ಚಿಟಿಕೆ ಹೊಡೆಯೋದರಲ್ಲಿ ಆದಾಯ ತೆರಿಗೆ ಪಾವತಿಸಲು ಇಲ್ಲಿದೆ ವಿಧಾನ
ಈ ವಿಧಾನ ಅನುಸರಿಸಿದರೆ ನಿಮಗೆ ಯಾವುದೇ ಚಾರ್ಟರ್ಡ್ ಅಕೌಂಟ್ ಮೊರೆ ಹೋಗುವ ಅವಶ್ಯಕತೆ ಇಲ್ಲ.
ನವದೆಹಲಿ: ಇನ್ಮುಂದೆ ನೀವು ನಿಮ್ಮ ಆದಾಯ ತೆರಿಗೆಯ ಲೆಕ್ಕಾಚಾರವನ್ನು ಸ್ವತಃ ಮಾಡಬಹುದಾಗಿದೆ. ಇದಕ್ಕಾಗಿ ನಿಮಗೆ ಯಾವುದೇ ಚಾರ್ಟರ್ಡ್ ಅಕೌಂಟೆಂಟ್ ಬಳಿ ಹೋಗುವ ಅವಶ್ಯಕತೆ ಇಲ್ಲ. ಇದಕ್ಕಾಗಿ ಆದಾಯ ತೆರಿಗೆ ಇಲಾಖೆ ಒಂದು ಹೊಸ ಟೂಲ್ ಜಾರಿಗೆ ತಂದಿದ್ದು, ಈ ಟೂಲ್ ಬಳಸಿ ನೀವು ಚಿಟಿಕೆ ಹೊಡೆಯೋದ್ರಲ್ಲಿ ನಿಮ್ಮ ಆದಾಯದ ತೆರಿಗೆಯ ಲೆಕ್ಕಾಚಾರ ಮಾಡಬಹುದಾಗಿದೆ. ಆದಾಯ ತೆರಿಗೆ ಇಲಾಖೆ ಸದ್ಯ ಚಾಲ್ತಿಯಲ್ಲಿರುವ ಆದಾಯ ತೆರಿಗೆಯ ಸ್ಲಾಬ್ ಗಳ ಕುರಿತು ಜನರಲ್ಲಿರುವ ಗೊಂದಲಗಳನ್ನು ದೂರಗೊಳಿಸಲು ಹೊಸ ಸೇವೆಯೊಂದನ್ನು ಆರಂಭಿಸಿದೆ.
ಬಿಡುಗಡೆಯಾಗಿದೆ ಈ ನೂತನ ಟೂಲ್
ಈ ಕುರಿತು ಮಾಹಿತಿ ನೀಡಿರುವ ಆದಾಯ ತೆರಿಗೆ ಇಲಾಖೆ, ಸಾಮಾನ್ಯ ಜನರಿಗಾಗಿ ಅನೂಕೂಲಕರ ವಾಗಿರುವ ನೂತನ ಇ-ಕ್ಯಾಲ್ಕುಲೇಟರ್ ಅನ್ನು ಬಿಡುಗಡೆ ಮಾಡಿದೆ. ಈ ಕ್ಯಾಲ್ಕುಲೇಟರ್ ನ ಸಹಾಯದಿಂದ ಯಾವುದೇ ಸಾಮಾನ್ಯ ವ್ಯಕ್ತಿ ತಮ್ಮ ಆದಾಯ ಮತ್ತು ಉಳಿತಾಯದ ವಿವರಣೆ ನೀಡಿ, ತನ್ನ ಆದಾಯ ತೆರಿಗೆಯ ಲೆಕ್ಕಾಚಾರ ಹಾಕಬಹುದಾಗಿದೆ. ಇದಕ್ಕಾಗಿ ನೀವು ಯಾರಿಗೂ ಮತ್ತು ಯಾವುದೇ ರೀತಿಯ ಶುಲ್ಕ ಪಾವತಿಸುವ ಅಗತ್ಯತೆ ಇಲ್ಲ. ಈ ಸೇವೆಯ ಲಾಭ ಪಡೆಯಲು ನೀವು ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಬೇಕು.
ಈ ನೂತನ ಟೂಲ್ ಬಿಡುಗಡೆಗೆ ಕಾರಣ ಏನು?
ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಪ್ರಕಾರ, ಸಾಮಾನ್ಯ ಜನರು ಆದಾಯ ತೆರಿಗೆಯ ಕುರಿತು ಸದ್ಯ ಜಾರಿಯಲ್ಲಿರುವ ನೂತನ ಸ್ಲ್ಯಾಬ್ ಹಾಗೂ ವಿನಾಯ್ತಿಯ ಕುರಿತು ಹೆಚ್ಚಿಗೆ ಜಾಗರೂಕರಾಗಿಲ್ಲ. ಅಷ್ಟೇ ಅಲ್ಲ ಕೆಲ ಆದಾಯ ತೆರಿಗೆ ಪಾವತಿದಾರರು ತಾವು ನೀಡಿರುವ ತೆರಿಗೆ ಕುರಿತು ಸಂಶಯ ಹೊಂದಿರುತ್ತಾರೆ. ಇದೆ ಕಾರಣದಿಂದ ಕೇಂದ್ರ ಸರ್ಕಾರ ಸಾಮಾನ್ಯ ತೆರಿಗೆ ಪಾವತಿದಾರರಲ್ಲಿ ಜಾಗೃತೆ ಮೂಡಿಸಲು ಇ-ಕ್ಯಾಲ್ಕುಲೇಟರ್ ಬಿಡುಗಡೆ ಮಾಡಿದೆ ಎಂದಿದ್ದಾರೆ. ಈ ಕ್ಯಾಲ್ಕುಲೇಟರ್ ನಲ್ಲಿ ತಮ್ಮ ಆದಾಯ, ಆಸ್ತಿ ಹಾಗೂ ಹೂಡಿಕೆಯ ವಿವರ ನೀಡಬೇಕಾಗಲಿದೆ. ಎಲ್ಲ ಬೇಕಾದ ಮಾಹಿತಿ ಒದಗಿಸಲಿದ ಕೂಡಲೇ ವೆಬ್ಸೈಟ್ ನಿಂದ ನಿಮ್ಮ ಸರಿಯಾದ ಆದಾಯ ತೆರಿಗೆಯ ವಿವರ ಪಡೆಯಬಹುದಾಗಿದೆ.