ಬೆಂಗಳೂರು: ಕೈಗಾರಿಕೆಗಳಿಂದ ಉತ್ಪಾದನೆಯಾಗುವ ತ್ಯಾಜ್ಯ ವಿಲೇವಾರಿಗಾಗಿ ಉತ್ಪಾದನಾ ವಲಯದ ವಿಸ್ತೃತ ಜವಾಬ್ದಾರಿ ಕಾಯ್ದೆ [Extended producer Responsibility act] ಇದ್ದು, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ಜನ ಜಾಗೃತಿ ಮೂಡಿಸಲಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ದುರಸ್ತಿ, ನವೀಕರಣ ಮತ್ತು ಮರು ಸಂಸ್ಕರಣೆ ಕುರಿತಂತೆ ಕರಡು ಕಾರ್ಯಸೂಚಿ ಸಿದ್ಧಪಡಿಸಲು ಆಯೋಜಿಸಿರುವ ಎರಡು ದಿನಗಳ ರೀ ಕಾಮರ್ಸ್‌ ಎಕ್ಸ್‌ ಪೋ – 2023 ಅನ್ನು ಉದ್ಘಾಟಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್‌ ಪ್ರಕಾಶ್‌ ಪಾಟೀಲ್‌, ಸಣ್ಣ, ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣ ಬಸಪ್ಪ ದರ್ಶನಾಪುರ್‌ ಭಾಗವಹಿಸಿದ್ದರು.


ಇದನ್ನೂ ಓದಿ: 3ನೇ ಪಂದ್ಯದ ಗೆಲುವಿಗೆ ಕಾರಣವಾಗಿದ್ದ ಈ ಆಟಗಾರ ತಂಡದಿಂದ ಔಟ್! 4ನೇ T20ಗೆ Playing 11 ಹೀಗಿದೆ


ಸಚಿವ ಈಶ್ವರ ಖಂಡ್ರೆ ಮಾತನಾಡಿ, ಕೈಗಾರಿಕೆಗಳಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ಮರು ಸಂಸ್ಕರಣೆ ಮಾಡುವುದು ಕೈಗಾರಿಕೆಗಳ ಜವಾಬ್ದಾರಿ. ಈ ಕುರಿತು ಅಸ್ಥಿತ್ವದಲ್ಲಿರುವ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಎಲ್ಲಾ ಪಾಲುದಾರರನ್ನು ವಿಶ್ವಾಸಕ್ಕೆ ಪಡೆದು ಅರಿವು ಮೂಡಿಸಲಾಗುವುದು” ಎಂದರು.


ಬೆಂಗಳೂರು ಜಾಗತಿಕ ಐಟಿ ರಾಜಧಾನಿಯಾಗಿದ್ದು, ಇಲ್ಲಿ ಉತ್ಪಾದನೆಯಾಗುವ ಇ ತ್ಯಾಜ್ಯ ನಿವಾರಣೆ ಅತ್ಯಂತ ಮಹತ್ವದ್ದಾಗಿದೆ. ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಎದುರಾಗಲಿವೆ. ತ್ಯಾಜ್ಯ ವಿಲೇವಾರಿಗಾಗಿ ಉತ್ಪಾದನಾ ವಲಯದ ವಿಸ್ತೃತ  ಜವಾಬ್ದಾರಿ ಕಾಯ್ದೆ ಜಾರಿಗೊಳಿಸಿದರೆ ಇಂತಹ ಸಮಸ್ಯೆಗಳಿಗೆ ಸಾಕಷ್ಟು ಪರಿಹಾರ ದೊರೆಯಲಿದೆ ಎಂದು ಹೇಳಿದರು.


ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡಬೇಕಾಗಿದ್ದು, ಇದಕ್ಕಾಗಿ ವಿಶೇಷವಾಗಿ ಸಂಸ್ಕರಣಾ ವಲಯದಲ್ಲಿ ಕಾರ್ಯನಿರ್ವಹಿಸಲಿರುವ ಕೈಗಾರಿಕೆಗಳಿಗೆ ಸರ್ಕಾರ ಸೂಕ್ತ ಸಹಕಾರ ಮತ್ತು ನೆರವು ನೀಡಲಿದೆ. ಕರ್ನಾಟಕವನ್ನು ಪರಿಸರ ಸ್ನೇಹಿಯಾಗಿ ಮಾಡುವ ಜೊತೆಗೆ ಈ ವಲಯದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಜನೆಗೆ ಒತ್ತು ನೀಡಲಾಗುವುದು. ಅನೇಕ ಕೈಗಾರಿಕೋದ್ಯಮಗಳು ಒಂದುಗೂಡಿ ರೀ ಕಾಮರ್ಸ್‌ ಎಕ್ಸ್‌ ಪೋ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದರು.


