ನವದೆಹಲಿ: ಭಾರತದಲ್ಲಿ ಅಸಹಿಷ್ಣುತೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಪ್ರಮಾಣ ಹೆಚ್ಚುತ್ತಿದೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಕಳವಳ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಣಬ್ ಮುಖರ್ಜಿ ಫೌಂಡೇಶನ್ ಮತ್ತು ಕೇಂದ್ರ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಕೈಗಾರಿಕಾ ಅಭಿವೃದ್ಧಿ ಸಂಶೋಧನೆ (ಸಿಆರ್ಆರ್ಐಡಿ) ಅಡಿಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ " ಈ ಜಗತ್ತಿಗೆ ವಸುಧೈವ ಕುಟುಂಬಕಂ ಮತ್ತು ನಾಗರಿಕತೆಯ ಮೂಲಕ ನೀಡಿದ ಸಹಿಷ್ಣುತೆಯಂತಹ ಪರಿಕಲ್ಪನೆಯನ್ನು ನೀಡಿದಂತಹ ದೇಶದಲ್ಲಿ ಈಗ ಅಸಹಿಷ್ಣುತೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಪ್ರಮಾಣ  ಹೆಚ್ಚುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.


ಯಾವ ದೇಶದಲ್ಲಿ ಬಹುತ್ವವನ್ನು ಪಾಲನೆ ಮಾಡಲಾಗುತ್ತದೆ ಅಲ್ಲಿ ಶಾಂತಿ ಮತ್ತು ಸೌಹಾರ್ಧತೆ ಶಾಂತಿ ಮತ್ತು ಸೌಹಾರ್ಧತೆ ನೆಲೆಗೊಂಡಿರುತ್ತದೆ ಎಂದು ಅವರು ತಿಳಿಸಿದರು.ಇನ್ನು ಮುಂದುವರೆದು ಅವರು  ಸಂತೋಷವೆನ್ನುವುದು ಅದು ಮೂಲಭೂತ ಸೌಕರ್ಯ,ಸಂಪನ್ಮೂಲ ಮತ್ತು ರಕ್ಷಣೆಗಿಂತಲೂ ಪ್ರಮುಖವಾದದ್ದು ಎಂದು ಮುಖರ್ಜಿ ಅಭಿಪ್ರಾಯಪಟ್ಟರು.


ಇದೇ ವೇಳೆ ಸಿಖ್ ರ ಧರ್ಮ ಗುರು ಗುರುನಾನಕ್ ಅವರ 549 ಜಯಂತಿಯನ್ನು ಸ್ಮರಿಸುತ್ತಾ ಪ್ರಣಬ್ ಮುಖರ್ಜಿ "ನಾವು ಬದುಕುತ್ತಿರುವ ಈ ಕಾಲ ಘಟ್ಟದಲ್ಲಿ ಅವರು ಪ್ರತಿಪಾಧಿಸಿರುವ ಶಾಂತಿ ಮತ್ತು ಏಕತೆ ತತ್ವವನ್ನು ನಾವು ಸ್ಮರಿಸಬೇಕೆಂದು ತಿಳಿಸಿದರು.