ನವದೆಹಲಿ: ಇಸ್ರೋ ಮೂಲಕ ಚಂದ್ರಯಾನ ಮತ್ತು ಮಂಗಳಯಾನದ ಮೂಲಕ ಈಗಾಗಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಭಾರತ ಈಗ ಇದಕ್ಕೆ ಮತ್ತೊಂದು ಗರಿ ಎನ್ನುವಂತೆ ಸೂರ್ಯನ ಅಧ್ಯಯನಕ್ಕಾಗಿ 2019 ರಲ್ಲಿ ಉಪಗ್ರಹವನ್ನು ಕಳಿಸುವ ಮಹತ್ತರ ಯೋಜನೆಯೊಂದನ್ನು ಕೈಗೊಂಡಿದೆ.


COMMERCIAL BREAK
SCROLL TO CONTINUE READING


ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾದ  ಮೈಲಸ್ವಾಮಿ ಅಣ್ಣಾದೊರೈಈ ಕುರಿತಾಗಿ ಮಾತನಾಡುತ್ತಾ  'ಆದಿತ್ಯ-L1' ಉಪಗ್ರಹ ವು ಸೂರ್ಯನ ಕುರಿತಾಗಿ  ಅಧ್ಯಯನ ಮಾಡಲು 2020 ರ ವೇಳೆಗೆ ಉಡಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು.ಅಲ್ಲದೆ ಮುಂದಿನ ಮೂರು ತಿಂಗಳಲ್ಲಿ  ನಾಲ್ಕು ಪ್ರಮುಖ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತದೆ ಮತ್ತು ಮುಂದಿನ ಮೂರುವರ್ಷಗಳಲ್ಲಿ ಸುಮಾರು 70 ಉಪಗ್ರಹಗಳನ್ನು ಉಡಾವಣೆಗೊಳಿಸುವ ಯೋಜನೆ ಇಸ್ರೋದ ಮುಂದಿದೆ ಎಂದರು.


ಇಸ್ರೋದ ಪ್ರಕಾರ 400 ಕೆ ಜಿ ತೂಗುವ  ಆದಿತ್ಯ -1  ವಿಇಎಲ್ಸಿಯನ್ನು 800 ಕಿ ಮೀ  ಭೂ ಕಕ್ಷೆಯ ಕೆಳಭಾಗದಲ್ಲಿ ಅದನ್ನು ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿದೆ. ಈ ಉಪಗ್ರಹವು ಹ್ಯಾಲೊ ಸುತ್ತಲಿನ  ಸೂರ್ಯ-ಭೂಮಿ ವ್ಯವಸ್ಥೆಯ ಲ್ಯಾಗ್ರೆನ್ಗಿಯನ್ ಪಾಯಿಂಟ್ 1(L1)  ನಲ್ಲಿ ಅಳವಡಿಸಲಾಗುತ್ತದೆ.ಇದರಿಂದ ಸೂರ್ಯನನ್ನು  ಯಾವುದೇ ಅಡೆತಡೆಯಿಲ್ಲದೆ ಗ್ರಹಿಸಬಹುದು ಎಂದು ಹೇಳಲಾಗುತ್ತದೆ.ಆದರಿಂದ ಆದಿತ್ಯ-1 ಯೋಜನೆಯನ್ನು 'ಆದಿತ್ಯ-L1 ಮಿಷನ್' ಪರಿವರ್ತಿಸಲಾಗಿದೆ.ಇದನ್ನು ಭೂಮಿಯಿಂದ 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ಹ್ಯಾಲೊ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ.ಈ ಉಪಗ್ರಹದ ಜೊತೆಗೆ ಇನ್ನು 6 ಪೆಲೋಡಗಳನ್ನು ಉಪಗ್ರಹ ಕೊಂಡೊಯ್ಯಲಿದೆ.ಈಗಾಗಲೇ ಈ ಯೋಜನೆಗೆ ಒಪ್ಪಿಗೆ ದೊರೆತಿದ್ದು  2019-2020 ರ ವೇಳೆಗೆ ಶ್ರೀಹರಿಕೋಟಾದ PALV-XL ಇದನ್ನು ನಿರ್ಧರಿಸಲಿದೆ ಎಂದು ಇಸ್ರೋ ತಿಳಿಸಿದೆ.