ನವದೆಹಲಿ: ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ವಂಚನೆಗಳನ್ನು ತಡೆಯಲು ಮುಂದಾಗಿರುವ ಆದಾಯ ತೆರಿಗೆ ಇಲಾಖೆ, ಅಧಿಕೃತ ಇ-ಮೇಲ್ ಐಡಿ ಹಾಗೂ SMS ಐಡಿಗಳ ಪಟ್ಟಿ ಜಾರಿಗೊಳಿಸಿದೆ. ಈ ಕುರಿತು ತೆರಿಗೆ ಪಾವತಿದಾರರಿಗೆ ಮನವಿ ಮಾಡಿಕೊಂಡಿರುವ ಇಲಾಖೆ ಯಾವುದೇ ರೀತಿಯ ಆಮೀಷ ಒಡ್ಡುವ ಇ-ಮೇಲ್ ಹಾಗೂ SMS ಸಂದೇಶಗಳ ಕುರಿತು ಜಾಗ್ರತೆವಹಿಸುವಂತೆ ಕೇಳಿಕೊಂಡಿದೆ. ಇಲಾಖೆಯ ಅಧಿಕೃತ ಇ-ಮೇಲ್ ಹಾಗೂ SMSಗಳನ್ನು ಗುರುತಿಸುವ ಉದ್ದೇಶದಿಂದ ಇಲಾಖೆ ಈ ಪಟ್ಟಿ ಪ್ರಕಟಿಸಿದೆ. ಒಂದು ವೇಳೆ ನಿಮಗೆ ಇನ್ಕಮ್ ಟ್ಯಾಕ್ಸ್ ಇಲಾಖೆಯ ಇ-ಮೇಲ್ ಅಥವಾ SMSಗಳಿಗೆ ಹೋಲುವ ಐಡಿಗಳಿಂದ ಒಂದು ವೇಳೆ ಸಂದೇಶ ಬಂದರೆ, ಅವುಗಳನ್ನು ಪಟ್ಟಿಯಲ್ಲಿ ನಮೂದಿಸಲಾದ ಐಡಿಗಳೊಂದಿಗೆ ಹೋಲಿಸಿ, ಸಂದೇಶ ಸರಿಯಾಗಿದೆಯೋ ಅಥವಾ ಇಲ್ಲವೂ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ.


COMMERCIAL BREAK
SCROLL TO CONTINUE READING

ಶಂಕಿತ ಇ-ಮೇಲ್ ಐಡಿಗಳ ಮೇಲೆ ಕ್ಲಿಕ್ಕಿಸುವುದಕ್ಕೂ ಮುನ್ನ ಇಲಾಖೆ ಜಾರಿಗೊಳಿಸಿರುವ ಈ ಪಟ್ಟಿಯ ಜೊತೆ ಹೋಲಿಕೆ ಮಾಡಿ ಕ್ಲಿಕ್ಕಿಸುವುದು ಎಂದಿಗೂ ಉತ್ತಮ ಎಂದು ಇಲಾಖೆ ಹೇಳಿದೆ. ಅಷ್ಟೇ ಅಲ್ಲ ಜಾರಿಗೊಳಿಸಲಾದ ಪಟ್ಟಿಯಲ್ಲಿರುವ ಮೂಲದ ಮೇಲೆಯೇ ಭರವಸೆ ಇಡುವಂತೆ ಕೇಳಿಕೊಂಡಿದೆ. ಇದಕ್ಕೂ ಮೊದಲು ಸಂದಿಗ್ಧ ಇ-ಮೇಲ್ ಅಥವಾ SMS ಗಳಿಂದ ಎಸಗಲಾಗುತ್ತಿರುವುದರ ವಂಚನೆಗಳ ಕುರಿತು ಹಲವು ತೆರಿಗೆ ಪಾವತಿದಾರರು ಇಲಾಖೆಗೆ ದೂರ ನೀಡಿದ್ದರು.


ಅಧಿಕೃತ ಇ-ಮೇಲ್ ಐಡಿಗಳು ಈ ಕೆಳಗಿನಂತಿವೆ
@incometax.gov.in, @incometaxindiaefiling.gov.in, @tdscpc.gov.in, @cpc.gov.in, @insight.gov.in, @nsdl.co.in, @utiitsl.com, 


ಅಧಿಕೃತ SMS ಐಡಿಗಳು ಈ ಕೆಳಗಿನಂತಿವೆ
ITDEPT, ITDEFL, TDSCPC, CMCPCI, INSIGT, SBICMP, NSDLTN, NSDLDP, UTIPAN


ಅಧಿಕೃತ ಇಲಾಖೆಯ ವೆಬ್ ಸೈಟ್ ಗಳು ಈ ಕೆಳಗಿನಂತಿವೆ
www.incometaxindia.gov.in ಹಾಗೂ
www.incometaxindiaefiling.gov.in.
ಇದರಲ್ಲಿ ಮೊದಲ ವೆಬ್ ಸೈಟ್ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿದ್ದರೆ, ಎರಡನೇ ವೆಬ್ಸೈಟ್ ಆದಾಯ ತೆರಿಗೆ ಮರುಪಾವತಿಸುವ ವೆಬ್ಸೈಟ್ ಆಗಿದೆ.  ಇವುಗಳನ್ನು ಹೊರತುಪಡಿಸಿ, www.tdscpc.gov.in ನಲ್ಲಿ ನೀವು TDS ಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದು. www.insight.gov.in ಇದು ಕಂಪಲೈಯನ್ಸ್ ಹಾಗೂ ರಿಪೋರ್ಟಿಂಗ್ ಪೋರ್ಟಲ್ ಆಗಿದೆ. ಇದೆ ರೀತಿ ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಎರಡು ವೆಬ್ಸೈಟ್ ಗಳಿವೆ. ಅವು ಈ ಕೆಳಗಿನಂತಿವೆ,
www.nsdl.co.in
www.utiitsl.com


ಮೇಲೆ ನಮೂದಿಸಲಾದ ಇಲಾಖೆಯ ವೆಬ್ ಸೈಟ್ ನ ಹೋಲಿಕೆ ಇರುವ ಐಡಿಗಳಿಂದ ಒಂದು ವೇಳೆ ಇ-ಮೇಲ್ ಅಥವಾ SMS ಬಂದರೆ ಅವುಗಳನ್ನು webmanager@incometax.gov.in ಅಥವಾ incident@cert-in.org.in ಗೆ ಕಳುಹಿಸಿ ಕೊಡಿ. ಇನ್ಕಮ್ ಟ್ಯಾಕ್ಸ್ ಇಲಾಖೆಗೆ ಸಂಬಂಧಿಸಿದಂತೆ ನಡೆಸಲಾಗುತ್ತಿರುವ ವಂಚನೆಗಳಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂತಹ ವಂಚನೆಗಳನ್ನು ತಡೆಯಲು ಇಲಾಖೆ ಈ ಪಟ್ಟಿ ಬಿಡುಗಡೆ ಮಾಡಿದೆ.