ನವದೆಹಲಿ: 2018ರ ಬಜೆಟ್ ಮಂಡನೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರ ವೇತನ ಹೆಚ್ಚಿಸಿದ್ದಾರೆ. ಹೊಸ ಪ್ರಸ್ತಾವನೆಯ ಪ್ರಕಾರ ರಾಷ್ಟ್ರಪತಿ ವೇತನ 5 ಲಕ್ಷ ರೂ., ಉಪರಾಷ್ಟ್ರಪತಿ ವೇತನ 4 ಲಕ್ಷ ರೂ. ಮತ್ತು ರಾಜ್ಯಪಾಲರ ವೇತನ 3.5 ಲಕ್ಷ ರೂ. ನೀಡಲಾಗುವುದು. ಸಂಸದರ ವೇತನವನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಹೆಚ್ಚಿಸಲಾಗುವುದು ಎಂದು ಜೇಟ್ಲಿ ತಿಳಿಸಿದರು.


COMMERCIAL BREAK
SCROLL TO CONTINUE READING

ಈ ಮೊದಲು ರಾಷ್ಟ್ರಪತಿ 1.5 ಲಕ್ಷ ರೂ., ಉಪರಾಷ್ಟ್ರಪತಿ 1.25 ಲಕ್ಷ ರೂ. ಮತ್ತು ರಾಜ್ಯಪಾಲರು 1.10 ಲಕ್ಷ ರೂ. ವೇತನ ಪಡೆಯುತ್ತಿದ್ದರು.