84 ನೇ ಕಾಂಗ್ರೆಸ್ ಮಹಾಧಿವೇಶನದ ಪ್ರಮುಖ ನಿರ್ಣಯಗಳು
ನವದೆಹಲಿ : ಮೊದಲ ಬಾರಿಗೆ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ನಂತರ ನಡೆಯುತ್ತಿರುವ 84 ನೇ ಕಾಂಗ್ರೆಸ್ ಅಧಿವೇಶನದ ಎರಡನೆಯ ದಿನವಾದ ಇಂದು ಪಕ್ಷವು ಹಲವಾರು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿತು. ಈ ನಿರ್ಣಯಗಳ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಸಂಸತ್ತಿನ ಒಳಗೂ ಹೊರಗೂ ಆಡಳಿತ ಪಕ್ಷ ಬಿಜೆಪಿ ಮೇಲೆ ಚಾಟಿ ಬಿಸಲಿದೆ.
ಮಹಿಳಾ ಸುರಕ್ಷತೆ ಸವಾಲಾಗಿದ್ದು ದೌರ್ಜಜ್ಯ ತಡೆಗಟ್ಟಲು ಕೇಂದ್ರ ಸರಕಾರ ವಿಫಲ. ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಕೇಂದ್ರ ಒತ್ತು ನೀಡಬೇಕು
ದೇಶದ ಯುವ ಸಮುದಾಯವನ್ನು ಕೇಂದ್ರ ಸರಕಾರ ಕಡೆಗಣಿಸಿದೆ. ಯುವಕರಿಗೆ ಉದ್ಯೋಗ ಸೃಷ್ಟಿಯಾಗಬೇಕು
ದಲಿತರು,ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹೆಚ್ಚಾಗಿದ್ದು. ದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು ಆದ್ದರಿಂದ ದಮನಿತರಲ್ಲಿ ಆತ್ಮವಿಶ್ವಾಸ ತುಂಬಬೇಕಾಗಿದೆ.
ಬಿಜೆಪಿ, ಆರ್ ಎಸ್ ಎಸ್ ಪ್ರಜಾಪ್ರಭುತ್ವದ ಕೋಟೆಯನ್ನು ಛಿದ್ರಗೊಳಿಸುವ ಪ್ರಯತ್ನ ನಡೆಸುತ್ತಿದ್ದು. ಆದ್ದರಿಂದ ಪ್ರಜಾಪ್ರಭುತ್ವದ ಉಳುವಿಗಾಗಿ ಆಂದೋಲನ ನಡೆಸುವುದು
ಲೋಕಪಾಲರ ನೇಮಕ ವಿಚಾರದಲ್ಲಿ ಅನಗತ್ಯ ವಿಳಂಬ ಮತ್ತು ಪ್ರತಿಪಕ್ಷಗಳ ಅಭಿಪ್ರಾಯಕ್ಕೆ ಕೇಂದ್ರದ ಸರಕಾರ ಮಾನ್ಯತೆ ನೀಡದಿರುವುದು. ಭ್ರಷ್ಟಚಾರ ನಿಗ್ರಹಕ್ಕೆ ಪ್ರಬಲ ಲೋಕಪಾಲರ ನೇಮಕ, ವಿರೋಧ ಪಕ್ಷಗಳಿಗೂ ಮಾನ್ಯತೆ ನೀಡುವುದು
ಯುಪಿಎ ಅವಧಿಯ ಜನಪರ ಯೋಜನೆಗಳನ್ನು ಮೋದಿ ಸರಕಾರ ನಿರ್ಲಕ್ಷ, ಯುಪಿಎ ಅವಧಿಯ ಯೋಜನೆಗಳಿಗೆ ಒತ್ತು ನೀಡಬೇಕು.
ಆಂಧ್ರಪ್ರದೇಶಕ್ಕೆ ಯುಪಿಎ ಸರಕಾರ ಘೋಷಿಸಿದ ವಿಶೇಷ ಸ್ಥಾನಮಾನವನ್ನು ಮೋದಿ ಸರಕಾರ ಪಾಲಿಸದೇ ಆಂದ್ರ ಪ್ರದೇಶಕ್ಕೆ ಅನ್ಯಾಯ ಮಾಡಿದೆ. ವಿಶೇಷ ಸೌಲಭ್ಯದ ಬಗ್ಗೆ ಕೇಂದ್ರ ಸರ್ಕಾರವು ಗಮನಹರಿಸಬೇಕು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದೆ. ಬಾಕಿ ಉಳಿದ ಅರ್ಜಿಗಳನ್ನು ಇತ್ಯರ್ಥಪಡಿಸಿ ನ್ಯಾಯದಾನ ಶೀಘ್ರವಾಗಬೇಕು.
ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದ್ದು, ಮತ ಯಂತ್ರಗಳ ಮೇಲೆ ನಂಬಿಕೆ ಕಡಿಮೆಯಾಗಿದ್ದು ಆದ್ದರಿಂದ ಹಿಂದಿನ ವ್ಯವಸ್ಥೆಯಾದ ಬ್ಯಾಲೆಟ್ ಪೇಪರ್ ವ್ಯವಸ್ಥೆಯನ್ನು ಪುನಃ ಜಾರಿಯಾಗಬೇಕು.