ಚೆನ್ನೈ: ಕೊರೊನಾ ಮಹಾಮಾರಿಯ ಒಂದು ಅಲೆಯ ಅಟ್ಟಹಾಸಕ್ಕೆ ನಲುಗಿದ್ದ ವಿಶ್ವಕ್ಕೆ ಇದೀಗ ರೂಪಾಂತರ ವೈರಸ್ ಭೀತಿ ಆರಂಭವಾಗಿದೆ. ಈಗಾಗಲೇ ಬ್ರಿಟನ್ ನಲ್ಲಿ ಹೊಸ ಮಾದರಿಯ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಲಾಕ್ ಡೌನ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಇಂಗ್ಲೆಂಡ್ ನಿಂದ ಭಾರತಕ್ಕೆ ಬಂದ ಐವರು ಕೊರೊನಾ ಸೋಂಕು ಹೊತ್ತು ತಂದಿರುವುದು ಭಾರತದಲ್ಲಿ ಆತಂಕ ಹೆಚ್ಚಿಸಿದೆ.


COMMERCIAL BREAK
SCROLL TO CONTINUE READING

ಈಗಾಗಲೇ ಇಂಗ್ಲೆಂಡ್ ನಿಂದ ಭಾರತಕ್ಕೆ ಬಂದಿರುವ 288 ಪ್ರಯಾಣಿಕರ ಪೈಕಿ 5 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದು ರೂಪಾಂತರ ಕೊರೊನಾ ವೈರಸ್ ಇರಬಹುದೇ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಇಂಗ್ಲೆಂಡ್ ನಿಂದ ದೆಹಲಿ ಮೂಲಕವಾಗಿ ಚೆನ್ನೈಗೆ ಆಗಮಿಸಿರುವ ಓರ್ವ ವ್ಯಕ್ತಿಯಲ್ಲಿ ಇದೀಗ ಕೊರೊನಾ ರೂಪಾಂತರ ವೈರಸ್ ಪತ್ತೆಯಾಗಿದ್ದು, ಆತಂಕವನ್ನುಂಟುಮಾಡಿದೆ.


ಈ ನಡುವೆ ಇಂಗ್ಲೆಂಡ್ ನಲ್ಲಿ ಪತ್ತೆಯಾಗಿರುವ ಕೊರೊನಾ ರೂಪಾಂತರ ವೈರಸ್ ನಿಯಂತ್ರಣ ಕೈಮೀರಿ ಹೋಗಿಲ್ಲ ಸಧ್ಯ ಇರುವ ಕ್ರಮಗಳ ಮೂಲಕವೇ ನಿಯಂತ್ರಣ ಮಾಡಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.