Independence Day 2022: ನಾಳೆ ಕೆಂಪು ಕೋಟೆ ಮೂಲಕ ಪ್ರಧಾನಿ ಮೋದಿಯಿಂದ ಈ ಮಹತ್ವದ ಘೋಷಣೆಗಳ ಸಾಧ್ಯತೆ, ದೇಶದ ನಾಗರಿಕರಿಗೆ ನೇರ ಲಾಭ
PM Modi Speech: ಪ್ರಧಾನ ಮಂತ್ರಿಯಾದ ಬಳಿಕ ನಾಳೆ ಕೆಂಪುಕೋಟಿಯಿಂದ 9ನೇ ಬಾರಿಗೆ ನರೇಂದ್ರ ಮೋದಿ ದೇಶದ ನಗರಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. 2014ರಲ್ಲಿ ಮೊಟ್ಟ ಮೊದಲ ಬಾರಿಗೆ ಅವರು ಕೆಂಪುಕೋಟೆಯಿಂದ ಭಾಷಣ ಮಾಡಿದ್ದರು.
Independence Day Speech: ನಾಳೆ ಆಗಸ್ಟ್ 15, ಕೆಂಪು ಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಜೀವ ರಕ್ಷಕ ಔಷಧಿಗಳ ಬೆಲೆಯ ಕುರಿತು ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ . ಅಗತ್ಯದ ಮತ್ತು ದೀರ್ಘಕಾಲದವರೆಗೆ ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಿಗಳ ವೆಚ್ಚದ ಬಗ್ಗೆ ಪ್ರಧಾನಿ ಮೋದಿ ಮಹತ್ವದ ಘೋಷಣೆ ಮೊಳಗಿಸುವ ಸಾಧ್ಯತೆ ಇದೆ. ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರ 9 ನೇ ಭಾಷಣ ಇದಾಗಿರಲಿದೆ. 2014ರಲ್ಲಿ ಅವರು ಮೊಟ್ಟಮೊದಲ ಬಾರಿಗೆ ಕೆಂಪು ಕೋಟೆಯಿಂದ ಭಾಷಣವನ್ನು ಮಾಡಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.
ಔಷಧಿಗಳ ಬೆಲೆಯಲ್ಲಿ ಶೇ.70 ರಷ್ಟು ಇಳಿಕೆ ಸಾಧ್ಯತೆ
ದೊರೆತ ಮಾಹಿತಿ ಪ್ರಕಾರ ಅತ್ಯಾವಶ್ಯಕ ಔಷಧಿಗಳು ಅಂದರೆ NELM ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳಾಗುವ ಸಾಧ್ಯತೆ ಇದೆ. ಪ್ರಸ್ತುತ ಈ ಪಟ್ಟಿಯಲ್ಲಿ 355 ಔಷಧಿಗಳಿವೆ. ಇದಲ್ಲದೆ ಕಂಪನಿಗಳ ಮಾರ್ಜಿನ್ ಮೇಲೆಯೂ ಕೂಡ ಸರ್ಕಾರ ನಿಯಂತ್ರಣ ವಿಧಿಸುವ ಸಾಧ್ಯತೆ ಇದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಔಷಧಿಗಳ ಬೆಲೆಗಳು ಶೇ.70ರಷ್ಟು ಕಡಿಮೆಯಾಗಲಿವೆ. ಹಲವು ಹಂತಗಳಲ್ಲಿ ಸರ್ಕಾರ ಇದನ್ನು ಜಾರಿಗೊಳಿಸುವ ಸಾಧ್ಯತೆ ಇದೆ.
ಇದಲ್ಲದೆ ವೈದ್ಯಕೀಯ ಪ್ರವಾಸೋದ್ಯಮಕೆ ಉತ್ತೇಜನ ನೀಡಲು ಪ್ರಧಾನಿ ಮೋದಿ ಮಹತ್ವದ ಘೋಷಣೆಯನ್ನು ಮಾಡುವ ಸಾಧ್ಯತೆ ಇದೆ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಮತ್ತು ಭಾರತೀಯ ಆಯುರ್ವೇದ ಹಾಗೂ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯನ್ನು ಅರ್ಥವ್ಯವಸ್ಥೆಯ ಪ್ರಮುಖ ಅಂಶವೆಂದು ಭಾವಿಸಿ ಒಂದಿಲ್ಲ ಒಂದು ಘೋಷಣೆ ಮಾಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ Heal in India, Heal By India ಥೀಮ್ ಅನ್ನು ಆಧರಿಸಿ ಈ ಘೋಷಣೆಯಾಗುವ ಸಾಧ್ಯತೆ ಇದೆ. ಈ ಕುರಿತು ಸಮಗ್ರ ಆರ್ಥಿಕ ಚೌಕಟ್ಟನ್ನು ಸಿದ್ಧಪಡಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ-IAS Training : ಐಎಎಸ್ ತರಬೇತಿ ಎಲ್ಲಿ ನಡೆಯುತ್ತೆ? ಏನೆಲ್ಲಾ ಇರುತ್ತದೆ ಗೊತ್ತಾ?
ಸರ್ಕಾರದ ಯೋಜನೆಯ ಪ್ರಕಾರ ....
>> ಹೆಲ್ತ್ ಮಿಶನ್ ನ ಎಲ್ಲಾ ಯೋಜನೆಗಳನ್ನು ಒಂದೇ ಕೊಡೆಯ ಕೆಳಗೆ ತರುವ ಸಾಧ್ಯತೆ ಇದೆ
>> ಸಮಗ್ರ ಆರೋಗ್ಯ ಯೋಜನೆಯ ಅಡಿ ಹಳೆ ಎಲ್ಲಾ ಯೋಜನೆಗಳು ಬರಲಿವೆ.
ಇದನ್ನೂ ಓದಿ-ಆಗಸ್ಟ್ 16ಕ್ಕೆ ಬಿಹಾರ ಸರ್ಕಾರದ ನೂತನ ಸಂಪುಟ ವಿಸ್ತರಣೆ ಸಾಧ್ಯತೆ
ಸಿರಿ ಧಾನ್ಯಗಳು, ಎಣ್ಣೆಕಾಳುಗಳು ಸೇರಿದಂತೆ ಕೃಷಿ ವಲಯದಲ್ಲಿ ಸ್ವಾವಲಂಬಿಯಾಗಲು ಪ್ರಧಾನಿ ಮೋದಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆಮದು ಕಡಿಮೆ ಮಾಡಿ, ಉತ್ಪಾದನೆ ಹೆಚ್ಚಿಸುವಂತೆ ಪ್ರಧಾನಿ ಮೋದಿ ರಾಜ್ಯಗಳಿಗೆ ಕರೆ ನೀಡಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಪ್ರತ್ಯೇಕ ಬಜೆಟ್ ಘೋಷಣೆಯ ಸಾಧ್ಯತೆಯಿದೆ. ಈ ಯೋಜನೆಗೆ ಹೊಸ ಹೆಸರನ್ನೂ ಕೂಡ ಅವರು ಸೂಚಿಸಬಹುದು. ಡಿಜಿಟಲ್ ಇಂಡಿಯಾದ ಗುರಿಯನ್ನು ಪೂರೈಸಲು ಸಂಪರ್ಕ ಮತ್ತು 5G ತಂತ್ರಜ್ಞಾನದ ಅಭಿವೃದ್ಧಿಯ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡುವ ಸಾಧ್ಯತೆ ಇದೆ.ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಿಂದ 5G ಯ ಮೊದಲ ಕರೆಯನ್ನು ಸಹ ಮಾಡಬಹುದು ಎನ್ನಲಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.