ಹರ್ಯಾಣದ ಈ ಹಳ್ಳಿಯೊಂದರಲ್ಲಿ ಹುಡುಗಿಯರು ಜೀನ್ಸ್ ಮತ್ತು ಮೊಬೈಲ್ ಬಳಸುವಂತಿಲ್ಲ
ಸೋನಿಪತ್: ಹರಿಯಾಣದ ಸೋನಿಪತ್ ಜಿಲ್ಲೆಯ ಇಸೈಪುರ ಖೆಡಿ ಗ್ರಾಮ ಪಂಚಾಯತ್ ಹುಡುಗಿಯರು ಜೀನ್ಸ್ ಧರಿಸುವುದನ್ನು ಮತ್ತು ಮೊಬೈಲ್ ಫೋನ್ ಬಳಸುವುದನ್ನು ಗ್ರಾಮದಲ್ಲಿ ನಿಷೇಧಿಸಿಸಿದೆ.
ಈ ಗ್ರಾಮದಲ್ಲಿ ಹುಡುಗಿಯರ ಅಪಹರಣದ ಪ್ರಕರಣಗಳು ವರದಿಯಾದ ಬಳಿಕ ಗ್ರಾಮ ಪಂಚಾಯತ್ ಒಂದು ವರ್ಷದ ಹಿಂದೆ ಈ ನಿಯಮವನ್ನು ಜಾರಿಗೆ ತಂದಿದೆ.ಈ ಕುರಿತಾಗಿ ANI ಗೆ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರೇಮ್ ಸಿಂಗ್ ಈ ನಿಯಮವನ್ನು ಜಾರಿಗೆ ತಂದ ನಂತರ, ಗ್ರಾಮದ ಪರಿಸ್ಥಿತಿಯು ಉತ್ತಮವಾಗಿದೆ ಎಂದು ತಿಳಿಸಿದರು.
"ನಮ್ಮ ಗ್ರಾಮದಲ್ಲಿ ಜೀನ್ಸ್ ಧರಿಸುವುದು ಮತ್ತು ಮೊಬೈಲ್ಗಳನ್ನು ದುರ್ಬಳಕೆ ಮಾಡುವುದನ್ನು ನಾವು ನಿಷೇಧಿಸಿದ್ದೇವೆ, ನಾನು ಇದರಿಂದ ಹಾಳಾಗುತ್ತಾರೆ ಎಂದು ಹೇಳುತ್ತಿಲ್ಲ ,ಆದರೆ ಅದು ಅವರಿಗೆ ಸರಿಹೊಂದುವುದಿಲ್ಲ" ಎಂದು ಸಿಂಗ್ ತಿಳಿಸಿದರು.
ಆದರೆ ಬಹುತೇಕ ಗ್ರಾಮದ ಹುಡುಗಿಯರು ನಿಯಮವನ್ನು ವಿಚಿತ್ರ ಎಂದು ಹೇಳಿದ್ದಾರೆ."ಇದು ಶುದ್ದ ತಪ್ಪು ,ಪುರುಷರ ಮನಸ್ಥಿತಿಯಲ್ಲಿ ಈ ಸಮಸ್ಯೆ ಇದೆ, ಹೊರತು ನಾವು ಧರಿಸಿರುವ ಬಟ್ಟೆಯಲ್ಲಲ್ಲ, ಧರಿಸುವ ಬಟ್ಟೆಯು ಮಹಿಳೆಯನ್ನು ಹೇಗೆ ನಿರ್ಣಯಿಸುತ್ತದೆ ಎಂದು ಗ್ರಾಮದ ನಿವಾಸಿಯೋಬ್ಬರು ಪ್ರಶ್ನಿಸಿದ್ದಾರೆ.