ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸತತ ಮೂರನೇ ದಿನವಾದ ಇಂದೂ ಸಹ ದಟ್ಟ ಹೊಗೆ ಆವರಿಸಿದೆ. ಅಲ್ಲದೆ ಇಲ್ಲಿನ ವಾಯುಗುಣ ಮಟ್ಟವು ಅಪಾಯಕಾರಿ ಹಂತವನ್ನು ತಲುಪಿದೆ.



COMMERCIAL BREAK
SCROLL TO CONTINUE READING

ಅಪಾಯಕಾರಿ ಮಾಲಿನ್ಯದ ಮಟ್ಟದಿಂದ ದೆಹಲಿಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಭಾರತೀಯ ವೈದ್ಯಕೀಯ ಸಂಘ (IMA) ಘೋಷಿಸಿರುವ ಹಿನ್ನೆಲೆಯಲ್ಲಿ, ಸೈಕ್ಲಿಂಗ್ ಮತ್ತು ಜಾಗಿಂಗ್ನಂತಹ ಹೊರಾಂಗಣ ದೈಹಿಕ ಚಟುವಟಿಕೆಗಳನ್ನು ತಪ್ಪಿಸಲು ತಜ್ಞರು ಸೂಚಿಸಿದ್ದಾರೆ.


ರಾಷ್ಟ್ರೀಯ ಹಸಿರು ನ್ಯಾಯಾಲಯವು (ಎನ್ಜಿಟಿ) ಈ ಪರಿಸ್ಥಿತಿಯನ್ನು 'ತುರ್ತುಸ್ಥಿತಿ' ಎಂದು ಕರೆದಿದೆ. 


ಈ ಮಧ್ಯೆ ದೆಹಲಿ ಸರ್ಕಾರವು ದೆಹಲಿಯಲ್ಲಿನ ಪ್ರಾಥಮಿಕ ಶಾಲಾ ಮಕ್ಕಳಿಗೆ ಬುಧವಾರ ಹಾಗೂ  ಗಾಜಿಯಾಬಾದ್ ಪ್ರದೇಶದಲ್ಲಿರುವ ಶಾಲೆಗಳಿಗೆ ಬುಧವಾರ ಮತ್ತು ಗುರುವಾರ ಎರಡು ದಿನವೂ ರಜೆ ಘೋಷಿಸಲಾಗಿದೆ.