Weather Forecast Today - ಸದ್ಯ ಉತ್ತರ ಭಾರತದಲ್ಲಿ (Nort India) ಭಾರಿ ಬಿಸಿಲಿನ ವಾತಾವರಣ ಇದೆ. ರಾಷ್ಟ್ರರಾಜಧಾನಿ ದೆಹಲಿ (National Capital Delhi) ಸೇರಿದಂತೆ ದೇಶದ ಹಲವೆಡೆ ಬಿಸಿಲಿನ ಝಳಕ್ಕೆ ಜನರು ನಲುಗಿ ಹೋಗಿದ್ದಾರೆ. ಇದೀಗ ಹಲವು ರಾಜ್ಯಗಳಲ್ಲಿ ಪಾಶ್ಚಿಮಾತ್ಯ ಪ್ರಕ್ಷುಬ್ಧತೆ ಪರಿಣಾಮ ಬೀರಲಿದ್ದು, ಬಿಸಿಲಿನ ತಾಪದಿಂದ ಜನತೆಗೆ ಮುಕ್ತಿ ಸಿಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಶ್ಚಿಮ ರಾಜಸ್ಥಾನ ಮತ್ತು ಪಂಜಾಬ್‌ನ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯೂ ಇದೆ. ಮತ್ತೊಂದೆಡೆ ರಾಜಧಾನಿ ದೆಹಲಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಧೂಳಿನಿಂದ ಕೂಡಿದ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

COMMERCIAL BREAK
SCROLL TO CONTINUE READING

ವಾಯುವ್ಯ ಭಾರತದಲ್ಲಿ ಪಾಶ್ಚಿಮಾತ್ಯ ಪ್ರಕ್ಷುಬ್ಧತೆ ತನ್ನ ಪರಿಣಾಮವನ್ನು ತೋರಿಸಲಾರಂಭಿಸಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ. ಇದರೊಂದಿಗೆ ಹರ್ಯಾಣ, ಪಂಜಾಬ್ ಮತ್ತು ದೆಹಲಿಯಲ್ಲಿ ಬಿಸಿಲಿನ ತಾಪದಿಂದ ಮುಕ್ತಿಸಿಗಲಿದೆ. ಇದಲ್ಲದೆ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.


ಇದನ್ನೂ ಓದಿ-Hanuman Jayanti 2022: ಶ್ರೀಆಂಜನೇಯನ ಭಕ್ತಿಯಲ್ಲಿ ಲೀನನಾದ ಮುಸ್ಲಿಂ ವ್ಯಕ್ತಿಯ ಶ್ರದ್ಧೆಗೆ ಮಾರುಹೋದ ಜನ

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಏಪ್ರಿಲ್ 12 ಮತ್ತು 13 ರಂದು ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಹಲವು ಭಾಗಗಳಲ್ಲಿ ಗಾಳಿಯು 30 ರಿಂದ 40 ಕಿ.ಮೀ ವೇಗದಲ್ಲಿ ಬೀಸಲಿದೆ. ಇದಲ್ಲದೆ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲೂ ಕೂಡ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ. ಆದರೆ, ಇಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇಲ್ಲ.


ಇದನ್ನೂ ಓದಿ-PM Modi Alert! ಕೊರೊನಾ ಕುರಿತು ಪ್ರಧಾನಿ ಮೋದಿಯಿಂದ ಎಚ್ಚರಿಕೆ, ಸತತ ರೂಪ ಬದಲಾಯಿಸುತ್ತಿದೆ ಬಹುರೂಪಿ

ಇಲ್ಲಿ ಭಾರೀ ಮಳೆಯಾಗಬಹುದು
ಹವಾಮಾನ ಇಲಾಖೆಯ ಪ್ರಕಾರ, ಏಪ್ರಿಲ್ 13 ರಿಂದ 16 ರವರೆಗೆ ಕೇರಳ, ತಮಿಳುನಾಡು ಮತ್ತು ಪುದುಚೇರಿಯ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಬಹುದುಎನ್ನಲಾಗಿದೆ. ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯ ಪ್ರಕಾರ, ಏಪ್ರಿಲ್ 13 ಮತ್ತು 14 ರಂದು ಉತ್ತರಾಖಂಡದ ಎಂಟು ಜಿಲ್ಲೆಗಳಲ್ಲಿ ಮಳೆ ಮತ್ತು ಆಲಿಕಲ್ಲು ಮಳೆಯಾಗಬಹುದು. ಚಮೋಲಿ, ಉತ್ತರಕಾಶಿ, ತೆಹ್ರಿ, ಪೌರಿ, ಡೆಹ್ರಾಡೂನ್, ಬಾಗೇಶ್ವರ್ ಮತ್ತು ಪಿಥೋರಗಢದಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.