CBSE BOARD EXAM 2020 ADMIT CARDS: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE)ನ 10ನೇ ಮತ್ತು 12 ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 15ಕ್ಕೆ ಆರಂಭಗೊಳ್ಳುತ್ತಿವೆ. ಪರೀಕ್ಷೆಯ ದಿನಾಂಕ ಸದ್ಯ ನಿಗದಿಯಾಗಿದ್ದು, ವಿದ್ಯಾರ್ಥಿಗಳು ಹಾಲ್ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಆದ್ರೆ, ಅತಿ ಶೀಘ್ರದಲ್ಲಿಯೇ ಅವರ ನಿರೀಕ್ಷೆ ಕೊನೆಗೊಳ್ಳಲಿದೆ. CBSE ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಮುಂಬರುವ ಎರಡು ದಿನಗಳಲ್ಲಿ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಬಿಡುಗಡೆಯಾಗಲಿವೆ ಎನ್ನಲಾಗಿದೆ. ಆದರೆ, ಈ ಕುರಿತು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಅಷ್ಟೇ ಅಲ್ಲ CBSE 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳಿಗೆ ಹಾಲ್ ಟಿಕೆಟ್ ಬಿಡುಗಡೆ ಮಾಡುವ ಫೈನಲ್ ಡೇಟ್ ಅನ್ನು ಕೂಡ ಇನ್ನೂ ನಿರ್ಧರಿಸಿಲ್ಲ.


COMMERCIAL BREAK
SCROLL TO CONTINUE READING

ಬಲ್ಲ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಮಂಡಳಿಯ ಅಧಿಕಾರಿಗಳಿಂದ ಈ ಬಗ್ಗೆ ಸಂಕೇತ ದೊರೆತಿದ್ದು, ಮುಂಬರುವ ಎರಡು ದಿನಗಳಲ್ಲಿ ಹಾಲ್ ಟಿಕೆಟ್ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 18 ಅಥವಾ 19 ಜನವರಿ 2020ಕ್ಕೆ ಹಾಲ್ ಟಿಕೆಟ್ ಗಳು ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಲ್ ಟಿಕೆಟ್ ಜಾರಿಯಾದ ಬಳಿಕ 10ನೇ ಮತ್ತು 12ನೇ ತರಗತಿಯ CBSE ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್ಸೈಟ್ ಆಗಿರುವ  cbse.nic.inಗೆ ಭೇಟಿ ನೀಡಿ, ಹಾಲ್ ಟಿಕೆಟ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.


ಶಾಲೆಯಲ್ಲಿಯೂ ಕೂಡ ಹಾಲ್ ಟಿಕೆಟ್ ಸಿಗಲಿವೆ
CBSE board exam 2020ಕ್ಕಾಗಿ ಸ್ಕೂಲ್ ಮುಖಾಂತರ ರಿಜಿಸ್ಟ್ರೆಶನ್ ಮಾಡಿಸಿರುವ ವಿದ್ಯಾರ್ಥಿಗಳಿಗೆ, ಸ್ಕೂಲ್ ನಲ್ಲಿಯೇ ಹಾಲ್ ಟಿಕೆಟ್ ನೀಡಲಾಗುವುದು. CBSE ಮಂಡಳಿ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಗಳನ್ನು ಶಾಲೆಯ ಪ್ರಿನ್ಸಿಪಾಲರು ಅಥವಾ ಶಾಲೆಯ ಆಡಳಿತ ಮಂಡಳಿಗೆ ಕಳುಹಿಸಿಕೊಡಲಿದೆ. ಹೀಗಾಗಿ ಈ ವಿದ್ಯಾರ್ಥಿಗಳು ಹಾಲ್ ಟಿಕೆಟ್ ಗಾಗಿ ಶಾಲೆಗೇ ಸಂಪರ್ಕಿಸಬೇಕಾಗಲಿದೆ.


ಖಾಸಗಿ ವಿದ್ಯಾರ್ಥಿಗಳು ಹೇಗೆ ಹಾಲ್ ಟಿಕೆಟ್ ಪಡೆಯಬೇಕು
ರೆಗ್ಯುಲರ್ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಖಾಸಗಿಯಾಗಿ ಪರೀಕ್ಷೆಗೆ ತಮ್ಮ ಹೆಸರು ನೊಂದಾಯಿಸಿದ ವಿದ್ಯಾರ್ಥಿಗಳು CBSE ಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಇದಕ್ಕಾಗಿ ಮೊದಲು ವಿದ್ಯಾರ್ಥಿಗಳು cbse.nic.in ನಲ್ಲಿ ಲಾಗಿನ್ ಆಗುವ ಮೂಲಕ ಅಲ್ಲಿ ನೀಡಲಾಗಿರುವ CBSE 10th/12th Admit Card 2020 download ಲಿಂಕ್ ಮೇಲೆ ಕ್ಲಿಕ್ಕಿಸಬೇಕು. ಬಳಿಕ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಲು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಇತರೆ ಮಾಹಿತಿಗಳನ್ನು ನೀಡಬೇಕು.


ಮಹತ್ವದ ದಿನಾಂಕಗಳು
10ನೇ ತರಗತಿಯ ಪರೀಕ್ಷೆಯ ದಿನಾಂಕಗಳು ಡಿಸೆಂಬರ್ 17, 2019 ಜಾರಿಗೊಳಿಸಲಾಗಿತ್ತು. 10ನೇ ತರಗತಿಯ ಮೆನ್ ಎಕ್ಸಾಮ್  ಫೆಬ್ರುವರಿ 15, 2020ಕ್ಕೆ ನಡೆಯಲಿದ್ದು, ಮಾರ್ಚ್ 20, 2020ಕ್ಕೆ ಕೊನೆಯ ವಿಷಯದ ಪರೀಕ್ಷೆ ನಡೆಯಲಿದೆ. ಇನ್ನೊಂದೆಡೆ 12ನೇ ತರೆಗತಿಯ ಪರೀಕ್ಷೆಯ ದಿನಾಂಕಗಳೂ ಕೂಡ ಡಿಸೆಂಬರ್ 17, 2019ಕ್ಕೆ ಪ್ರಕಟಗೊಂಡಿವೆ. ಪ್ರ್ಯಾಕ್ಟಿಕಲ್ ಪರೀಕ್ಷೆಗಳು ಜನವರಿ 1, 2020ಕ್ಕೆ ಆರಂಭಗೊಂಡಿವೆ. ಫೆಬ್ರುವರಿ 15ಕ್ಕೆ ಮುಖ್ಯ ಪರೀಕ್ಷೆ ಆರಂಭಗೊಳ್ಳುತ್ತಿದ್ದು, ಮಾರ್ಚ್ 30, 2020ಕ್ಕೆ ಮುಕ್ತಾಯಗೊಳ್ಳಲಿದೆ. ಬಲ್ಲ ಮೂಲಗಳ ವರದಿ ಪ್ರಕಾರ ಮೇ ತಿಂಗಳ ಮೊದಲ ವಾರದಲ್ಲಿ 12ನೇ ತರಗತಿಯ ಫಲಿತಾಂಶ ಹೊರಬೀಳಲಿದೆ ಎನ್ನಲಾಗಿದೆ.