ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ದಾಖಲೆಯ 72.5% ರಷ್ಟು ಮತದಾನ
ಕೋಲ್ಕತ್ತಾ: ಹಿಂಸಾಚಾರದ ಮಧ್ಯ ಪ್ರಾರಂಭವಾದ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯ ಮತದಾನ ಕೊನೆಗೂ ಮುಗಿದಿದ್ದು 72.5 ಶೇ. ಮತದಾನವಾಗಿದೆ ಎಂದು ತಿಳಿದು ಬಂದಿದೆ
ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನವು ಬಿಗಿ ಭದ್ರತೆಯ ಮಧ್ಯೆ ಸುರುವಾದರೂ ಕೂಡ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಭಾರಿ ಘರ್ಷಣೆಗಳು ಸಾವು ನೋವಿಗೆ ಕಾರಣವಾಗಿದ್ದವು, ಇದರಿಂದ ಸುಮಾರು 12 ಜನರು ಮೃತಪಟ್ಟಿದ್ದರು.
ಇಂದು ಪಶ್ಚಿಮ ಬಂಗಾಳದಲ್ಲಿ 621 ಜಿಲ್ಲೆ ಪಂಚಾಯತ್,ಆರು ಸಾವಿರ ಪಂಚಾಯತ್ ಸಮಿತಿಗಳು ಮತ್ತು ಸುಮಾರು 31 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಮತದಾನ ನಡೆಯಿತು. ಮತಗಳ ಎಣಿಕೆ ಮೇ 17 ರಂದು ನಡೆಯಲಿದೆ ಎಂದು ತಿಳಿದುಬಂದಿದೆ.