ನವದೆಹಲಿ: ಕೇಂದ್ರ ಸರ್ಕಾರದ ಎಲ್ಲಾ ಸಿಬ್ಬಂದಿಗಳು ಇನ್ನು ಮುಂದೆ ಎಲ್ಲಾ ಕರ್ತವ್ಯದ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಚೇರಿಗೆ ಹಾಜರಾಗಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಮೂಲಕ ಕೋವಿಡ್‌ ಲಾಕ್ ಡೌನ್ ವೇಳೆ ಸೀಮಿತ ಸಂಖ್ಯೆಯಲ್ಲಿ ಹಾಜರಾತಿಗೆ ನೀಡಿದ್ದ ಅನುಮತಿಯನ್ನು ಹಿಂದಕ್ಕೆ ಪಡೆದಿದೆ. ಆದರೆ ಕಂಟೇನ್ಮೆಂಟ್‌ ಪ್ರದೇಶಗಳಲ್ಲಿ ಹಿಂದಿನಂತೆಯೇ ಸಿಬ್ಬಂದಿ ಹಾಜರಾತಿ ಮುಂದುವರೆಸಬಹುದು ಎಂದು ಸ್ಪಷ್ಟನೆ ನೀಡಿದೆ.


COMMERCIAL BREAK
SCROLL TO CONTINUE READING

ಕಳೆದ ಮೇ ತಿಂಗಳ ಬಳಿಕ ಕೇಂದ್ರ ಸರ್ಕಾರ(Central Government), ತನ್ನ ಕಚೇರಿಗಳಲ್ಲಿ ಶೇ.50ರಷ್ಟುಮಾತ್ರವೇ ಸಿಬ್ಬಂದಿ ಹಾಜರಾತಿಗೆ ಅವಕಾಶ ಕೊಟ್ಟಿತ್ತು. ಜೊತೆಗೆ ಸೋಂಕು ಪ್ರಸರಣ ತಡೆಯಲು ಬೇರೆ ಬೇರೆ ಸಮಯದಲ್ಲಿ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಿತ್ತು. ಆದರೆ ಇದೀಗ ಸೋಂಕಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ವಯೋಮಾನದ ಸಿಬ್ಬಂದಿ, ಯಾವುದೇ ವಿನಾಯಿತಿ ಇಲ್ಲದೆ ಪೂರ್ಣ ಪ್ರಮಾಣದಲ್ಲಿ ಕಚೇರಿಗೆ ಹಾಜರಾಗಬೇಕು ಎಂದು ಸೂಚಿಸಿದೆ.


ಡೈರಿ ವ್ಯವಹಾರಕ್ಕಾಗಿ 30 ಕೋಟಿ ಮೌಲ್ಯದ ಹೆಲಿಕಾಪ್ಟರ್ ಖರೀದಿಸಿದ ರೈತ..!


ಜೊತೆಗೆ ಸಭೆಗಳನ್ನು ಆದಷ್ಟುಆನ್‌ಲೈನ್(Online)‌ ಮೂಲಕವೇ ನಡೆಸಬೇಕು, ತೀರಾ ಅಗತ್ಯವಿಲ್ಲದ ಹೊರತಾಗಿ ಸಾರ್ವಜನಿಕರ ಜೊತೆಗೆ ಮುಖಾಮುಖಿ ಭೇಟಿ ತಡೆಯಬಹುದು, ಕಚೇರಿ ಕ್ಯಾಂಟಿನ್‌ ತೆರೆಯಬಹುದು ಎಂದು ತಿಳಿಸಿದೆ.


Facebook-WhatsAppಗೆ ಸುಪ್ರೀಂ ತಪರಾಕಿ, ಜನರ Privacy ಬೆಲೆ 3 ಟ್ರಿಲಿಯನ್ ಗೂ ಅಧಿಕ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.