ದೆಹಲಿಯ ಕೆಂಪು ಕೋಟೆಯಿಂದ National Digital Health Mission ಘೋಷಿಸಿದ PM Modi
Independence Day 2020:ಇಂದು ದೇಶಾದ್ಯಂತ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಂದು ಪ್ರಧಾನಿ ನರೇಂದ್ರ ಮೋದಿ ಅವರು 7ನೇ ಬಾರಿಗೆ ದೆಹಲಿಯ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದಾರೆ.
Independence Day 2020:ಇಂದು ದೇಶಾದ್ಯಂತ 74ನೇ ಸ್ವಾತಂತ್ರ್ಯ ದಿನಾಚರಣೆ(Independence Day)ಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಂದು ಪ್ರಧಾನಿ ನರೇಂದ್ರ ಮೋದಿ ಅವರು 7ನೇ ಬಾರಿಗೆ ದೆಹಲಿಯ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದಾರೆ.
ದೇಶಾದ್ಯಂತ ಮುಂದುವರೆದಿರುವ ಕರೋನಾ ವೈರಸ್ ಪ್ರಕೋಪದ ಮಧ್ಯೆ, ಈ ಬಾರಿ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಗೆ ಆಯ್ದ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಪ್ರತಿ ವರ್ಷ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸುಮಾರು 1000 ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ. ಆದರೆ ಈ ಬಾರಿ ಈ ಸಂಖ್ಯೆಯನ್ನು ಸುಮಾರು 250 ಕ್ಕೆ ಸೀಮಿತಗೊಳಿಸಲಾಗಿದೆ. ಇಂದಿನ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಯಾವ ಪ್ರಮುಖ ಪ್ರಕಟಣೆಗಳನ್ನು ಮಾಡಿದ್ದಾರೆಂದು ಎಂಬುದನ್ನು ತಿಳಿಯೋಣ ಬನ್ನಿ.
ಈ ಬಾರಿಯ ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾವಲಂಬಿ ಭಾರತಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಅಷ್ಟೇ ಅಲ್ಲ ಪ್ರಸ್ತುತ ಜಗತ್ತಿನ ಕಣ್ಣು ಭಾರತದ ಮೇಲೆ ನೆಟ್ಟಿದ್ದು, ಭಾರತ ಈ ನಿಟ್ಟಿನಲ್ಲಿ ತನ್ನ ಯಾತ್ರೆ ಆರಂಭಿಸಿದೆ ಎಂದು ಅವರು ಹೇಳಿದ್ದಾರೆ. ಶೀಘ್ರದಲ್ಲಿಯೇ ದೇಶದಲ್ಲಿ ಕೊರೊನಾ ವ್ಯಾಕ್ಸಿನ್ ಬರಲಿದೆ ಎಂದು ಘೋಷಿಸಿರುವ ಪ್ರಧಾನಿ, ಕೇವಲ ಸಂಕೇತಗಳ ಮೂಲಕ ಚೀನಾ ದೇಶದ ದುಸ್ಸಾಹಸಕ್ಕೆ ತೀಕ್ಷ್ಣ ಉತ್ತರ ನೀಡಿದ್ದಾರೆ.
ಪ್ರಧಾನಿ ಮೋದಿ ಅವರ ಭಾಷಣದ ಕೆಲ ಹೈಲೈಟ್ಸ್ ಇಲ್ಲಿದೆ
- ನಾವು ಸರ್ವೋತ್ತಮವನ್ನು ಪರಿಗಣಿಸಿ ಮುಂದಕ್ಕೆ ಸಾಗುತ್ತಿದ್ದೇವೆ.
- ಎಲ್ಲವೂ ನಡೆಯುವುದು ಸಾಮಾನ್ಯ ಕಾಲ ಹೊರಟುಹೋಗಿದೆ.
- ಶಾಂತಿ, ಏಕತೆ ಹಾಗೂ ಸದ್ಭಾವನೆ ಇದೆ ಆತ್ಮ ನಿರ್ಭರ ಭಾರತದ ಗುರುತು.
- ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭಗೊಂಡಿದೆ.
- ಕಳೆದ ಒಂದು ವರ್ಷದಿಂದ ದೇಶವನ್ನು ಬಯಲು ಶೌಚ ಮುಕ್ತವಾಗಿಸಲು ಪ್ರಯತ್ನಗಳು ನಡೆದಿವೆ.