ಜಗತ್ತಿನಲ್ಲಿ ಅತಿ ದೊಡ್ಡ ಸಮಸ್ಯೆ ಎಂದರೆ ಅದು ಮಾಲಿನ್ಯ. ಆಹಾರ, ನೀರು, ಗಾಳಿ ಸೇರಿ ಎಲ್ಲಾ ವಲಯಗಳು ಮಲಿನಗೊಂಡಿವೆ. ಹವಾಮಾನ ವೈಪರಿತ್ಯ ಜಾಗತಿಕ ತಾಪಮಾನಕ್ಕೂ ತ್ಯಾಜ್ಯ ಕಾರಣವಾಗಿದೆ. ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧದಿಂದ ಸಾಕಷ್ಟು ಪರಿಹಾರವಿದ್ದು, ಜೊತೆಗೆ ಇ-ತ್ಯಾಜ್ಯ ಇತ್ಯರ್ಥ ಮಾಡದಿದ್ದರೆ ಅನೇಕ ರೋಗಗಳು ಬರುತ್ತವೆ ಎಂಬುದನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದರು. 


ನಾವು ಅಭಿವೃದ್ಧಿ ಜೊತೆಗೆ ಪ್ರಕೃತಿ, ಪರಿಸರ, ಅರಣ್ಯ, ಜಲಮೂಲಗಳನ್ನೂ ಸಂರಕ್ಷಿಸಬೇಕು. ತಂತ್ರಜ್ಞಾನದ ನೆರವು ಪಡೆದು ಸಕಲ ಜೀವ, ಸಸ್ಯ ಸಂಕುಲ ಉಳಿಸಬೇಕು. ರಾಜ್ಯದ ಹಸಿರು ವ್ಯಾಪ್ತಿ ಹೆಚ್ಚಿಸಲು 5 ಕೋಟಿ ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡಿರುವುದಾಗಿ ಸಚಿವ  ತಿಳಿಸಿದರು.


"ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ", "ಸರಕುಗಳು ಮತ್ತು ವಸ್ತುಗಳ ಮರುಬಳಕೆ" ಮತ್ತು "ವೃತ್ತಾಕಾರದ ಆರ್ಥಿಕತೆ" ಇಂದಿನ ಅಗತ್ಯವಾಗಿದೆ. ಈ ಪ್ರಕೃತಿಯಲ್ಲಿ ನಿರುಪಯುಕ್ತವಾದ ವಸ್ತು ಯಾವುದೂ ಇಲ್ಲ. ಎಲ್ಲ ವಸ್ತುಗಳ ಸಮರ್ಪಕ ಬಳಕೆ ಮಾಡುವುದನ್ನು ಕಲಿತರೆ, ಪ್ರಕೃತಿ, ಪರಿಸರ ಸಂಪನ್ಮೂಲ ಉಳಿಸಬಹುದು ಎಂದರು.


ಇದನ್ನೂ ಓದಿ: 3ನೇ ಪಂದ್ಯದ ಗೆಲುವಿಗೆ ಕಾರಣವಾಗಿದ್ದ ಈ ಆಟಗಾರ ತಂಡದಿಂದ ಔಟ್! 4ನೇ T20ಗೆ Playing 11 ಹೀಗಿದೆ


ರೀ ಕಾರ್ಮಸ್‌ ಏಕ್ಸ್‌ ಪೋ ಅಯೋಜಕ ಮತ್ತು ಊರ್ಧವ್‌ ಮ್ಯಾನೇಜ್ಮೆಂಟ್‌ ಸಂಸ್ಥೆಯ ಸಂಸ್ಥಾಪಕ ವೆಂಕಟ್‌ ರೆಡ್ಡಿ ಪಾಟೀಲ್‌ ಮಾತನಾಡಿ, ಜಗತ್ತಿನಲ್ಲಿ ಮರು ಸಂಸ್ಕರಣೆ ಅತ್ಯಂತ ಅಗತ್ಯವಾಗಿರುವ ವಲಯವಾಗಿದ್ದು, ಪರಿಸರ ಸಂರಕ್ಷಣೆಗೆ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ಇದಕ್ಕಾಗಿ ಅಗತ್ಯ ಕರಡು ಕಾರ್ಯಸೂಚಿ ತಯಾರಿಸಲು  ದೇಶದ ಪ್ರಮುಖ ತಜ್ಞರು ಮತ್ತು ಕೈಗಾರಿಕೋದ್ಯಮಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.