ನವದೆಹಲಿ: ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ  ಇತ್ತೀಚಿಗೆ ತನ್ನ ನೂತನ ಬಾಹ್ಯಾಕಾಶ ಕಾರ್ಯಕ್ರಮಗಳಿಂದ ಜಗತ್ತಿನ ಗಮನ ಸೆಳೆದಿದೆ.ಅದು ಚಂದ್ರಯಾನ,ಮಂಗಳಯಾನ ,ಮತ್ತು ಇತ್ತೀಚಿಗೆ ಆದಿತ್ಯ-L1 ಮೂಲಕ ಸೂರ್ಯಯಾನವನ್ನು ಸಹಿತ 2019 ರಲ್ಲಿ ಕೈಗೊಳ್ಳುತ್ತಿದೆ.ಇಂಥ ನೂತನ ಕಾರ್ಯ ಚಟುವಟಿಕೆಗಳ ಮೂಲಕ ಅದು ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.ಈಗ ಅದರ ಮುಂದುವರೆದ ಭಾಗವಾಗಿ  ಇಸ್ರೋ ಮಂಗಳವಾರದಂದು ಪ್ರತಿ ತಿಂಗಳಿಗೊಂದರಂತೆ ರಾಕೆಟ್ ಉಡಾವಣೆ ಮಾಡುವ ಯೋಜನೆಯನ್ನು ಬರುವ 2018ರಿಂದ ಹಮ್ಮಿಕೊಂಡಿದೆ.


COMMERCIAL BREAK
SCROLL TO CONTINUE READING

ಈ ವಿಷಯದ ಕುರಿತು ಮಾತನಾಡಿರುವ  ಇಸ್ರೋ ಅಧ್ಯಕ್ಷ  ಎ.ಎಸ್.ಕಿರಣ್ ಕುಮಾರ್ "ನಾವು 2018 ರಿಂದ ವಿವಿದ ಉದ್ದೇಶಗಳಿಗಾಗಿ ಪ್ರತಿ ತಿಂಗಳಿಗೊಂದರಂತೆ  ಉಪಗ್ರಹಗಳನ್ನು ಭೂಕಕ್ಷೆಗೆ ಉಡಾವಣೆಯನ್ನು ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ.ಬರುವ 2018-19 ಮತ್ತು 2019-20 ರ ಹಣಕಾಸು ವರ್ಷಗಳಲ್ಲಿ ಸರ್ಕಾರದಿಂದ ಇಂಥ ಉದ್ದೇಶಗಳಿಗಾಗಿ ಹೆಚ್ಚಿನ ರೀತಿಯಲ್ಲಿ  ಹಣವನ್ನು ನಿರೀಕ್ಷಿಸುತ್ತಿದ್ದೇವೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.2017-18 ರ ಸಾಲಿನಲ್ಲಿ ಇಸ್ರೋ ಒಟ್ಟು 9000 ಕೋಟಿ ಹಣವನ್ನು ಬಜೆಟ್ ಮೂಲಕ ಪಡೆದಿತ್ತು.


ಈಗ ಈ ರೀತಿಯ ಯೋಜನೆಯ ಭಾಗವಾಗಿ  ಕಾರ್ಟೋಸ್ಯಾಟ್-2E  ದೂರ ಸಂವೇದಿ ರಾಕೆಟ್ ಜೊತೆಗೆ 28 ನ್ಯಾನೋ  ಮತ್ತು ಸಣ್ಣ ಉಪಗ್ರಹಗಳನ್ನು  ಡಿಸೆಂಬರ್ ಅಂತ್ಯ ಅಥವಾ ಜನವರಿಯ ಮೊದಲ ವಾರದಲ್ಲಿ ಉಡಾವಣೆ ಮಾಡುವ ನೀರಿಕ್ಷೆ ಎಂದು ಹೇಳಲಾಗುತ್ತಿದೆ. ಇನ್ನು ಚಂದ್ರಯಾನ-2 ಕೂಡ 2018ರ  ಪೂರ್ವಾರ್ದದಲ್ಲಿ ಉಡಾವಣೆಗೊಳ್ಳುವ ನೀರಿಕ್ಷೆ ಇದೆ. ಅಲ್ಲದೆ ಇಸ್ರೋ  ಟೀಂಇಂಡಸ್ ನಿಂದ ವಿನ್ಯಾಸ ಗೊಂಡಿರುವ 600 ಕೆ ಜಿ ಭಾರದ PSLV ಯು ಮಾರ್ಚ್ 31 ರ 2018 ರ ಒಳಗಾಗಿ ಗಗನೆಕ್ಕೆ ಹಾರಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.