- ಗಡಿಭಾಗದಲ್ಲಿ,NCCಯನ್ನು ವಿಸ್ತರಿಸಲಾಗುವುದು. ಪೋರ್ಟ್ ಗಳಲ್ಲಿ, ಭಾರತೀಯ ಏರ್ ಫೋರ್ಸ್ ಬೇಸ್ ಗಳ ಬಳಿ 1 ಲಕ್ಷಕ್ಕೂ ಅಧಿಕ NCC ಕೆಡೆಟ್ ಗಳಿಗೆ ಯೋಧರಿಂದ ತರಬೇತಿ ನೀಡಲಾಗುವುದು. ಇವರಲ್ಲಿ 1/3 ರಷ್ಟು ಯುವತಿಯರಿರಲಿದ್ದಾರೆ.
- ಗಡಿಭಾಗದಲ್ಲಿ ಕನೆಕ್ಟಿವಿಟಿ ಮೇಲೆ ಹೆಚ್ಚಿನ ಒತ್ತು ನೀಡಲಾಗುವುದು.
- ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರವೇ ಚುನಾವಣೆಗಳನ್ನು ಘೋಷಿಸಲಾಗುವುದು.
- ದೇಶದ ಭದ್ರತಾ ಪಡೆಗಳನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ.
- ಸೈನ್ಯವನ್ನು ಬಲಪಡಿಸಲು ಮೇಕ್ ಇನ್ ಇಂಡಿಯಾಕ್ಕೆ ಒತ್ತು
- 100 ಕ್ಕೂ ಹೆಚ್ಚು ಮಿಲಿಟರಿ ಉಪಕರಣಗಳ ಆಮದನ್ನು ನಿಷೇಧಿಸಲಾಗಿದೆ.
- ಶತಮಾನಗಳಿಂದ ನಮ್ಮ ನೆರೆರಾಷ್ಟ್ರಗಳೊಂದಿಗೆ ಹಳೆಯ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಒತ್ತು ನೀಡಲಾಗಿದೆ.
- ಕಳೆದ ಕೆಲ ದಿನಗಳ ಹಿಂದೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಸಿಕ್ಕಿರುವ ಬೆಂಬಲ ಹೆಮ್ಮೆಯ ವಿಷಯ.
- ಗಡಿಭಾಗದಲ್ಲಿ ಭಾರತೀಯ ಸೈನಿಕರೇ ಏನೆಲ್ಲಾ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ಇಡೀ ವಿಶ್ವವೇ ನೋಡಿದೆ.
-LoC ಯಿಂದ ಹಿಡಿದು LAC ವರೆಗೆ ದೇಶದ ಸಾರ್ವಭೌಮತ್ವದೆಡೆಗೆ ಕಣ್ಣೆತ್ತಿ ನೋಡಿದವರಿಗೆ ನಮ್ಮ ದೇಶದ ಸೈನಿಕರು ಅವರದ್ದೇ ಆದ ಶೈಲಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.
- ರಿನ್ಯೂಏಬಲ್ ಎನರ್ಜಿ ಕ್ಷೇತ್ರದಲ್ಲಿ ಇಂದು ಭಾರತ 5ನೇ ಸ್ಥಾನಕ್ಕೆ ತಲುಪಿದೆ.
- ಇಲೆಕ್ಟ್ರಿಕ್ ಮೊಬಿಲಿಟಿ ದಿಕ್ಕಿನಲ್ಲಿ ಕೆಲಸ ಮುಂದುವರೆದಿದೆ.
- ಇಂಧನ ಕ್ಷೇತ್ರದಲ್ಲಿ ಇಥೆನಾಲ್ ಬಳಕೆಯ ಮೇಲೆ ಒತ್ತು
- ದೇಶದ ಒಟ್ಟು 100 ನಗರಗಳನ್ನು ಮಾಲಿನ್ಯ ಮುಕ್ತಗೊಳಿಸಲು ಮಿಶನ್ ಮೋಡ್ ನಲ್ಲಿ ಕೆಲಸ ಮುಂದುವರೆದಿದೆ.
- ಪ್ರಾಜೆಕ್ಟ್ ಟೈಗರ್, ಪ್ರಾಜೆಕ್ಟ್ ಎಲಿಫೆಂಟ್ ಮುಂದುವರೆಸಲಾಗುವುದು.
- ದೇಶಾದ್ಯಂತ ಸಿಂಹಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.
- ಪ್ರಾಜೆಕ್ಟ್ ದಾಲ್ಫಿನ್ ಮೇಲೆ ಕೆಲಸ ಮುಂದುವರೆದಿದೆ. ಇದರಿಂದ ಬಯೋಡೈವರ್ಸಿಟಿಗೆ ಬಲ ಸಿಗಲಿದೆ.