ಭುವನೇಶ್ವರ: ನೈರುತ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವದಿಂದ ಅಕ್ಟೋಬರ್ 23 ರಿಂದ ಅಕ್ಟೋಬರ್ 25 ರವರೆಗೆ ದಕ್ಷಿಣ ಒಡಿಶಾದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ಭಾರತದ ಹವಾಮಾನ ಇಲಾಖೆಯ ಭುವನೇಶ್ವರ ವಿಭಾಗದ ನಿರ್ದೇಶಕ ಎಚ್.ಆರ್.ಬಿಸ್ವಾಸ್ ಮಾತನಾಡಿ, "ಇಂದು ಮತ್ತು ನಾಳೆ ಒಡಿಶಾದಲ್ಲಿ ಮಿಂಚು ಮತ್ತು ಗುಡುಗು ಸಹಿತ ಮಳೆ ಬೀಳಲಿದೆ. ಅಕ್ಟೋಬರ್ 24 ಮತ್ತು 25 ರಂದು ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಉತ್ತರ ಒಡಿಶಾದ ಜೊತೆಗೆ ರಾಜ್ಯದ ದಕ್ಷಿಣ ಜಿಲ್ಲೆಗಳನ್ನೂ ಸಹ ಒಳಗೊಂಡಿದೆ" ಎಂದು ಬಿಸ್ವಾಸ್ ಹೇಳಿದರು.


ಭುವನೇಶ್ವರ ಮತ್ತು ಕಟಕ್ ನಗರಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದಿರುವ ಹವಾಮಾನ ಇಲಾಖೆ, ಮೀನುಗಾರರಿಗೆ ಯಾವುದೇ ಎಚ್ಚರಿಕೆ ನೀಡಿಲ್ಲ.