ನವದೆಹಲಿ: ಇದೇ ಫೆಬ್ರವರಿ 1ರಂದು ಅರುಣ್​ ಜೇಟ್ಲಿ ತಮ್ಮ ಐದನೇ ಮತ್ತು ಅಧಿಕಾರಾವಧಿಯ ಕಡೆಯ ಬಜೆಟ್​ ಮಂಡನೆ ಮಾಡುತ್ತಿದ್ದು, ಪ್ರತಿ ಬಾರಿಯಂತೆ ಈ ಬಾರಿ ಕೂಡ ಸರ್ಕಾರ ಮಧ್ಯಮ ವರ್ಗದವರಿಗೆ ಹೆಚ್ಚಿನ ಪರಿಹಾರ ನೀಡುವ ನಿರೀಕ್ಷೆಯಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಆದಾಯ ತೆರ್ರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಬಹುದೆಂದು ಹೇಳಲಾಗುತ್ತಿದೆ. ಆದಾಯ ತೆರಿಗೆ ಮಿತಿ ದ್ವಿಗುಣಗೊಳ್ಳುವ ಬಗ್ಗೆ ನಿರೀಕ್ಷಿಸಲಾಗಿದ್ದು, ಸದ್ಯ ಆದಾಯ ತೆರಿಗೆ ವಿನಾಯಿತಿಯ ಮಿತಿ ರೂ 2.5 ಲಕ್ಷ ವಾರ್ಷಿಕ ವರಮಾನವಾಗಿತ್ತು. ಇದೀಗ ಈ ಮಿತಿಯನ್ನು ಐದು ಲಕ್ಷಕ್ಕೆ ಏರಿಕೆ ಮಾಡಲು ಕೇಂದ್ರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. 


COMMERCIAL BREAK
SCROLL TO CONTINUE READING

ಇದೀಗ, ಸಂಬಳದ ನೌಕರರಿಗೆ ರಿಯಾಯಿತಿ 2.5 ಲಕ್ಷದಿಂದ 5 ಲಕ್ಷ ರೂಪಾಯಿಗಳಿಗೆ ಹೆಚ್ಚಾಗಬಹುದು, ವೈದ್ಯಕೀಯ ವೆಚ್ಚಗಳು ಮತ್ತು ಟ್ರಾವೆಲ್ ಅಲೋಎನ್ಸ್ ಮಧ್ಯಮ ವರ್ಗಕ್ಕೆ ಇದು ಸ್ವಲ್ಪ ಪರಿಹಾರ ನೀಡುತ್ತದೆ. ಆದಾಯ ತೆರಿಗೆ ವಿನಾಯಿತಿಯ ಮಿತಿ ದ್ವಿಗುಣಗೊಂಡಲ್ಲಿ ಅದು ಲಕ್ಷಾಂತರ ಉದ್ಯೋಗಿಗಳಿಗೆ ಹೆಚ್ಚು ಪ್ರಯೋಜನ ಸಿಗಲಿದೆ.


ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಈ ಮಹತ್ವದ ತೆರಿಗೆ ವಿನಾಯಿತಿ ನಿರ್ಧಾರವನ್ನು ಜಾರಿಗೆ ತರುವ ಅವಕಾಶವಿದೆ. ಒಂದರ್ಥದಲ್ಲಿ ಈ ನಿರ್ಣಯ ಮತದಾರರನ್ನು ಸೆಳೆಯುವಲ್ಲಿ ಸಹಕಾರಿಯಾಗಲಿದೆ. 


ಮಧ್ಯಮ ವರ್ಗದವರನ್ನು ಮೆಚ್ಚಿಸಲು ಪ್ರಯತ್ನ:
ಮಿತಿಮೀರಿದ ಬೇಡಿಕೆಗಳನ್ನು ಮಧ್ಯಂತರ ಬಜೆಟ್ನಲ್ಲಿ ಪೂರೈಸಲಾಗದಿದ್ದರೂ, ಬಿಜೆಪಿ ಸರ್ಕಾರ ಚುನಾವಣೆಗಳ ದೃಷ್ಟಿಯಿಂದ ಮಧ್ಯಮ ವರ್ಗವನ್ನು ಮೆಚ್ಚಿಸಲು ಪ್ರಯತ್ನಿಸುತ್ತದೆ. ಅಧಿಕೃತ ಮೂಲಗಳು ತೆರಿಗೆಗಳ ಮಿತಿಯನ್ನು ಹೆಚ್ಚಿಸುವ ಬಗ್ಗೆ ಮಾಹಿತಿ ನೀಡಿವೆ. ಪರೋಕ್ಷ ತೆರಿಗೆ ಮತ್ತು ವಾಣಿಜ್ಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಅಥವಾ ವಿನಾಯಿತಿ ನೀಡದಿರಲು ಕೇಂದ್ರ ನಿರ್ಧರಿಸಿದೆ ಎನ್ನಲಾಗಿದೆ. 


ಪ್ರಸ್ತುತ ಟ್ಯಾಕ್ಸ್ ಸ್ಲ್ಯಾಬ್:
ಪ್ರಸ್ತುತ 2.5 ಲಕ್ಷ ಮತ್ತು ರೂ. 5 ಲಕ್ಷ ನಡುವಿನ ಆದಾಯ ಹೊಂದಿರುವವರಿಗೆ 5% ತೆರಿಗೆ ವಿಧಿಸಲಾಗುತ್ತಿದ್ದು, ಆದರೆ 5-10 ಲಕ್ಷದ ವಾರ್ಷಿಕ ಆದಾಯವು 20% ಮತ್ತು 10 ಲಕ್ಷಕ್ಕಿಂತ ಹೆಚ್ಚು ತೆರಿಗೆಯ ವಾರ್ಷಿಕ ಆದಾಯ 30 ಶೇ. ಇದೆ. ಈಗ 2.5 ಲಕ್ಷ ಮತ್ತು ರೂ. 5 ಲಕ್ಷ ನಡುವೆ ವಿಧಿಸಲಾಗುತ್ತಿದ್ದ 5% ಇದ್ದ ತೆರಿಗೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಿ, ರೂ. 5 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದ್ದು, ಇದರಿಂದ ಸಹಜವಾಗಿ ಈ ಮೊತ್ತವನ್ನು ಗಳಿಸುತ್ತಿರುವ ನೌಕರರಿಗೆ ಸಹಾಯವಾಗಲಿದೆ. 


ಅದೇ ಸಮಯದಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟವರು ವಾರ್ಷಿಕವಾಗಿ ರೂ. 5 ಲಕ್ಷ ಆದಾಯದ ಮೇಲೆ ತೆರಿಗೆ ರಿಯಾಯಿತಿಗಳನ್ನು ಪಡೆಯುತ್ತಾರೆ. ಇದು ಹೆಚ್ಚು ಪ್ರಯೋಜನವಾಗದಿದ್ದರೂ, ಮಧ್ಯಮ ವರ್ಗದ ಉತ್ಸಾಹವು ಹೆಚ್ಚಾಗುತ್ತದೆ.