ನವದೆಹಲಿ: ಅಮ್ಮ ಜಯಲಲಿತಾ ಅನುಪಸ್ಥಿತಿಯಲ್ಲಿ ಪ್ರಧಾನಿ ಮೋದಿಯೇ ನಮ್ಮ ಡ್ಯಾಡಿ ಎಂದು ತಮಿಳುನಾಡು ಸಚಿವ ಕೆ.ಟಿ. ರಾಜೇಂದ್ರ ಬಾಲಾಜಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ಪಕ್ಷವು ಮೋದಿ ನಾಯಕತ್ವವನ್ನು ಸ್ವೀಕರಿಸಿದೆ ಈ ಹಿನ್ನಲೆಯಲ್ಲಿ ಅವರು ಭಾರತದ ಡ್ಯಾಡಿಯಂತೆ ಎಐಎಡಿಎಂಕೆ ಸಹ ಎಂದು ತಿಳಿಸಿದ್ದಾರೆ.ಶನಿವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಅಮ್ಮ (ಜಯಲಲಿತಾ) ಜೀವಂತವಾಗಿದ್ದಾಗ, ಅವರಿಗೆ ಪಕ್ಷದ ಸಂಪೂರ್ಣ ಹಿಡಿತವಿತ್ತು, ಅವರ ನಿರ್ಧಾರಗಳು ಸ್ವಂತದ್ದಾಗಿರುತ್ತಿದ್ದವು.ಆದರೆ ಈಗ ಕಾಲ ಬದಲಾಗಿದೆ. ಈ ಹಿನ್ನಲೆಯಲ್ಲಿ ಈಗ ಅಮ್ಮನ ಅನುಪಸ್ಥಿತಿಯಲ್ಲಿ ಮೋದಿಯೇ ನಮ್ಮ ಡ್ಯಾಡಿ. ಆದ್ದರಿಂದ ನಾವು ಅವರ ನಾಯಕತ್ವವನ್ನು ಸ್ವೀಕರಿಸಿದ್ದೇವೆ "ಎಂದು ಹೇಳಿದರು.


2014 ರಲ್ಲಿ ಮೋದಿ ಅವರೊಂದಿಗೆ ಜಯಲಲಿತಾ ಅವರು ಕೈ ಜೋಡಿಸದಿದ್ದರೂ ಕೂಡ ಯಾವಾಗಲೂ ಗೌರವಿಸಿದ್ದಾರೆ. "2014 ರಲ್ಲಿ ತಮಿಳುನಾಡಿನ ಸಾಮರ್ಥ್ಯವನ್ನು ತೋರಿಸಲು ಜಯಲಲಿತಾ ಮಾತ್ರ ಏಕಾಂಗಿಯಾಗಿ ಸ್ಪರ್ಧಿಸಿದ್ದರು. ಇಲ್ಲದಿದ್ದರೆ ಅವರಿಗೆ ಪ್ರಧಾನಿ ಮೋದಿಯವರೊಂದಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಒಪ್ಪಂದ ಮಾಡಿಕೊಂಡಿವೆ. ಅದರ ಪ್ರಕಾರ ಬಿಜೆಪಿ 5 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.