೀ ಮಳೆ :
ವರದಿ ಪ್ರಕಾರ, ಬುಧವಾರ ಮತ್ತು ಗುರುವಾರ ತಮಿಳುನಾಡು ಮತ್ತು ಪುದುಚೇರಿಯ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ (7 ಸೆಂ.ಮೀ.ಗಿಂತ ಹೆಚ್ಚು) ಬೀಳುವ ಸಾಧ್ಯತೆ ಇದೆ. ರಾಜ್ಯದ ಹಲವೆಡೆ ಮಳೆ, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಗಾಳಿಯ ವೇಗ ಗಂಟೆಗೆ 55 ಕಿ.ಮೀ.ಇರಲಿದೆ ಎಂದು ಅಂದಾಜಿಸಲಾಗಿದೆ. ಬುಧವಾರ ನಗರದ ಆಯ್ದ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ. ಗುರುವಾರದಂದು ಮಳೆ ತೀವ್ರತೆಯು ಕ್ರಮೇಣ ಕಡಿಮೆಯಾಗಲಿದೆ.


ಇದನ್ನೂ ಓದಿ : ಪದವಿ ವಿದ್ಯಾರ್ಥಿಗಳಿಗೆ ರೂ.30,000 ಸ್ಕಾಲರ್‌ಶಿಪ್‌ ಪಡೆಯುವ ಅವಕಾಶ.. ಇಂದೇ ಅರ್ಜಿ ಹಾಕಿ ನೇರ ಲಿಂಕ್‌ ಇಲ್ಲಿದೆ


ಮಳೆಯ ಪರಿಣಾಮ ಎದುರಿಸಲು ಸರ್ಕಾರ ಸನ್ನದ್ದ : 
ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಮಾತನಾಡಿ, ಭಾರಿ ಮಳೆಯ ಪರಿಣಾಮ ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ. ಅಕ್ಟೋಬರ್‌ನಲ್ಲಿ ಮಳೆಯ ಪರಿಣಾಮದ ಅಧ್ಯಯನದ ಆಧಾರದ ಮೇಲೆ ನಾವು ಮೋಟಾರ್ ಪಂಪ್‌ಗಳನ್ನು ಅಳವಡಿಸಿದ್ದೇವೆ.ಸ್ವಯಂಸೇವಕರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ನಮ್ಮಲ್ಲಿ 1194 ಮೋಟಾರ್ ಪಂಪ್‌ಗಳು, 152 ಸೂಪರ್ ಸಕ್ಕರ್ ಯಂತ್ರಗಳಿವೆ ಎಂದು ಹೇಳಿದ್ದಾರೆ. ಮಳೆ ಎದುರಿಸಲು  ತಮಿಳುನಾಡು ಸರ್ಕಾರ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link -


 https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.