ಒಬಿಸಿ ಮೀಸಲಾತಿ ಶೇ.37ಕ್ಕೆ ಹೆಚ್ಚಿಸಿ, ಒಟ್ಟಾರೆ ಶೇ.75 ಮೀಸಲಾತಿ ಇದ್ದರೆ ಸರಿ-ರಾಮದಾಸ್ ಅಠವಾಳೆ
ಒಬಿಸಿ ಮೀಸಲಾತಿಯನ್ನು ಸಧ್ಯವಿರುವ ಶೇ 27ರಿಂದ 37ಕ್ಕೆ ಹೆಚ್ಚಿಸಬೇಕೆಂದು ಕೇಂದ್ರ ಸಚಿವ ರಾಮದಾಸ್ ಅಠವಾಳೆ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ಒಬಿಸಿ ಮೀಸಲಾತಿಯನ್ನು ಸಧ್ಯವಿರುವ ಶೇ 27ರಿಂದ 37ಕ್ಕೆ ಹೆಚ್ಚಿಸಬೇಕೆಂದು ಕೇಂದ್ರ ಸಚಿವ ರಾಮದಾಸ್ ಅಠವಾಳೆ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಮದಾಸ್ ಅಠವಾಳೆ " ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಬಿಸಿ ಮೀಸಲಾತಿಯನ್ನು ಶೇ. 27 ರಿಂದ ಶೇ. 37ಕ್ಕೆ ಏರಿಸಬೇಕು. ತೀವ್ರ ಬಡತನ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಎಲ್ಲಾ ಸಮುದಾಯಗಳನ್ನು ಒಳಗೊಂಡಂತೆ ಓಬಿಸಿ ವ್ಯಾಪ್ತಿಯಲ್ಲಿ ಪ್ರತ್ಯೇಕ ಉಪ-ವರ್ಗ ಇರಬೇಕು.ಕೇಂದ್ರದಲ್ಲಿ ಈಗ ಒಟ್ಟಾರೆ 60 ಶೇ.ಮೀಸಲಾತಿ ಇದೆ.ಇದರಿಂದ ಅದು ಶೇ 70ಕ್ಕೆ ಏರುತ್ತದೆ. ಇನ್ನು ಹೆಚ್ಚಿನ ವರ್ಗಗಳಿಗೆ ಪ್ರಾತಿನಿಧ್ಯ ನೀಡುವ ಮೂಲಕ ಶೇ.75ರಷ್ಟು ಮೀಸಲಾತಿಯಾದರೆ ಸರಿ ಎಂದು ನಾನು ಭಾವಿಸಿದ್ದೇನೆ" ಎಂದು ಅಠವಾಳೆ ಹೇಳಿದರು.
ಇದೆ ಸಂದರ್ಭದಲ್ಲಿ ಮೆಲ್ವರ್ಗದಲ್ಲಿನ ಬಡವರಿಗೆ ನೀಡಿರುವ ಮೀಸಲಾತಿಯನ್ನು ಐತಿಹಾಸಿಕ ಎಂದು ಅಥವಾಲೆ ಬಣ್ಣಿಸಿದರು.ಅಲ್ಲದೆ ಈ ನಡೆಯನ್ನು ಸ್ವತಃ ಎನ್ಡಿಎಯಲ್ಲಿ ತಾವೇ ಮೂರು ಬಾರಿ ಪ್ರಸ್ತಾಪಿಸಿರುವುದಾಗಿ ಹೇಳಿದರು.ಈ ಸರ್ಕಾರದ ನಡೆಯ ಮೂಲಕ ಹಿಂದುಳಿದ ಮತ್ತು ಮೆಲ್ವರ್ಗದಲ್ಲಿ ಉಂಟಾಗಿರುವ ನ್ಯೂ ಸೋಶಿಯಲ್ ಇಂಜನಿಯರಿಂಗ್ ಸಂದೇಶವನ್ನು ಜನರಿಗೆ ತಿಳಿಸಲು ಈಗ ಅಥವಾಲೆ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ.