ನವದೆಹಲಿ: ಅಧಿಕಾರದ ದುರಹಂಕಾರವನ್ನು ಜನರು ಇಷ್ಟಪಡುವುದಿಲ್ಲ ಎಂದು ಮಹಾರಾಷ್ಟ್ರ ಚುನಾವಣಾ ಫಲಿತಾಂಶ ತೋರಿಸುತ್ತವೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಆಡಳಿತಾರೂಡ ಬಿಜೆಪಿ ಮತ್ತು ಅದರ ಮಿತ್ರ ಶಿವಸೇನೆ ಗೆಲ್ಲಲು ಸಜ್ಜಾಗಿದ್ದರೂ ಅದು ಕಡಿಮೆ ಅಂತರದಿಂದ, ಪಕ್ಷವನ್ನು ತೊರೆದು ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಮತ್ತು ಶಿವಸೇನೆಗೆ ಹಾರಿದ ಕೆಲವರನ್ನು ಹೊರತುಪಡಿಸಿ, ಜನರು ಪಕ್ಷಾಂತರಿಗಳನ್ನು ಸ್ವೀಕರಿಸಲಿಲ್ಲ ಎಂದು ಶರದ್ ಪವಾರ್ ಹೇಳಿದರು. ಈ ಚುನಾವಣೆಗಳಲ್ಲಿ ಮಹಾರಾಷ್ಟ್ರದ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿರುವ ಪವಾರ್, ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಎನ್‌ಸಿಪಿ-ಕಾಂಗ್ರೆಸ್ ಶಿವಸೇನೆಗೆ ಬೆಂಬಲ ನೀಡಬಹುದೆಂಬ ಊಹಾಪೋಹಗಳಿಗೆ ಬದ್ಧವಾಗಿಲ್ಲ ಎನ್ನಲಾಗಿದೆ.


ಈ ಕುರಿತಾಗಿ ಮಾತನಾಡಿದ ಅವರು 'ಈ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ...ಅಂತಹ ಯಾವುದೇ ಪ್ರಸ್ತಾಪವಿಲ್ಲ' ಎಂದು ಪವಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಆ ಮೂಲಕ ಅಂತಹ ಪ್ರಸ್ತಾಪದ ಪರವಾಗಿಲ್ಲ ಎಂದು ಸೂಚಿಸಿದ್ದಾರೆ. ಪಕ್ಷದ ನೂತನ ನಾಯಕತ್ವದ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಜನರು ನಮಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಹೇಳಿದ್ದಾರೆ. ಅದನ್ನು ಸ್ವೀಕರಿಸುತ್ತೇವೆ ಎಂದು ಹೇಳಿದರು.


ಮಹಾರಾಷ್ಟ್ರ ಚುನಾವಣೆಯಲ್ಲಿ ಆಡಳಿತರೂಡ ಪಕ್ಷದ ಅಭಿಯಾನವನ್ನು ಶರದ್ ಪವಾರ್ ಸಮರ್ಥವಾಗಿ ನಿಭಾಯಿಸಿದ್ದರು. ಇತ್ತೀಚಿಗೆ ಭೋರ್ಗರೆಯುವ ಮಳೆಯಲ್ಲಿ ಭಾಷಣ ಮಾಡಿದ ಪವಾರ್ ಚಿತ್ರ ಸಾಕಷ್ಟು ಸುದ್ದಿ ಮಾಡಿತ್ತು. ಎನ್‌ಸಿಪಿ ಮೊದಲ ಬಾರಿಗೆ ರಾಜ್ಯದ ಹಿರಿಯ ಮೈತ್ರಿ ಪಾಲುದಾರನಾಗಿ ಹೊರಹೊಮ್ಮಿದ್ದು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್  4 ನೇ ಸ್ಥಾನಕ್ಕೆ ಕುಸಿದಿದೆ.