ನಿಧಿ (ಐಎಂಎಫ್) ಮಂಗಳವಾರ ಅಂದಾಜು ವ್ಯಕ್ತಪಡಿಸಿದೆ. ಕರೋನಾ ವೈರಸ್ ಸಾಂಕ್ರಾಮಿಕ ಮತ್ತು ವಿಶ್ವಾದ್ಯಂತ ಆರ್ಥಿಕ ಚಟುವಟಿಕೆಯ ನಿಶ್ಚಲತೆಯಿಂದಾಗಿ ಜಾಗತಿಕ ಆರ್ಥಿಕತೆಯು ತೀವ್ರ ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ ಎಂದು ಸಂಷ್ಟೇ ಹೇಳಿದೆ. ಇದು 1930ರಲ್ಲಿ ಬಂದ ಮಹಾ ಆರ್ಥಿಕ ಸಂಕಷ್ಟದ ನಂತರದ ಬಂದ ಅತಿ ದೊಡ್ಡ ಆರ್ಥಿಕ ಹಿಂಜರಿತ ಇದಾಗಿದೆ ಎಂದು ಸಂಸ್ಥೆ ಹೇಳಿದೆ.


COMMERCIAL BREAK
SCROLL TO CONTINUE READING

ಒಂದು ವೇಳೆ ಭಾರತದಲ್ಲಿ ಇದೆ ರೀತಿಯ ಆರ್ಥಿಕ ವೃದ್ಧಿ ದರ ಮುಂದುವರೆದರೆ, ಇದು 1991 ರಲ್ಲಿ ಉದಾರೀಕರಣ ಆರಂಭದ ನಂತರ ಕಂಡು ಬಂದ ಅತ್ಯಂತ ಕೆಳಮಟ್ಟದ ಬೆಳವಣಿಗೆಯ ದರ ಇದಾಗಿದೆ. ಇದರ ಹೊರತಾಗಿಯೂ ಕೂಡ ಅಂತಾರಾಷ್ಟ್ರೀಯ ಹಣಕಾಸು ನಿಧಿ ವಿಶ್ವ ಆರ್ಥಿಕತೆಯ ಬಗೆಗಿನ ತನ್ನ ವರದಿಯ ಹೊಸ ಆವೃತ್ತಿಯಲ್ಲಿ ಭಾರತವನ್ನು ಉದಯೋನ್ಮುಖ ಆರ್ಥಿಕತೆಗಳ ವಿಭಾಗದಲ್ಲಿ ಪಟ್ಟಿಮಾಡಿದೆ. 2020ರ ಆರ್ಥಿಕ ವರ್ಷದಲ್ಲಿ ಆರ್ಥಿಕ ಬೆಳವಣಿಗೆಯ ದರ ಸಕಾರಾತ್ಮಕವಾಗಿರುವ ಎರಡು ದೊಡ್ಡ ದೇಶಗಳ ಪಟ್ಟಿಯಲ್ಲಿ ಭಾರತವೂ ಕೂಡ ಒಂದಾಗಿದೆ. ಈ ಪಟ್ಟಿಯಲ್ಲಿ ಚೀನಾ ಎರಡನೇ ಸ್ಥಾನದಲ್ಲಿದ್ದು, 2020ರಲ್ಲಿ ಚೀನಾದ ಬೆಳವಣಿಗೆಯ ದರ ಶೇ. 1.2ರಷ್ಟು ಇರಲಿದೆ ಎಂದು IMF ಅಂದಾಜಿಸಿದೆ.


ಈ ಕುರಿತು ಹೇಳಿಕೆ ನೀಡಿರುವ ಐಎಂಎಫ್ ನ ಮುಖ್ಯ ಅರ್ಥ ಶಾಸ್ತ್ರಜ್ಞೆ ಗೀತಾ ಗೋಪಿನಾಥನ್, " 2020 ರಲ್ಲಿ ಜಾಗತಿಕ ಬೆಳವಣಿಗೆಯ ದರ ಶೇ. 3ರಷ್ಟು ಕುಸಿಯಲಿದೆ ಎಂದು ನಾವು ಅಂದಾಜಿಸುತ್ತಿದ್ದೇವೆ. ಜನವರಿ 2020 ರಿಂದ ಇದು ಶೇ.6.3 ರಷ್ಟು ಕುಸಿತ ಇರಲಿದೆ ಎಂದು ಹೇಳಿರುವ ಅವರು, ಕೊರೊನಾ ವೈರಸ್ ಮಹಾಮಾರಿಯಿಂದ ಎಲ್ಲ ಕ್ಷೇತ್ರಗಳ ವೃದ್ಧಿದರದ ಮೇಲೆ ವ್ಯಾಪಕ ಪರಿಣಾಮ ಉಂಟಾಗಿದೆ" ಎಂದಿದ್ದಾರೆ.


ಐಎಂಎಫ್ ವರದಿಯ ಪ್ರಕಾರ, ಅಭಿವೃದ್ಧಿ ಹೊಂದಿದ ದೇಶಗಳ ವಿಭಾಗದಲ್ಲಿ, ಹೆಚ್ಚಿನ ದೇಶಗಳ ಆರ್ಥಿಕ ಬೆಳವಣಿಗೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ. ಯುಎಸ್ (-5.9%), ಜಪಾನ್ (-5.2%), ಬ್ರಿಟನ್ (-6.5%), ಜರ್ಮನಿ (-7.0%), ಫ್ರಾನ್ಸ್ (-7.2%), ಇಟಲಿ (-9.1%) ಮತ್ತು ಸ್ಪೇನ್ (-8.0%)  ಕುಸಿತ ದಾಖಲಿಸಲಿವೆ.