ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಶಿಶು ಸಾವಿನ ಸಂಖ್ಯೆ ಏರಿಕೆಯಾಗಿದ್ದು, 2018-19ರಲ್ಲಿ 16,539 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ರಾಜ್ಯ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ಹೇಳಿದೆ.  


COMMERCIAL BREAK
SCROLL TO CONTINUE READING

ಆರೋಗ್ಯ ಸಚಿವ ಏಕ್ನಾಥ್ ಶಿಂಧೆ ಲಿಖಿತ ಉತ್ತರದಲ್ಲಿ, ಶಿಶು ಸಾವುಗಳು ಸೋಂಕು, ನೆಮೊನಿಯಾ, ಕಡಿಮೆ ತೂಕ ಮತ್ತು ಹುಟ್ಟಿನಿಂದಲೇ ಉಸಿರಾಟದ ದೋಷದಿಂದಾಗಿ ಸಂಭವಿಸಿವೆ ಮತ್ತು ಇನ್ಕ್ಯುಬೇಟರ್, ವೆಂಟಿಲೇಟರ್ ಅಥವಾ ತಜ್ಞ ವೈದ್ಯಕೀಯ ಆರೈಕೆಯಂತಹ ಸೌಲಭ್ಯಗಳ ಕೊರತೆಯಿಂದಾಗಿ ಅಲ್ಲ ಎಂದು ಹೇಳಿದರು.  


ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯ (ಎಚ್‌ಎಂಐಎಸ್) ವರದಿಯ ಪ್ರಕಾರ, 2018-19ರಲ್ಲಿ 16,539 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ಅವರು ಹೇಳಿದರು.2016-17ರಲ್ಲಿ ಶಿಶು ಸಾವಿನ ಸಂಖ್ಯೆ 10,384 ಆಗಿದ್ದರೆ, 2017-18ರಲ್ಲಿ ಇದು 13,069 ಎಂದು ಸಚಿವರು ತಿಳಿಸಿದ್ದಾರೆ. ಎಚ್‌ಎಂಐಎಸ್ ವರದಿಯ ಪ್ರಕಾರ, ಏಪ್ರಿಲ್-ಆಗಸ್ಟ್ 2017 ರಲ್ಲಿ, ಸೋಲಾಪುರ ಜಿಲ್ಲೆಯಲ್ಲಿ 309 ಶಿಶುಗಳ ಸಾವನ್ನಪ್ಪಿವೆ.


2030 ರ ವೇಳೆಗೆ ಶಿಶು ಮರಣ ಪ್ರಮಾಣವನ್ನು ಇಳಿಸುವ ಗುರಿಯನ್ನು ರಾಜ್ಯ ಸರ್ಕಾರ ನಿಗದಿಪಡಿಸಿದೆ ಎಂದು ಶಿಂಧೆ ಹೇಳಿದರು.