ನವದೆಹಲಿ: ಕಳೆದ ಕೆಲವು ದಿನಗಳಿಂದ ದೇಶದ ರಾಜಧಾನಿಯಲ್ಲಿ ಮಾಲಿನ್ಯದಿಂದಾಗಿ ತುರ್ತು ಪರಿಸ್ಥಿತಿ ಎದುರಾಗಿದೆ. ಏತನ್ಮಧ್ಯೆ, ಸಮೀಕ್ಷೆಯೊಂದರ ಪ್ರಕಾರ, ಸುಮಾರು 40 ಪ್ರತಿಶತದಷ್ಟು ದೆಹಲಿ-ಎನ್‌ಸಿಆರ್ ಜನರು ಗಾಳಿಯ ಗುಣಮಟ್ಟದಿಂದಾಗಿ ದೆಹಲಿಯಂತಹ ನಗರದಲ್ಲಿ ವಾಸಿಸಲು ಬಯಸುವುದಿಲ್ಲ ಎಂದು ತಿಳಿದುಬಂದಿದೆ. ಅದೇ ಸಮಯದಲ್ಲಿ, 16 ಪ್ರತಿಶತದಷ್ಟು ಜನರು ವಿಷಕಾರಿ ವಾಯು ಮಾಲಿನ್ಯದ ಸಂದರ್ಭದಲ್ಲಿ ದೆಹಲಿಯಿಂದ ದೂರವಿರಲು ಬಯಸುತ್ತಾರೆ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ದೆಹಲಿ-ಎನ್‌ಸಿಆರ್‌ನಲ್ಲಿ 17,000 ಕ್ಕೂ ಹೆಚ್ಚು ಜನರ ಮೇಲೆ ನಡೆಸಿದ ಈ ಸಮೀಕ್ಷೆಯಲ್ಲಿ, ಶೇಕಡಾ 13 ರಷ್ಟು ದೆಹಲಿ ನಿವಾಸಿಗಳು ಮಾಲಿನ್ಯ ಮಟ್ಟವನ್ನು ತಡೆದುಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ನಂಬಿದ್ದಾರೆ. 31 ಪ್ರತಿಶತ ಜನರು ದೆಹಲಿ-ಎನ್‌ಸಿಆರ್‌ನಲ್ಲೇ ಉಳಿಯಲು ಬಯಸುತ್ತಾರೆ ಮತ್ತು ವಾಯು ಶುದ್ಧೀಕರಣ, ಮುಖವಾಡ(ಮಾಸ್ಕ್)ಗಳು, ಸಸ್ಯಗಳು ಇತ್ಯಾದಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಯಸುತ್ತಾರೆ. 44 ಪ್ರತಿಶತ ಜನರು ಮಾಲಿನ್ಯದಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಆದಾಗ್ಯೂ, ಆಸ್ಪತ್ರೆಗೆ ಭೇಟಿ ನೀಡಿಲ್ಲ ಎಂದು ತಿಳಿಸಿದ್ದಾರೆ.


ದೆಹಲಿ-ಎನ್‌ಸಿಆರ್ ನಿವಾಸಿಗಳಲ್ಲಿ 33 ಪ್ರತಿಶತದಲ್ಲಿ ಒಂದೆರಡು ಪ್ರತಿಶತದಷ್ಟು ಜನರು ಮಾಲಿನ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ಹೋಗಿದ್ದರೆ, 29 ಪ್ರತಿಶತದಷ್ಟು ಜನರು ದೀಪಾವಳಿಯ ಆರಂಭದಲ್ಲಿ ಮಾತ್ರ ವೈದ್ಯರನ್ನು ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. ಮಾಲಿನ್ಯವು ಅವರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇವಲ 14 ಪ್ರತಿಶತದಷ್ಟು ಜನರು ಹೇಳಿದ್ದಾರೆ.


ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ, 2019 ರ ನವೆಂಬರ್ 5 ರವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಆದೇಶಿಸಿದೆ. ನವೆಂಬರ್ 1 ರಂದು ಸುಪ್ರೀಂ ಕೋರ್ಟ್ ಸಮಿತಿ (ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ (ಇಪಿಸಿಎಲ್) ದೆಹಲಿ-ಎನ್‌ಸಿಆರ್‌ನಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿತು.+


ನವೆಂಬರ್ 4 ರಂದು ಇಪಿಸಿಎ ವರದಿಯನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಲಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ನ್ಯಾಯಪೀಠವು ಇತರ ರಾಜ್ಯಗಳಲ್ಲಿ ಕೂಳೆ ಸುಡುವುದರಿಂದ ಹೆಚ್ಚುತ್ತಿರುವ ಮಾಲಿನ್ಯಕ್ಕೆ ಸಂಬಂಧಿಸಿದ ವಿಷಯಗಳನ್ನೂ ಆಲಿಸಲಿದೆ.


ಆದರೆ ದೆಹಲಿ ಎನ್‌ಸಿಆರ್ನಲಿ ವಾಯುಮಾಲಿನ್ಯದಿಂದ ಪರಿಹಾರ ಪಡೆಯಲು ಕೆಲ ಸಮಯ ಕಾಯಲೇಬೇಕು. ಗಡಿ ಪ್ರದೇಶಗಳಾದ ಪಂಜಾಬ್, ಹರಿಯಾಣ ಮತ್ತು ದೆಹಲಿಯಲ್ಲಿ ಪ್ರತಿವರ್ಷ ಒಣಹುಲ್ಲನ್ನು ಸುಡಲಾಗುತ್ತದೆ. ಅದೇ ಹೊಗೆ ದೆಹಲಿಯ ಗಾಳಿಯಲ್ಲಿ ವಿಷದಂತೆ ಕರಗುತ್ತದೆ, ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ.


ವಿಶ್ವ AQIQ ಅಂಕಿಅಂಶಗಳ ಪ್ರಕಾರ, ಭಾರತವು ಇಂದು ವಿಶ್ವದ ಮಾಲಿನ್ಯದ ವಿಷಯದಲ್ಲಿ ಅಗ್ರಸ್ಥಾನವನ್ನು ತಲುಪಿದೆ. ಮುಂಬರುವ 48 ಗಂಟೆಗಳಲ್ಲಿ ದೆಹಲಿಗೆ ಪರಿಹಾರ ದೊರೆಯುವ ನಿರೀಕ್ಷೆಯಿಲ್ಲ, ಅಂದರೆ ದೆಹಲಿ ಗ್ಯಾಸ್ ಚೇಂಬರ್ ಆಗಿ ಉಳಿಯುತ್ತದೆ. ಜನರನ್ನು ಸಾಧ್ಯವಾದಷ್ಟು ಮನೆಯಿಂದ ಹೊರಬರದಂತೆ ಸಲಹೆ ನೀಡಲಾಗಿದೆ.