ನವದೆಹಲಿ: ದೇಶಾದ್ಯಂತ ಇರುವ ತನ್ನ 20 ಲಕ್ಷ ತೆರಿಗೆ ಪಾವತಿದಾರರಿಗೆ ಲಾಭ ತಲುಪಿಸುವ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆ ಸುಮಾರು  62,361 ಕೋಟಿ ರೂ.ಗಳ ಟ್ಯಾಕ್ಸ್ ಹಿಂದಿರುಗಿಸಿದೆ. ಕೊರೊನಾ ಮಹಾಮಾರಿಯ ಈ ಸಂಕಷ್ಟದ ಕಾಲದಲ್ಲಿ ತೆರಿಗೆ ಪಾವತಿದಾರರಿಗೆ ಇದು ಭಾರಿ ನೆಮ್ಮದಿ ನೀಡಲಿದೆ.


COMMERCIAL BREAK
SCROLL TO CONTINUE READING

ಇದಕ್ಕೆ ಸಂಬಂಧಿಸಿದಂತೆ ಏಪ್ರಿಲ್ 8 ರಂದು ಆದೇಶ ಹೊರಡಿಸಿದ್ದ ಇಲಾಖೆ, ಕರೋನಾ ಸಾಂಕ್ರಾಮಿಕ ಸಮಯದಲ್ಲಿ ತೆರಿಗೆ ಪಾವತಿದಾರರಿಗೆ ಪರಿಹಾರ ನೀಡಲು ಬಾಕಿ ಇರುವ ಎಲ್ಲಾ ರಿಫಂಡ್ ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿತ್ತು. ಇದರ ನಂತರ, ಆದಾಯ ತೆರಿಗೆ ಇಲಾಖೆ ನಿಮಿಷಕ್ಕೆ 76 ಪ್ರಕರಣಗಳ ಬಾಕಿ ಮರುಪಾವತಿ ಮಾಡಿದೆ. ಅಂದರೆ ಏಪ್ರಿಲ್ 8 ರಿಂದ ಜೂನ್ 30 ರವರೆಗೆ 20.44 ಲಕ್ಷ ತೆರಿಗೆದಾರರಿಗೆ 62,361 ಕೋಟಿ ರೂ. ಹಣ ಮರುಪಾವತಿಸಲಾಗಿದೆ. 56 ವಾರದ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆ ಈ ಮರುಪಾವತಿಯನ್ನು ಮಾಡಿದೆ.


ಇಡೀ ತೆರಿಗೆ ಮರುಪಾವತಿ ಪ್ರಕ್ರಿಯೆಯ ವೇಳೆ ಯಾವುದೇ ರಿಫಂಡ್ ಯಾವುದೇ ಅಡೆತಡೆ ಹಾಗೂ ಫಾಲೋ ಅಪ್ ಇಲ್ಲದೆ ತೆರಿಗೆ ಪಾವತಿದಾರರ ಖಾತೆಗೆ ಮರುವರ್ಗಾಯಿಸಲಾಗಿರುವುದು ಇದರ ವಿಶೇಷ. ಇದಕ್ಕೂ ಮೊದಲು ತೆರಿಗೆ ಪಾವತಿದಾರರಿಗೆ ಈ ಕೆಲಸಕ್ಕಾಗಿ ಆದಾಯ ತೆರಿಗೆ ಇಲಾಖೆಯ ನಿರಂತರ ಚಕ್ಕರ್ ಹೊದೆಯಬೇಕಾಗುತ್ತಿತ್ತು.


ಈ ವರ್ಷ ಆದಾಯ ತೆರಿಗೆ ಇಲಾಖೆ  ಒಟ್ಟು 19,07,853 ಪ್ರಕರಣಗಳಲ್ಲಿ 23,453,57 ಕೋಟಿ ಮತ್ತು 1,36,744 ಪ್ರಕರಣಗಳಲ್ಲಿ 38,908,37 ಕಾರ್ಪೊರೇಟ್ ತೆರಿಗೆ ಮರುಪಾವತಿಯನ್ನು ನೀಡಿದೆ. ಈ ಮಹಾಮಾರಿಯ ಸಮಯದಲ್ಲಿ ತೆರಿಗೆದಾರರ ಖಾತೆಗೆ ಹಣ ಮರುಪಾವತಿಯಾಗಿರುವುದು ಒಂದು ನೆಮ್ಮದಿಯ ಸಂಗತಿಯಾಗಿದೆ.